ಮಾರ್ಚ್ 27ರಂದು ಸಂಗನಕಲ್ಲು ಗ್ರಾಮದಲ್ಲಿ ಶ್ರೀರಾಮ ರಥೋತ್ಸವ 

MK HasiruKranti
ಮಾರ್ಚ್ 27ರಂದು ಸಂಗನಕಲ್ಲು ಗ್ರಾಮದಲ್ಲಿ ಶ್ರೀರಾಮ ರಥೋತ್ಸವ 
WhatsApp Group Join Now
Telegram Group Join Now
 ಬಳ್ಳಾರಿ ಮಾರ್ಚ್ 18 : ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿರುವ ಶ್ರೀರಾಮ ದೇವಸ್ಥಾನದಲ್ಲಿ ಶ್ರೀ ರಾಮನವಮಿ ಪ್ರಯುಕ್ತ ರಥೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಡಿ ಶ್ರೀನಿವಾಸಲು ತಿಳಿಸಿದರು.
 ಅವರು ಇಂದು ನಗರದ ಪತ್ರಿಕ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಅಂದು ಮುಂಜಾನೆ ದೇವಸ್ಥಾನದಲ್ಲಿ ಗಂಗಾ ಪೂಜೆ ಅಭಿಷೇಕ ಹೋಮ ಕಲ್ಯಾಣೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗುವುದು ನಂತರ ನೆರೆದ ಭಕ್ತರಿಗೆ ಮಧ್ಯಾಹ್ನದ ಪ್ರಸಾದವನ್ನು ಏರ್ಪಡಿಸಲಾಗಿದೆ. ಸಂಜೆ 5:30ಕ್ಕೆ ಶ್ರೀರಾಮದೇವರ ಉತ್ಸವ ಮೂರ್ತಿಯೊಂದಿಗೆ ಶ್ರೀರಾಮ ರಥೋತ್ಸವವನ್ನು ನಡೆಸಲಾಗುವುದು, ಅಕ್ಕ ಪಕ್ಕದ ಗ್ರಾಮಗಳ ಶ್ರೀರಾಮ ಭಕ್ತರು ಈ ಜಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ರಥೋತ್ಸವವನ್ನು ಯಶಸ್ವಿಗೊಳಿಸಿ ಶ್ರೀರಾಮನ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
 ಈ ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಡಿ ಶ್ರೀನಿವಾಸ್ ಸದಸ್ಯರಾದ ರಮೇಶ್, ಸುರೇಶ್, ಶ್ರೀನಿವಾಸ್, ಆಂಜನೇಯ, ಮಹೇಶ್ ಸೇರಿದಂತೆ ಇತರರಿದ್ದರು.
WhatsApp Group Join Now
Telegram Group Join Now
Share This Article