ಅಥಣಿ, ದೇಶದ ಪ್ರಾಚೀನಕಾಲದಿಂದ ಮಹಿಳೆಯರಿಗೆ ವಿಶೇಷ ಸ್ಥಾನಮಾನವಿದ್ದು, ಇಂದಿನ ಸಮಾಜದಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ನೈಪುಣ್ಯ ಮತ್ತು ಶಕ್ತಿಯ ಗುರುತನ್ನು ಮೂಡಿಸುತ್ತಿದ್ದಾರೆ. ಮಹಿಳೆಯರು ಶಕ್ತಿಪೂರ್ಣರು ಮತ್ತು ಸಂಘಟಿತ ರೀತಿಯಲ್ಲಿ ಸಮಾಜದ ಸೇವೆಗೆ ಮುಂಭಾಗದಲ್ಲಿದ್ದಾರೆ. ಮಹಿಳೆಯರೇ ಸಶಕ್ತ ಸಮಾಜದ ನಿರ್ಮಾಪಕರು, ಎಂದು ಅನ್ನಪೂರ್ಣಾ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ. ದೀಪಾ ಪಾಂಗಿ ಹೇಳಿದರು.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಅನ್ನಪೂರ್ಣಾ ಶಿಕ್ಷಣ ಸಂಸ್ಥೆಯ ನೆಕ್ಸಸ್ ಸಭಾಭವನದಲ್ಲಿ ಆಯೋಜಿಸಲಾದ ಆಹಾರೋತ್ಸವ ಮತ್ತು “ಸ್ತ್ರೀ ಶಕ್ತಿ” ವಿಶೇಷ ಕಾರ್ಯಕ್ರಮದಲ್ಲಿ
“ಮಹಿಳೆಯರು ಆರೋಗ್ಯ, ತೂಕ ನಿಯಂತ್ರಣ, ಸಮತೋಲಿತ ಆಹಾರ ಮತ್ತು ಪೋಷಕಾಂಶಗಳಿಗೆ ವಿಶೇಷ ಗಮನ ನೀಡಬೇಕು. ದಿನನಿತ್ಯದ ಜೀವನದಲ್ಲಿ ಸರಿಯಾದ ಆಹಾರ ಸೇವನೆಯಿಂದ ಪ್ರಯೋಜನವಾಗುತ್ತದೆ. ಮಹಿಳೆಯರು ಆರೋಗ್ಯವಂತರಾಗಿದರೆ ಕುಟುಂಬದ ಒಟ್ಟಾರೆ ಆರೋಗ್ಯ ಉತ್ತಮವಾಗುತ್ತದೆ ಮತ್ತು ಅದರಿಂದ ಸಕಾರಾತ್ಮಕ ಪರಿಣಾಮಗಳು ಕಾಣಿಸುತ್ತವೆ.ಎಂದು ಹೇಳಿದರು
ನಂತರ ಮಾತನಾಡಿದ ಡಾ” ರಾಗಿಣಿ ಪಾಟೀಲ್ ಮಾತನಾಡಿ “ಮಹಿಳೆಯರು ಸಮಾಜಕ್ಕಾಗಿ ಸಲ್ಲಿಸಿರುವ ಸೇವೆ, ನಾಯಕತ್ವ ಶಕ್ತಿ ಮತ್ತು ಸಾಮಾಜಿಕ ಬದ್ಧತೆಯನ್ನು ಹೆಚ್ಚು ಮೌಲ್ಯಮಾಪನ ಮಾಡಬೇಕು. ಮಹಿಳೆಯರು ಮನೆಗೆ ಮಾತ್ರ ಸೀಮಿತವಾಗಿರದೆ ಶಿಕ್ಷಣ, ಉದ್ಯೋಗ, ವಿಜ್ಞಾನ, ರಾಜಕೀಯ, ಕ್ರೀಡೆ ಇತ್ಯಾದಿ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ನೈಪುಣ್ಯವನ್ನು ತೋರಿಸುತ್ತಿದ್ದಾರೆ. ಧೈರ್ಯ, ಸಹಿಷ್ಣುತೆ, ಶಕ್ತಿ ಮತ್ತು ಸೃಜನಶೀಲತೆಯನ್ನು ಒತ್ತಿ ತಮ್ಮ ಸಾಧನೆಯನ್ನು ಸಾಬೀತು ಮಾಡಬೇಕು.ಎಂದು ಹೇಳಿದರು
ಈ ಸಂದರ್ಭದಲ್ಲಿ ಅಧ್ಯಕ್ಷಸ್ಥಾನದಲ್ಲಿ ಸಂಸ್ಥೆಯ ಉಪಾಧ್ಯಕ್ಷೆ ಡಾ. ಪೂರ್ಣಿಮಾ ಪಾಂಗಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಮುಖ ಅತಿಥಿಗಳಾಗಿ ಹಂಸಗಾಮಿನಿ ಮಹಿಳಾ ಸಂಘದ ಅಧ್ಯಕ್ಷೆ ಜಯಶ್ರೀ ಕಿನಿಂಗೇ, ಕಾರ್ಯದರ್ಶಿ ಶೀಲಾ ಯಲಗೂದ್ರಿ, ಸಮಾಜ ಸೇವಕರು ಗೀತಾ ತೋರಿ, ಕವಿತಾ ಕಲತರಿ, ಅನಿತಾ ಬಣಜವಾಡ, ಭಾರತಿ ಬಿಜಾಪುರೆ ಹಾಜರಿದ್ದರು.
ಕಾರ್ಯಕ್ರಮಕ್ಕೆ ಮುಖ್ಯವಾಗಿ ಶೀಲ್ಪಾ ಚೌಗ್ಲಾ, ಲಕ್ಷ್ಮಿ ದಳ್ವಾಯಿ, ಶ್ರೀದೇವಿ ನೈಕ್, ಅಕ್ಷತಾ ಕುಲಕರ್ಣಿ, ಸುಕನ್ಯಾ ಮಂಚಾ, ಪೂರ್ಣಿಮಾ ನೈಕ್, ಸೌಂದರ್ಯಾ ಕೊಟಲಗಿ, ರಾಜಶ್ರೀ ಕುಂಭಾರ್, ಸುಜಾತ್ ಔಟಗಿ, ಸವಿತಾ ಮಾಗದುಮ್, ಪ್ರೇಮಾ ಕುಂಭಾರ್, ಸನಾ ಸಾಂಗ್ಲಿಕರ್, ಪ್ರತೀಕ್ಷಾ ಸನದಿ, ಪ್ರಾಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು


