ಘಟಪ್ರಭಾ.ಬೆಳಗಾವಿ ಜಿಲ್ಲಾ ಬಿಜೆಪಿ ಗ್ರಾಮಾಂತರ, ಹಿರಿಯರ ಪ್ರಕೋಷ್ಠದ ಸಂಚಾಲಕರಾಗಿ ಘಟಪ್ರಭಾದ ನಿವಾಸಿಗಳಾದ ಸುರೇಶ ಪಾಟೀಲ ಅವರು ಆಯ್ಕೆ ಆಗಿದ್ದಾರೆ.
ಶುಕ್ರವಾರ ದಿನಾಂಕ 13-03-2026 ರಂದು ಶ್ರೀ ವಿಠ್ಠಲ ರುಕ್ಮಿಣಿ ಮಂದಿರದಲ್ಲಿ, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ ಅವರ ನೇತೃತ್ವದಲ್ಲಿ ಸುರೇಶ ಪಾಟೀಲ ಅವರನ್ನು ಸತ್ಕರಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ರಾಮಣ್ಣ ಹುಕ್ಕೇರಿ, ಸುಭಾಷ ದಡ್ಡೀಕರ, ಶ್ರೀಕಾಂತ ಬಿ, ಕುಲಕರ್ಣಿ, ಡಾ ವಿಜಯಕುಮಾರ ಪಾಟೀಲ, ಕೆ ಪಿ ಕಳ್ಳೀಮಠ, ಹರೀಶ ಕಾಳೆ, ಲಕ್ಷ್ಮಣ ಮಿಸಾಳೆ, ಆನಂದ ಪತ್ತಾಗಿರಿ, ನಾಗರಾಜ ಚೌಕಶಿ ಮಂಜುನಾಥ ಮಟಗಾರ, ಆಶೀಶ ಕಾಳೆ,ನವೀನ ತುಕ್ಕಾನಟ್ಚಿ, ವೀರಣ್ಣ ಸಂಗಮನವರ ಮುಂತಾದವರು ಪಾಲ್ಗೊಂಡಿದ್ದರು.


