ಬಳ್ಳಾರಿ. ಮಾ. 18.: ಡಾಕ್ಟರ್ ಪುನೀತ್ ರಾಜಕುಮಾರ್ ಮಾಡಿದ ಸಮಾಜ ಸೇವೆ ಅನನ್ಯವಾದದು ಅವರ ಆದರ್ಶವನ್ನು ನಾವು ನೀವು ಪಾಲಿಸಿ ನಮ್ಮ ಕೈಲಾದಷ್ಟು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ಸೇವೆಯನ್ನು ಮಾಡೋಣ ಎಂದು ಮಾಜಿ ನಗರ ಶಾಸಕ ಜಿ ಸೋಮಶೇಖರ್ ರೆಡ್ಡಿ ಹೇಳಿದರು.
ಅವರು ಇಂದು ನಗರದ ದೊಡ್ಡ ಮಾರುಕಟ್ಟೆ ಪ್ರದೇಶದಲ್ಲಿ ಅಖಿಲ ಕರ್ನಾಟಕ ಅಪ್ಪು ಸೇವಾ ಸಮಿತಿ ಯಿಂದ ಡಾ.ಪುನೀತ ರಾಜಕುಮಾರ ಅವರ 51ನೇ ಹುಟ್ಟು ಹಬ್ಬ ಪ್ರಯುಕ್ತ ಹಮ್ಮಿಕೊಳ್ಳಲಾದ
ರಕ್ತ ದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಪುನೀತ್ ರಾಜಕುಮಾರ ಅವರ ಸೇವೆ ಸಾಧನೆ ಅಪಾರವಾದದ್ದು ನಟನೆ ಮೂಲಕ ಕರ್ನಾಟಕದಲ್ಲಿ ಮನೆಮಾತಾದ ಅಪ್ಪು ನಮ್ಮನ್ನು ಅಗಲಿ 5 ವರ್ಷ ಕಳೆದರೂ ಅವರ ಅಭಿಮಾನಿಗಳು
ಅವರನ್ನು ಹೃದಯದಲ್ಲಿ ಇಟ್ಟು ಪೂಜೆ ಮಾಡುತ್ತಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ ಹಾಗಾಗಿ ನಾನು ಕೂಡ ರಕ್ತದಾನ ಮಾಡಿದೆ ಎಂದರು.
ಇಂದಿನ ರಕ್ತದಾನದಲ್ಲಿ ಸ್ವಯಂ ಮುಂದೆ ಬಂದು ಮಹಿಳೆಯರು ರಕ್ತದಾನ ಮಾಡುತ್ತಿರುವಾದು ಪುನೀತ್ ರಾಜಕುಮಾರ್ ಅವರ ಮೇಲೆ ಇರುವ ಅಭಿಮಾನವನ್ನು ಸೂಚಿಸುತ್ತದೆ, ಬಹುಶಃ ಸತ್ತ ಮೇಲೆ ಸಾಧನೆ ಮಾಡುವುದು ಎಂದರೆ ಇದೇ ಇರಬಹುದು ಎಂದು ಸೇವಾ ಸಮಿತಿಯ ಗೌರವ ಅಧ್ಯಕ್ಷರಾದ ಕಪ್ಪಗಲ್ಲು ಬಿ ಚಂದ್ರಶೇಖರ ಆಚಾರ್ ತಿಳಿಸಿದರು ಸ್ಥಾಪಕ ಅಧ್ಯಕ್ಷ ಜೆ.ಪಿ ಮಂಜುನಾಥ ತುಂಬಾ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದರು.
ಈ ಸಂದರ್ಭದಲ್ಲಿ ಮೋತ್ಕರ ಶ್ರೀನಿವಾಸ ಗುಂಡಿಗಂಟಿ ಹನುಮಂತಪ್ಪ ಕೇದಾರನಾಥ ಮುಂಡಾಸದ ಮಲ್ಲಿ, ಕೆ.ಎ.ವೇಮಣ್ಣ ಅಧ್ಯಕ್ಷ ರವಿ ಅಪ್ಪು.ಸುಜೀತಕುಮಾರ್ ಲಕ್ಷ್ಮೀ ರೆಡ್ಡಿ ಚಂದ್ರಶೇಖರ ಸೇರಿದಂತೆ ಹಲವಾರು ಜನ ಅಪ್ಪು ಅಭಿಮಾನಿಗಳು ಹಾಜರಿದ್ದು ರಕ್ತದಾನ ಮಾಡಿದರು.


