ಕ್ರೀಡಾಂಗಣದ  ಕೆರೆ ಪಾಲಿಕೆಗೆ ಹಸ್ತಾಂತರಿಸಲು ಮೇಯರ್ ಸೂಚನೆ

MK HasiruKranti
ಕ್ರೀಡಾಂಗಣದ  ಕೆರೆ ಪಾಲಿಕೆಗೆ ಹಸ್ತಾಂತರಿಸಲು ಮೇಯರ್ ಸೂಚನೆ
WhatsApp Group Join Now
Telegram Group Join Now
ಬಳ್ಳಾರಿ, ಮಾ.16:  ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಪುನೀತ್ ರಾಜಕುಮಾರ್ ಪುತ್ತಳಿ ಹಾಗೂ ಕೆರೆಯನ್ನು ಮೇಯರ್ ಪಿ.ಗಾದೆಪ್ಪ ನಿನ್ನೆ ಪರಿಶೀಲಿಸಿ ಇದರ ಸುತ್ತಮುತ್ತ ಇರಿವ  ವಿದ್ಯತ್ ದೀಪಗಳನ್ನು ದುರಸ್ಥಿತಿ ಮಾಡಿ,   ಬೇಲಿ ಗಿಡ, ಕಸವನ್ನು ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಇದರ ನಿರ್ವಹಣೆಯನ್ನು  ಯಾರು ಮಾಡಬೇಕೆಂದು ವಿಚಾರ ಮಾಡಿದಾಗ. ನಿರ್ಮಿತ ಕೇಂದ್ರದವರು ನಿರ್ಮಿಸಿ ಕ್ರೀಡಾ ಇಲಾಖೆಗೆ  ಹಸ್ತಾಂತರಿಸಿದ್ದಾರೆ .. ಆದರೆ ಜಿಲ್ಲಾ ಕ್ರೀಡಾ ಇಲಾಖೆ,  ಮಹಾನಗರ ಪಾಲಿಕೆಗೆ ಇನ್ನೂ ಹಸ್ತಾಂತರ ಮಾಡಿಲ್ಲ.
ತಕ್ಷಣ  ಕ್ರೀಡಾ ಅಧಿಕಾರಿಗಳಿಗೆ ಹಾಗೂ ನಿರ್ಮಿತ ಕೇಂದ್ರದ ಅಧಿಕಾರಿಗಳಿಗೆ ಪತ್ರ ಬರೆದು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲು ದಾಖಲೆಗಳನ್ನು ನೀಡಬೇಕೆಂದು ಸೂಚನೆ ನೀಡಿದ್ದಾರೆ.
ವಾಯು ವಿಹಾರ ನಡೆಸಲು 2023 ರಲ್ಲಿ ಬಳ್ಳಾರಿ ಜನತೆಗೆ ಅನುಕೂಲ ಆಗಲೆಂದು ಇದನ್ನು ನಿರ್ಮಿಸಿತ್ತು.  ನಿರ್ಮಿತ ಕೇಂದ್ರದ ಅಧಿಕಾರ್ರಗಳು. ಹಾಗೂ   ಕ್ರೀಡಾ ಇಲಾಖೆಯಿಂದ ರಾಮಾಂಜನೇಯಲು ಹಾಗೂ ಹಾಕಿ ಕೋಚ್ ಆದ ಜಾಕಿರ್. ಹಾಗೂ  ಸಂಘ ಸಂಸ್ಥೆಗಳ ಸದಸ್ಯರುಗಳು  ಇದ್ದರು.
WhatsApp Group Join Now
Telegram Group Join Now
Share This Article