ಗದಗ ಎ12 : ಕಳೆದ ಎರಡೂವರೆ ದಶಕಗಳಿಂದ ಗದಗ ಜಿಲ್ಲಾ ದೇವಾಂಗ ನೌಕರರ ಸಂಘವು ಸಮಾಜಕ್ಕೆ ಉಪಯುಕ್ತವಾಗುವ ರಚನಾತ್ಮಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತ ಬಂದಿದೆ.
ರಾಷ್ಟ್ರಮಟ್ಟದ ಆರು ವಧು-ವರರ ಸಮಾವೇಶಗಳನ್ನು ಯಶಸ್ವಿಯಾಗಿ, ವ್ಯವಸ್ಥಿತವಾಗಿ ನೆರವೇರಿಸಿದೆ. ಇಂದಿನ ದಿನಗಳಲ್ಲಿ ವಧು-ವರರ ಸಮಾವೇಶ ಸಮಾಜ ಬಾಂಧವರಿಗೆ ಅತ್ಯಂತ ಅವಶ್ಯವಾಗಿದೆಯೆಂದು ಸಂಘದ ಅಧ್ಯಕ್ಷ ಆರ್ ಟಿ ಕೊಪ್ಪಳ ನುಡಿದರು.
ಜಿಲ್ಲಾ ದೇವಾಂಗ ನೌಕರರ ಸಂಘದಿಂದ ದಿ: ೧೦ ರಂದು ನಗರದ ಹಳೇ ಬನಶಂಕರಿ ದೇವಸ್ಥಾನದ ನೌಕರರ ಸಂಘದ ಕಾರ್ಯಾಲಯದಲ್ಲಿ ಆಯೋಜಿಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಗದಗ ಜಿಲ್ಲಾ ದೇವಾಂಗ ನೌಕರರ ಸಂಘದಿಂದ ಮುಂಬರುವ ಮೇ ತಿಂಗಳಿನ ದಿ: ೨೫ ಹಾಗೂ ೨೬ ರಂದು ೭ ನೇ ಅಂತತಾಷ್ಟ್ರೀಯ ವಧು-ವರರ ಸಮಾವೇಶವನ್ನು ಆಯೋಜಿಸಲಾಗಿದೆ.
ಇದರಲ್ಲಿ ದೇವಾಂಗ ಸಮಾಜದ ವಧು ವರರಿಗೆ ಹೆಸರು ನೋಂದಾಯಿಸಿಕೊಳ್ಳಲು ಆನ್ ಲೈನ್ ಲಿಂಕ್ ವಿಳಾಸವಿದೆ ಇದರಲ್ಲಿ ತಮ್ಮ ಸ್ವವಿರವನ್ನು
ದಿನಾಂಕ ೧೫-೫-೨೦೨೪ ರೊಳಗಾಗಿ ನೊಂದಾಯಿಸಿಕೊಳ್ಳುವಂತೆ ವಿನಂತಿಸಿದರು.
ದೇವಾಂಗ ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಿವಾನಂದ ಗಿಡ್ನಂದಿ ಪ್ರಾಸ್ಥಾವಿಕವಾಗಿ ಮಾತನಾಡಿ ಸಂಘವು ೧೯೯೯ ರಂದು ಸ್ಥಾಪನೆಗೊಂಡು ಇಂದಿಗೆ ೨೫ ವರ್ಷಗಳನ್ನು ಪೂರೈಸಿದೆ. ಸಂಘವು ನಡೆದು ಬಂದ ದಾರಿಯ ಕುರಿತು ಮಾತನಾಡುತ್ತ ಸಂಸ್ಥಾಪಕ ಅಧ್ಯಕ್ಷ ಇ.ಜಿ ಚೋಳಿನ ಹಾಗೂ ಸೋಮಶೇಖರ ಘಾರ್ಗಿ ಇವರನ್ನು ನೆನೆದು ಇವರ ಸ್ಮರಣೆಯಲ್ಲಿ ಬೆಳ್ಳಿಹಬ್ಬವನ್ನು ಮೇ ತಿಂಗಳಿನಲ್ಲಿ ಆಚರಿಸಲಾಗುವುದು. ಇದರ ನಿಮಿತ್ತವಾಗಿ ಎಲ್ಲ
ಸದಸ್ಯರಿಗೆ ಸನ್ಮಾನಿಸಿ ಗೌರವಿಸುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸುವುದೆಂದರು.