ಸಾಮಾಜಿಕ ಸೇವೆಗಾಗಿ ಸವಿತಾ ಹೆಬ್ಬಾರ್ ಅವರಿಗೆ ‘ನಾರಿ ಶಕ್ತಿ ಪುರಸ್ಕಾರʼ  

MK HasiruKranti
ಸಾಮಾಜಿಕ ಸೇವೆಗಾಗಿ ಸವಿತಾ ಹೆಬ್ಬಾರ್ ಅವರಿಗೆ ‘ನಾರಿ ಶಕ್ತಿ ಪುರಸ್ಕಾರʼ  
WhatsApp Group Join Now
Telegram Group Join Now
 ಬೆಳಗಾವಿ: ಬೆಳಗಾವಿಯ ಶ್ರೀ ಸಾಯಿ ಶ್ರದ್ಧಾ ಮಹಿಳಾ ಕಲ್ಯಾಣ ಸಮಿತಿ ಸಂಸ್ಥಾಪಕಿ  ಸವಿತಾ ಹೆಬ್ಬಾರ್ ಅವರಿಗೆ ಸಾಮಾಜಿಕ ಸೇವೆ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಮಾಡಿದ ವಿಶೇಷ ಕಾರ್ಯಕ್ಕಾಗಿ ಐಕಾನ್ಸ್ ಆಫ್ ಇಂಡಿಯನ್ ಬಿಸಿನೆಸ್ ಮ್ಯಾಗಜಿನ್ ವತಿಯಿಂದ ಐಐಬಿ – ನಾರಿ ಶಕ್ತಿ ಪುರಸ್ಕಾರ 2026 ನೀಡಿ ಸನ್ಮಾನಿಸಲಾಗಿದೆ.

ಈ ಪ್ರಶಸ್ತಿ 15 ಮಾರ್ಚ್ 2026ರಂದು ಬೆಂಗಳೂರಿನ ವಿಜಯನಗರದಲ್ಲಿರುವ ಕಾಸಿಯಾ ಭವನದಲ್ಲಿ ನಡೆದ 38ನೇ ಆವೃತ್ತಿಯ ಪ್ರಶಸ್ತಿ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

ಸವಿತಾ ಹೆಬ್ಬಾರ್ ಅವರು ತಮ್ಮ ಸಂಸ್ಥೆಯ ಮೂಲಕ ಮಹಿಳೆಯರಿಗಾಗಿ ಹೊಲಿಗೆ ತರಬೇತಿ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು, ಆರೋಗ್ಯ ಶಿಬಿರಗಳು ಮತ್ತು ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸಿ ಹಲವಾರು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿದ್ದಾರೆ.

ಈ ಗೌರವವು ಮಹಿಳಾ ಸಬಲೀಕರಣ ಮತ್ತು ಸಮಾಜ ಸೇವೆಯಲ್ಲಿ ಅವರ ನಿರಂತರ ಪ್ರಯತ್ನಗಳಿಗೆ ಸಿಕ್ಕ ಮಹತ್ವದ ಮಾನ್ಯತೆ ಎಂದು ಗಣ್ಯರು ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Share This Article