ಶೀಘ್ರದಲ್ಲಿ ಬಸವೇಶ್ವರ ವೃತ್ತದಲ್ಲಿ ಬಸವಣ್ಣವರ ಕಂಚಿನ ಪ್ರತಿಮೆ ಅನಾವರಣ : ಡಾ.ಪ್ರಭಾಕರ್ ಕೋರೆ  **ಬಸವೇಶ್ವರ ವೃತ್ತದ ಉದ್ಯಾನವನದಲ್ಲಿ ಭೂಮಿ(ಗುದ್ದಲಿ) ಪೂಜೆ**

MK HasiruKranti
ಶೀಘ್ರದಲ್ಲಿ ಬಸವೇಶ್ವರ ವೃತ್ತದಲ್ಲಿ ಬಸವಣ್ಣವರ ಕಂಚಿನ ಪ್ರತಿಮೆ ಅನಾವರಣ : ಡಾ.ಪ್ರಭಾಕರ್ ಕೋರೆ  **ಬಸವೇಶ್ವರ ವೃತ್ತದ ಉದ್ಯಾನವನದಲ್ಲಿ ಭೂಮಿ(ಗುದ್ದಲಿ) ಪೂಜೆ**
WhatsApp Group Join Now
Telegram Group Join Now
ಬೆಳಗಾವಿ 19: ವಿಶ್ವಗುರು ಬಸವೇಶ್ವರರ ಪ್ರತಿಮೆಯನ್ನು ಬೆಳಗಾವಿಯ ಹೃದಯ ಭಾಗವಾಗಿರುವ ಗೋವಾವೆಸ ಸರ್ಕಲ್ ನಲ್ಲಿ ಪ್ರತಿಷ್ಠಾಪಿಸಲಾಗುವುದು. ಕಳೆದ ಮೂರು ವರ್ಷಗಳಿಂದ ಮೂರ್ತಿ ತಯಾರವಾಗಿದ್ದರು ಅನಿವಾರ್ಯ ಕಾರಣಾಂತರಗಳಿಂದ ಕಾಮಗಾರಿಯು ನೆನೆಗುದಿಗೆ ಬಿದ್ದಿತ್ತು ಈಗ ನೆರವೇರಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ ಅವರು ಹೇಳಿದರು.
ಅವರು ಬಸವೇಶ್ವರ ವೃತ್ತ ಉದ್ಯಾನವನದಲ್ಲಿ ನೂತನ ಕಂಚಿನ ಮೂರ್ತಿ ಪ್ರತಿಷ್ಠಾಪನೆಯ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಸೊಲ್ಲಾಪುರದಲ್ಲಿ 15 ಅಡಿ ಎತ್ತರದ ಬಸವಣ್ಣವರ ಕಂಚಿನ ಮೂರ್ತಿ ಸಿದ್ದಗೊಂಡಿದೆ, ಮೂರು ವರ್ಷಗಳಿಂದ ಮೂರ್ತಿಯನ್ನು ಅಲ್ಲಿಯೇ ಇಡಲಾಗಿತ್ತು ಈಗ ಕೆ ಎಲ್ ಈ ಸಂಸ್ಥೆಯು ಅಡಿಗಲ್ಲನ್ನು ನಿರ್ಮಿಸಲಿದ್ದು ಇದರ ಮೇಲೆ ಕಂಚಿನ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ ಬೆಳಗಾವಿ ಪ್ರಪ್ರಥಮ ಎತ್ತರದ ಬಸವಣ್ಣವರ ಪ್ರತಿಮೆ ಇದಾಗಲಿದೆ. ಶಾಸಕರಾದ ಅಭಯ್ ಪಾಟೀಲ್ ಅವರು ಮಹಾನಗರ ಪಾಲಿಕೆ ಎಲ್ಲರ ಪರಿಶ್ರಮದಿಂದ ಬಸವಣ್ಣವರ ಪ್ರತಿಮೆ ಸಿದ್ಧಗೊಂಡು ಈಗ ಕಾರ್ಯಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ ಇದು ಸಮಸ್ತ ಬಸವ ಅಭಿಮಾನಿಗೆ ಹೆಮ್ಮೆಯನ್ನು ಉಂಟು ಮಾಡಿದೆ ಹಾಗೂ ಹರ್ಷವನ್ನು ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಅಭಯ ಪಾಟೀಲ್, ನೂತನವಾಗಿ ಆಯ್ಕೆಯಾದ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಪ್ರೀತಿ ಕಾಮಕರ ಉಪ ಮೇಯರ್ ಹನುಮಂತ ಕೊಂಗಾಳಿ, ಮಹಾಸಭೆ ಜಿಲ್ಲಾಧ್ಯಕ್ಷ ರತ್ನಪ್ರಭಾ ಬೆಲ್ಲದ, ಹಿರಿಯ ನ್ಯಾಯವಾದಿ ಎಂ ಬಿ ಜಿರ್ಲಿ, ಚಂದ್ರಶೇಖರ ಬೆಂಬಳಗಿ, ಸೋಮಲಿಂಗ್ ಮಾವಿನಕಟ್ಟಿ, ಜ್ಯೋತಿ ಬಾದಾಮಿ, ಶಿವನಗೌಡ ಪಾಟೀಲ್, ಆರ್ ಪಿ ಪಾಟೀಲ್, ವಿ ಕೆ ಪಾಟೀಲ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article