ಬೈಲಹೊಂಗಲ.ತಾಲೂಕಿನ ದೊಡವಾದ ಗ್ರಾಮದ ಎ ಬಿ ಸಿ ಡಿ ಕಾರ್ಯಕ್ಷೇತ್ರದ ಶ್ರೀ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಸಂಘ ಶ್ರೀ ಪಾಂಡುರಂಗ ಶ್ರೀ ಗ್ರಾಮದೇವಿ ಜ್ಞಾನವಿಕಾಸ ಕೇಂದ್ರದಲಿ ಶ್ರೀ ಸಾಯಿ ದೀಪ ಕಣ್ಣಿನ ಆಸ್ಪತ್ರೆ ಮತ್ತು ಶ್ರೀ ಆರ್ಥೋ ಆಸ್ಪತ್ರೆ ಸಂಯೋಗದೊಂದಿಗೆ ಉಚಿತ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಶ್ರೀಮತಿ ಸಂಗೀತ ಚಂದರಗಿ,
ಜಿಲ್ಲಾ ನಿರ್ದೇಶಕರಾದ ಸತೀಶ್ ನಾಯ್ಕ, ತಾಲೂಕು ಯೋಜನಾಧಿಕಾರಿ ವಿಜಯಕುಮಾರ, ಜ್ಞಾನವಿಕಾಸ ತರಬೇತಿ ಸಂಸ್ಥೆ ಉಪನ್ಯಾಸಕರಾದ ಶ್ರೀಮತಿ ಗೀತಾ ಗ್ರಾಮ ಪಂಚಾಯತ ಮಾಜಿ ಉಪಾಧ್ಯಕ್ಷರಾದ ಶೋಭಾ ಮಡಿವಾಳರ, ಜಿಲ್ಲಾ ಸಮನ್ವಯ ವಿಮಾ ಸಮನ್ವಯ ಅಧಿಕಾರಿ ಧನಂಜಯ, ಸಾಯಿ ದೀಪ ಕಲ್ಲಿನ ಆಸ್ಪತ್ರೆ ಸಿಬ್ಬಂದಿ ಅಭಿದಲ್ಲಿ ಶ್ರೀ ಆರ್ಥೋ ಆಸ್ಪತ್ರೆಯ ವೈದ್ಯಾಧಿಕಾರಿ ಐಶ್ವರ್ಯ ರಾಜು, ತಾಲೂಕು ಜ್ಞಾನವಿಕಾಸ ಸಮನ್ವೇದಿಕಾರಿ ಶೈಲಾ ಜಕ್ಕಣ್ಣವರ ವಲಯದ ಮೇಲ್ವಿಚಾರಕರಾದ ಬಾಹುಬಲಿ ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಪ್ರಸ್ತಾವಿಕವಾಗಿ ಜಿಲ್ಲಾ ನಿರ್ದೇಶಕರಾದ ಸತೀಶ ನಾಯ್ಕ ಮಾತನಾಡಿ ಆರೋಗ್ಯದ ಬಗ್ಗೆ ಪೌಷ್ಠಿಕ ಆಹಾರದ ಬಗ್ಗೆ ಬಿಪಿ ಶುಗರ ಕಾಯಿಲೆ ತಡೆಗಟ್ಟುವ ವಿಧಾನಗಳ ಬಗ್ಗೆ ಕಣ್ಣಿನ ಶಸ್ತ್ರಚಿಕಿತ್ಸೆ ಎಲಗೋ ಕೀಲುಗಳ ಗಟ್ಟಿಗೊಳಿಸುವಲಿ ಆಹಾರ ಪದಾರ್ಥಗಳ ತಿನ್ನುವುದರ ಹಸಿ ತರಕಾರಿ ಮೊಳಕೆ ಬರಿಸಿದ ಕಾಳು , ಬಿಟಮಿನ್ ಇರುವ ಪದಾರ್ಥಗಳ ಬಳಕೆ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು.
ಕಾರ್ಯಕ್ರಮದ ನಿರೂಪಣೆ ಸೇವಾ ಪ್ರತಿನಿಧಿ ಗಂಗಮ್ಮ,ಸ್ವಾಗತ ಸೇವಾ ಪ್ರತಿನಿಧಿ ರತ್ನ,
ವಂದನೆಯನ್ನು ಸೇವಾ ಪ್ರತಿನಿಧಿ ಸವಿತಾ ನೆರವೇರಿಸಿದರು. ಈ ಸಂದರ್ಭ ಸೇವಾ ಪ್ರತಿನಿಧಿಗಳಾದ ಅನ್ನಪೂರ್ಣ, ಶಶಿಕಲಾ, ನಿರ್ಮಲ, ಶಕುಂತಲಾ ಸರ್ವ ಸದಸ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಿಸಲಾಯಿತು.


