ಬಳ್ಳಾರಿ, ಮಾ.14: ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರವರನ್ನು ಲೋಕಸಭಾ ಸದಸ್ಯ ಈ.ತುಕರಾಂ ನಿನ್ನೆ ಭೇಟಿ ಮಾಡಿ. ಬಳ್ಳಾರಿ ನಗರದ ಪ್ರಮುಖ ಸಮಸ್ಯೆಯಾಗಿರುವ ರಾಷ್ಟ್ರೀಯ ಹೆದ್ದಾರಿ 67 ರ ರಸ್ತೆ ಸಂಚಾರ ದಟ್ಟಣೆ ಮತ್ತು ಮೂಲಸೌಕರ್ಯ ಕೊರತೆಯನ್ನು ಶಾಶ್ವತವಾಗಿ ಪರಿಹರಿಸಲು. ಹೈವೇ ಬೈ-ಪಾಸ್ ನಿಂದ ಸುಧಾ ಕ್ರಾಸ್ ವರೆಗಿನ ರಸ್ತೆಯನ್ನು ಎರಡು ಲೇನ್ನಿಂದ ನಾಲ್ಕು ಲೇನ್ಗೆ ಅಭಿವೃದ್ಧಿಪಡಿಸಲು ಸುಮಾರು 90 ಕೋಟಿ. ಬಳಿ ಹಗರಿ ನದಿಗೆ ಸೇತುವೆ ನಿರ್ಮಾಣಕ್ಕೆ 60 ಕೋಟಿ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ.
ಮನವಿಗೆ ಸಕಾರತ್ಮಕವಾಗಿ ಸ್ಪಂದಿಸಿದ ಸಚಿವರು ಬಳ್ಳಾರಿ ಬೈ-ಪಾಸ್ ನಿಂದ ಸುಧಾ ಕ್ರಾಸ್ ರೆಗಿನ ರಸ್ತೆಯನ್ನು ಎರಡು ಲೇನ್ನಿಂದ ನಾಲ್ಕು ಲೇನ್ಗೆ ಅಭಿವೃದ್ಧಿಪಡಿಸಲು ಕೂಡಲೇ ಅನುಮೋದನೆ ನೀಡುವುದಾಗಿ ಹಾಗೂ ಗುಳ್ಯಂ ಸೇತುವೆ ನಿರ್ಮಾಣಕ್ಕೆ ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಅಡಿಯಲ್ಲಿ ಅನುದಾನ ನೀಡಲು ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ .
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಕೈಗಾರಿಕಾ ಬೆಳವಣಿಗೆ, ರಾಜ್ಯಾಂತರ ಸಂಪರ್ಕ ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ಈ ರಸ್ತೆ ಅತ್ಯಂತ ಮಹತ್ವದ್ದಾಗಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಅಗತ್ಯವನ್ನು ಸ್ಪಷ್ಟವಾಗಿ ಸರ್ಕಾರದ ಮುಂದೆ ಮಂಡಿಸಿದೆ ಎಂದು ತುಕರಾಂ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


