ಭಾರತದಲ್ಲಿ ಕುಬೋಟಾ, ಫಾರ್ಮ್ ಟ್ರಾಕ್ ಮತ್ತು ಪವರ್ ಟ್ರಾಕ್ ಎಂಬ ಮೂರು ಟ್ರಾಕ್ಟರ್ ಬ್ರಾಂಡ್ ಗಳನ್ನು ನಿವ್ರಹಿಸುತ್ತಿದ್ದು ಕ್ರಮವಾಗಿ ಪ್ರೀಮಿಯಂ, ಎಂಟ್ರಿ–ಪ್ರೀಮಿಯಂ ಮತ್ತು ವ್ಯಾಲ್ಯೂ ವಲಯಗಳಿಗೆ ಪೂರೈಸುತ್ತದೆ. ಪವರ್ ಟ್ರಾಕ್ ಹಲವು ಕೃಷಿ ಕಾರ್ಯಾಚರಣೆಗಳಿಗೆ ಸಾಮೂಹಿಕ ವಲಯಕ್ಕೆ ಪೂರೈಸುತ್ತದೆ.
ಭತ್ತದ ಬೆಳೆಗೆ ಅಭಿವೃದ್ಧಿಪಡಿಸಲಾದ ಶೌರ್ಯ ಸರಣಿಯು ಜೌಗು ಪ್ರದೇಶ ಮತ್ತು ನೀರು ನಿಂತಿರುವ ಕೃಷಿಭೂಮಿಗಳಲ್ಲಿ ವಿಶ್ವಾಸಾರ್ಹ ಕಾರ್ಯಾಚರಣೆಗಳನ್ನು ನಡೆಸುವಂತೆ ರೂಪಿಸಲಾಗಿದೆ. ಇದು ಪ್ರಮುಖ ಬಿಡಿಭಾಗಗಳಿಗೆ ಕ್ಯಾಸೆಟ್–ರೀತಿಯ ಸೀಲಿಂಗ್ ಹೊಂದಿದ್ದು ಇದರಿಂದ ಕಾರ್ಯಾಚರಣೆಗಳಲ್ಲಿ ನೀರು ಮತ್ತು ಕೆಸರು ಪ್ರವೇಶಿಸುವುದನ್ನು ತಪ್ಪಿಸುತ್ತದೆ ಮತ್ತು ಸಣ್ಣ ಮತ್ತು ಮಧ್ಯಮ ಗಾತ್ರದ ಭೂಮಿಗಳಲ್ಲಿ ಕುಶಲತೆಗೆ 31. ಮೀಟರ್ ಗಳ ತೀಕ್ಷ್ಣ ತಿರುಗುವಿಕೆಯ ರೇಡಿಯಸ್ ಹೊಂದಿದೆ. ಈ ಟ್ರಾಕ್ಟರ್ ಗಳು ಪೂರ್ಣ ಸ್ಥಿರವಾದ ಮೆಷ್ ಗೇರ್ ಬಾಕ್ಸ್ ಮತ್ತು 8 ಫಾರ್ವರ್ಡ್ ಮತ್ತು 2 ರಿವರ್ಸ್ ಗೇರ್ ಗಳನ್ನು ಹೊಂದಿದೆ ಮತ್ತು ಟ್ರಾಕ್ಟರ್ ವಿಧ ಆಧರಿಸಿ ಸೆನ್ಸಿ-1 ಹೈಡ್ರಾಲಿಕ್ ಲಿಫ್ಟ್ ನ್ನು 1600-200 ಕೆಜಿ ಶ್ರೇಣಿಯಲ್ಲಿ ಹೊಂದಿದೆ. ಡಬಲ್ ಕ್ಲಚ್ ನೊಂದಿಗೆ ಸ್ವತಂತ್ರ ಪಿಟಿಒ ಲಿವರ್ ಹೊಂದಿದ್ದು ಇದು ಇಂಪ್ಲಿಮೆಂಟ್ ಬಳಕೆ ನಿಯಂತ್ರಿಸುತ್ತದೆ ಮತ್ತು ಬೇಲರ್ ಬಳಕೆಯಂತಹ ಸುಧಾರಿತ ಕೆಲಸಗಳಿಗೆ ಬೆಂಬಲಿಸುತ್ತದೆ. ಪಿಟಿಒ ವೇಗದ ಆಯ್ಕೆಗಳಲ್ಲಿ ಡ್ಯುಯಲ್ ಪಿಟಿಒ 540/1000 ಮತ್ತು