|
11:48 AM (1 hour ago)
|
|
||
|
||||
ಬಳ್ಳಾರಿ ಮಾ, 13 : ಪುರುಷರಿಗೆ ಸಮಾಜದಲ್ಲಿ ಸಾಂಸ್ಕೃತಿಕ ಮನಸ್ಸಿರಬೇಕು ಉಪಕಾರ ಮಾಡುವಂತಹ ಸಂಸ್ಕೃತಿ ಬರಬೇಕು ಲಿಂಗ ತಾರತಮ್ಯ ಎನ್ನುವುದು ಮನೆಯಲ್ಲಿ ತಾಯಿಯಿಂದಲೇ ಆರಂಭವಾಗುತ್ತದೆ ಮನೆ ಕೆಲಸ ಹೆಣ್ಣು ಮಾತ್ರ ಮಾಡಬೇಕೆಂದು ಸಮಾಜದಲ್ಲಿ ಕಟ್ಟುಪಾಡುಗಳನ್ನು ಹಾಕಿಕೊಂಡಿದ್ದೇವೆ ಇದು ನಿಲ್ಲಬೇಕು ಮನೆ ಕೆಲಸವನ್ನು ಗಂಡು-ಹೆಣ್ಣು ಭೇದವಿಲ್ಲದೆ ಸಮಾನವಾಗಿ ಮಾಡಬೇಕು ಎಂದು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ ಅಭಿಪ್ರಾಯ ಪಟ್ಟರು.
ಅವರು ಇಂದು ನಗರದ ಮಹಿಳಾ ಪ್ರಥಮ ದರ್ಜೆ ಕಾಲೇಜ್ ವತಿಯಿಂದ ಮಹಿಳಾ ದಿನಾಚರಣೆ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕ್ಲಾರ ಜೆನೆಟಿನ್ ಎಂಬ ಮಹಿಳೆ 1975ರಲ್ಲಿ ಮಹಿಳಾ ದಿನಾಚರಣೆಯನ್ನು ಆರಂಭಿಸಿದರು ಅಂದಿನಿಂದ ನಾವು ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ಮಹಿಳಾ ದಿನಾಚರಣೆಯನ್ನು ನಡೆಸುತ್ತಿದ್ದೇವೆ, ಬಳ್ಳಾರಿಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಉದ್ಘಾಟನಾ ಕಾರ್ಯಕ್ರಮವನ್ನು ಪೌರಕಾರ್ಮಿಕ ಮಹಿಳೆಯಿಂದ ಉದ್ಘಾಟನೆ ಮಾಡಿಸಿರುವುದು ಅತ್ಯಂತ ಹೆಮ್ಮೆಯ ವಿಷಯ ಮತ್ತು ಇದು ಮಾದರಿಯಾಗುವಂತ ಕೆಲಸ ಎಂದರು. ಪೌರಕಾರ್ಮಿಕರಿಲ್ಲದ ಸಮಾಜವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ಇಂದಿನ ದಿನಮಾನಗಳಲ್ಲಿ ಹೆಣ್ಣಿಗೆ ಏನು ಬೇಕು ಎಂದು ಯಾರೂ ಕೇಳುವುದಿಲ್ಲ ಅವರು ಕೊಟ್ಟಿದ್ದೆ ನಾವು ಪಡೆಯಬೇಕಾದ ದುಸ್ಥಿತಿ ಸಮಾಜದಲ್ಲಿದೆ. ಇದು ನಿವಾರಣೆಯಾಗಬೇಕು ಎಂದರು., ಧಾರ್ಮಿಕವಾಗಿಯೂ ಸಹ ಮಹಿಳೆಯನ್ನು ಅಜ್ಞಾತದಲ್ಲಿ ಇಡಲಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಪುರುಷ ಪ್ರಧಾನ ಸಮಾಜದಲ್ಲಿ ವೇದಿಕೆಯ ಡಯಾಸನ್ನು ಸಹ ಅವರ ಎತ್ತರಕ್ಕೆ ತಕ್ಕಂತೆ ಮಾಡಿಸಿಕೊಂಡಿರುತ್ತಾರೆ ಇದು ಮಹಿಳಾ ಕಾಲೇಜು ಆದ್ದರಿಂದ ಮಹಿಳೆಯರ ಎತ್ತರಕ್ಕೆ ತಕ್ಕಂತೆ ಪ್ರಾಂಶುಪಾಲರು ಮಾಡಿಸಿದ್ದಾರೆ ಇಲ್ಲವಾದಲ್ಲಿ ನಾನು ಸಭಿಕರಿಗೆ ಕಾಣಿಸುತ್ತಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿ ಇದು ಸಹ ಪುರುಷ ಪ್ರಧಾನವಾಗಿ ಆಲೋಚಿಸಲಾಗಿದೆ, ಮಹಿಳೆಯನ್ನು ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಅಬಲೆ ಅಬಲೇ ಎಂದು ಕರೆಯುತ್ತಾರೆ ಆದರೆ ಗಗನಸಖಿ ಮತ್ತು ಗಗನಯಾತ್ರಿ ಆಗುವಲ್ಲಿಯೂ ಸಹ ಇಂದು ಮಹಿಳೆ ಯಶಸ್ವಿಯಾಗಿದ್ದಾಳೆ ಮಹಿಳೆ ಪುರುಷನ ಆಶ್ರಯದಲ್ಲಿಲ್ಲ ಆದರೆ ಆಕೆ ಎಲ್ಲರಿಗೂ ಆಶ್ರಯ ಕೊಡುವಂಥವಳಾಗಿದ್ದಾಳೆ ಎಂದರು.
ಕೌಟುಂಬಿಕವಾಗಿ ಗಂಡು ಮಗು ಇಲ್ಲದಿದ್ದರೂ ಪರವಾಗಿಲ್ಲ ಹೆಣ್ಣು ಮಗುವಿಗೆ ಬೇಗ ಮದುವೆ ಮಾಡುವುದು ಅತ್ಯಂತ ಪ್ರಮುಖ ಜವಾಬ್ದಾರಿ ಎಂದು ಪೋಷಕರು ತಿಳಿದುಕೊಂಡಿದ್ದಾರೆ ಈ ಮನಸ್ಥಿತಿಯಿಂದ ಹೊರಗೆ ಬರಬೇಕೆಂದರು.
ಬಾಕ್ಸ್ ಐಟಂ
ನಗರದ ಡಿಎಡ್ ಕಾಲೇಜಿನ ಆವರಣದಲ್ಲಿರುವ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಒಂದು ಪ್ರತ್ಯೇಕವಾದ ಸ್ಥಳದಲ್ಲಿ ಸ್ವತಂತ್ರವಾದ ಕಟ್ಟಡವನ್ನು ಒದಗಿಸಿಕೊಡಬೇಕು ಎಂದು
ನಾನು ಸ್ಥಳೀಯ ಶಾಸಕರು ಮತ್ತು ಜಿಲ್ಲೆಯ ಉಸ್ತುವಾರಿ ಸಚಿವರುಗಳನ್ನು ಆಗ್ರಹಿಸುತ್ತಿದ್ದೇನೆ.
ಮಲ್ಲಿಕಾ ಗಂಟಿ ವಿಶ್ರಾಂತ ಕುಲಪತಿಗಳು.



