ಪುನಿತ್ ರಾಜಕುಮಾರ ಹುಟ್ಟುಹಬ್ಬ ಅಂಗವಾಗಿ ಅನ್ನಸಂತರ್ಪಣೆ,

MK HasiruKranti
ಪುನಿತ್ ರಾಜಕುಮಾರ ಹುಟ್ಟುಹಬ್ಬ ಅಂಗವಾಗಿ ಅನ್ನಸಂತರ್ಪಣೆ,
WhatsApp Group Join Now
Telegram Group Join Now
ಕುಕನೂರು : ಪಟ್ಟಣದ ವಿರೇಶ ಇಡ್ಲಿ ಸೆಂಟರ್ ಮಾಲಕ ವಿರೇಶಗೌಡ ಅವರು ಪುನೀತ್ ರಾಜಕುಮಾರ ಅವರ 51ನೇ ಹುಟ್ಟಹಬ್ಬವನ್ನು ಮಂಗಳವಾರದಂದು ವಿಜೃಂಭಣೆಯಿಂದ ಆಚರಿಸಿದರು.
ಸತತ ಐದು ವರ್ಷಗಳಿಂದ ಪುನೀತ್ ರಾಜಕುಮಾರ ಅವರು ಹುಟ್ಟು ಹಬ್ಬವನ್ನು ತಮ್ಮ ಹೋಟೆಲ್ ನಲ್ಲಿ ಆಚರಿಸುವ ಮೂಲಕ ಅನ್ನ ಸಂತರ್ಪಣೆ ನಡೆಸುವ ಮೂಲಕ ಹುಟ್ಟುಹಬ್ಬ ಆಚರಿಸಿ ತಮ್ಮ ಅಭಿಮಾನ ಮೆರೆಯುತ್ತಿರುವುದರಿಂದ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರರಾದರು.
ಪ್ರತಿ ವರ್ಷ ಪುನೀತ್ ಹುಟ್ಟು ಹಬ್ಬದಂದು ಒಂದು ದಿನ ತಮ್ಮ ಹೋಟೆಲ್ ಬಂದ್ ಮಾಡಿ ವ್ಯಾಪಾರ ಸ್ಥಗಿತಗೊಳಿಸಿ, ಉಚಿತವಾಗಿ ಕೆಸರಿಬಾತ್, ಅನ್ನ ಸಾಂಬರ್ ವಿತರಿಸುತ್ತಿರುವ ಕಾರ್ಯ ಇತರರಿಗೆ ಮಾದರಿಯಾಗಿದೆ.
ಎಷ್ಟೋ ಜನ ಹಣವಂತರ ಮದ್ಯೆ ವಿಷೇಶ ವ್ಯಕ್ತಿತ್ವದೊಂದಿಗೆ ದಾರಾಳವಾಗಿ ಅನ್ನ ಸಂತರ್ಪಣೆ ಮಾಡುತ್ತಿರುವ ವಿರೇಶ ಇವರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತವಾಯಿತು.
WhatsApp Group Join Now
Telegram Group Join Now
Share This Article