ರಿವರ್ಸ್ ಪಿಟಿಒ ವಿಸ್ತಾರ ಭತ್ತದ ಕೃಷಿ ಕೆಲಸಗಳಿಗೆ ನೆರವಾಗುತ್ತದೆ. ಭತ್ತದ ಬಳಕೆಗೆ ರಂಧ್ರವಿರುವ ಉನ್ನತೀಕರಿಸಿದ ಪ್ಲಾಟ್ ಫಾರಂ ಮತ್ತು ರಕ್ಷಣಾತ್ಮಕ ವೈರಿಂಗ್ ಫೆಂಡರ್ ಚಾನಲ್ ಒಳಗಡೆ ರೂಟಿಂಗ್ ನಿಂದ ಜೌಗಿನ ಪರಿಸರಗಳಲ್ಲಿ ಕಾರ್ಯಾಚರಣೆಗಳಿಗೆ ಮತ್ತು ದೀರ್ಘ ಕೆಲಸಗಳಿಗೆ ನೆರವಾಗುತ್ತದೆ.
ಈ ಬಿಡುಗಡೆ ಕುರಿತು ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ನಿಖಿಲ್ ನಂದಾ, “ದಕ್ಷಿಣ ಭಾರತವು ಎಸ್ಕಾರ್ಟ್ಸ್ ಕುಬೋಟಾದ ಮುಂದಿನ ಹಂತದ ಪ್ರಗತಿಯ ಕೇಂದ್ರವಾಗಿದೆ ಮತ್ತು ನಾವು ಕೇಂದ್ರೀಕೃತ, ಉನ್ನತ ಗುಣಮಟ್ಟದ, ಬಳಕೆಗೆ ತಕ್ಕ ಉತ್ಪನ್ನಗಳ ಮೂಲಕ ನಮ್ಮ ಉಪಸ್ಥಿತಿ ವಿಸ್ತರಿಸುತ್ತಿದ್ದೇವೆ. ಭತ್ತದ ಮಾರುಕಟ್ಟೆಗಳಲ್ಲಿ ನಮ್ಮ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದ್ದು ಮತ್ತು ನಮ್ಮ ಪ್ರಾದೇಶಿ ಹೆಜ್ಜೆ ಗುರುತನ್ನು ವಿಸ್ತರಿಸುತ್ತಿರುವುದರಿಂದ ಶೌರ್ಯದ ಬಿಡುಗಡೆಯು ಈ ಉದ್ದೇಶಗಳಿಗೆ ಪೂರಕವಾಗಿದೆ” ಎಂದರು.
ಸಾರ್ವಕಾಲಿಕ ನಿರ್ದೇಶಕ ಮತ್ತು ಸಿಇಒ ಭರತ್ ಮದನ್, “ಈ ಬಿಡುಗಡೆಯು ದಕ್ಷಿಣದ ಮಾರುಕಟ್ಟೆಗಳಲ್ಲಿ ಭತ್ತದ ವಲಯದಲ್ಲಿ ನಮ್ಮ ಭಾಗವಹಿಸುವಿಕೆ ಸದೃಢಗೊಳಿಸುತ್ತದೆ ಮತ್ತು ಟ್ರಾಕ್ಟರ್ ಪೋರ್ಟ್ ಫೋಲಿಯೋದಲ್ಲಿ ಪ್ರಾದೇಶಿಕ ಸಂಯೋಜನೆ ಸುಧಾರಿಸುತ್ತದೆ. ಅಂತಹ ಬಳಕೆ-ಪ್ರೇರಿತ ವಲಯಗಳಲ್ಲಿ ಕೇಂದ್ರೀಕೃತ ವಿಸ್ತರಣೆಯು ವಿವಿಧ ಆವರ್ತಗಳಲ್ಲಿ ಪೋರ್ಟ್ ಫೋಲಿಯೊ ಸಾಮರ್ಥ್ಯ ಕಾಪಾಡುವಲ್ಲಿ ಮುಖ್ಯವಾಗಿದೆ” ಎಂದರು.


