40 ವರ್ಷದಿಂದ ವಾಸಿಸುವ ನಮಗೆ ಹಕ್ಕುಪತ್ರ ನೀಡಿ : ಬಂಡಿಹಟ್ಟಿ ಪ್ರದೇಶದ  ನಿವಾಸಿಗಳ ಮನವಿ 

MK HasiruKranti
40 ವರ್ಷದಿಂದ ವಾಸಿಸುವ ನಮಗೆ ಹಕ್ಕುಪತ್ರ ನೀಡಿ : ಬಂಡಿಹಟ್ಟಿ ಪ್ರದೇಶದ  ನಿವಾಸಿಗಳ ಮನವಿ 
WhatsApp Group Join Now
Telegram Group Join Now
40 ವರ್ಷದಿಂದ ವಾಸಿಸುವ ನಮಗೆ ಹಕ್ಕುಪತ್ರ ನೀಡಿ : ಬಂಡಿಹಟ್ಟಿ ಪ್ರದೇಶದ  ನಿವಾಸಿಗಳ ಮನವಿ
ಬಳ್ಳಾರಿ. ಮಾ. 17 :  ನಗರದ  ಕೌಲ್ ಬಜಾರ್ ವ್ಯಾಪ್ತಿಯ, ಬಂಡಿಹಟ್ಟಿ, ವಾರ್ಡ್
ನಂ.30ರಲ್ಲಿ, ಸರ್ವೇ ನಂ.326/ಪಿ ರಲ್ಲಿ ಸರ್ಕಾರಿ ಜಮೀನುನಲ್ಲಿ ಸುಮಾರು 40 ವರ್ಷಗಳಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ
ಮತ್ತು ಇತರ ಹಿಂದುಳಿದ ಜನಾಂಗಕ್ಕೆ ಸೇರಿದ ಸಮುದಾಯದವರು ವಾಸಿಸುತ್ತಿದ್ದು ನಮಗೆ ಈ ಸ್ಥಳದ ಹಕ್ಕು ಪತ್ರವನ್ನು ನೀಡಬೇಕು ಎಂದು ಬಂಡಿಹಟ್ಟಿ ಪ್ರದೇಶದ ಸರ್ಕಾರಿ ಜಮೀನಿನಲ್ಲಿ ವಾಸಿಸುವ ಸಮುದಾಯದವರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
 ಅವರು ಇಂದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಾನಿಕ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ, ಈ ಪ್ರದೇಶದಲ್ಲಿ ನಾವುಗಳು ಸುಮಾರು 40 50 ವರ್ಷದಿಂದ ವಾಸಿಸುತ್ತಿದ್ದು ಇದರ ಪುರಾವೆಯಾಗಿ ನಮಗೆ ಸರ್ಕಾರದ ವತಿಯಿಂದ  ಗುರುತಿನ ಚೀಟಿ(Voter ID)
ಆಧಾರ್ ಕಾರ್ಡ್, ಪಡಿತರ ಚಿಟಿ (Ration Card) ಇದೇ ವಿಳಾಸದಲ್ಲಿ ನೀಡಲಾಗಿದೆ . ನಮಗೆ ಕೆಲ ವರ್ಷಗಳ ಹಿಂದೆ ಸರ್ಕಾರ
ಆದೇಶದಂತೆ ಅಕ್ರಮ-ಸಕ್ರಮ ಯೋಜನೆಯ ಅಡಿಯಲ್ಲಿ ಸಮೀಕ್ಷೆ ನಡೆಸಿ, ಇಲ್ಲಿ ವಾಸ ಮಾಡುತ್ತಿರುವ ನಮಗೆ ಸರ್ಕಾರದಿಂದ ಹಕ್ಕು ಪತ್ರವು ಸಹ ನೀಡುವ ಪ್ರಕ್ರಿಯೆ ಕೈಗೊಳ್ಳಲಾಗಿತ್ತು ಮತ್ತು ಈ ಸಂದರ್ಭದಲ್ಲಿ ಕೆಲವರಿಗೆ ಹಕ್ಕು ಪತ್ರವನ್ನು ನೀಡಲಾಯಿತು ಇನ್ನೂ ಕೆಲವರಿಗೆ ಹಕ್ಕು
ಪತ್ರವನ್ನು ನೀಡುವ ಸಮಯದಲ್ಲಿ ಸದರಿ ಸರ್ಕಾರಿ ಸ್ಥಳದಲ್ಲಿರುವ
 ದರ್ಗಾ ಕಮಿಟಿಯವರು ಅಡ್ಡಿಪಡಿಸಿದ್ದಾರೆ.
 ಇದು ಅವರ ಆಸ್ತಿಯಲ್ಲ ಅವರು ಸಹ ಸರ್ಕಾರದ ಸ್ಥಳದಲ್ಲಿ ಇದ್ದಾರೆ ನಾವು ಸಹ ಸರ್ಕಾರ ಸ್ಥಳದಲ್ಲಿ ವಾಸಿಸುತ್ತಿದ್ದೇವೆ ಆದರೆ ಕೆಲವೊಂದು ಜನರು ಮತ್ತು ರಾಜಕೀಯ ನಾಯಕರು ನಮಗೆ ಈ ಸ್ಥಳ ಬಿಟ್ಟು ಹೋಗುವಂತೆ ಒತ್ತಡ ಹಾಕಿ ಭಯಭೀತಗೊಳಿಸುತ್ತಿದ್ದಾರೆ ಎಂದು ದೂರಲಾಗಿದೆ.
 ಇತರ ಹಿಂದುಳಿದ ಜನಾಂಗಕ್ಕೆ ಸೇರಿದ
ನಮಗೆ ಬೇರೆ ಕಡೆ ಯಾವುದೇ ಮನೆಯಾಗಲಿ, ಸ್ಥಳವಾಗಲಿ ಇಲ್ಲ. ನಮ್ಮ ಮಕ್ಕಳು ಸಹಾ ಇಲ್ಲಯೇ ವಿದ್ಯಾಭ್ಯಾಸ
ಮಾಡುತ್ತಿದ್ದು. ಇಲ್ಲಿ ವಾಸ ಮಾಡುತ್ತಿರುವ ಸಾರ್ವಜನಿಕರು ಎಲ್ಲಾರೂ ಕಡು ಬಡವರಾಗಿದ್ದು, ಸದರಿ ನಾವು ವಾಸ ಮಾಡ
ಜಾಗಕ್ಕೆ ದರ್ಗಾ ಕಮಿಟಿಗೆ (Dargah Community) ಸೇರಿದ ಕೆಲವು ವ್ಯಕ್ತಿಗಳು ತೊಂದರೆಯನ್ನು ಕೊಡುತ್ತಿದ್ದು,
ನಮಗೆ ನೆಮ್ಮದಿ ಇಲ್ಲದಂತೆಯಾಗಿದೆ.
ಆದ ಕಾರಣ ಈ ಕೂಡಲೇ ಇಲ್ಲಿ ವಾಸ ಮಾಡುತ್ತಿರುವ ಜನಾಂಗಕ್ಕೆ ಸೂಕ್ತ ರಕ್ಷಣೆ ಮತ್ತು ವ್ಯವಸ್ಥೆಯನ್ನು ಒದಗಿಸಬೇಕೆಂದು
 ಮನವಿ ಪತ್ರದಲ್ಲಿ ಅರಿಕೆ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಮತಾ ಸೈನಿಕ ದಾಳದ ರಾಜ್ಯ ಅಧ್ಯಕ್ಷ ಪೃಥ್ವಿರಾಜ್ ಸೇರಿದಂತೆ ಆ ಸ್ಥಳದಲ್ಲಿ ವಾಸಿಸುವ ಹಲವಾರು ಜನ ಪುರುಷರು ಮಹಿಳೆಯರು ಇದ್ದರು.
WhatsApp Group Join Now
Telegram Group Join Now
Share This Article