ಮಾರ್ಚ ೧೩ ರಿಂದ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ

A B
By A B
ಮಾರ್ಚ ೧೩ ರಿಂದ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ
WhatsApp Group Join Now
Telegram Group Join Now

ಧಾರವಾಡದ ಕೆಲಗೇರಿ ರಸ್ತೆ ಯಲ್ಲಿರುವ ಶಾಂತಿ ನಿಕೇತನ ನಗರದ ಶ್ರೀ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ ಮತ್ತು ೨೩ ನೇಯ ವಾರ್ಷಿಕೋತ್ಸವದ ಸಮಾರಂಭ ಇದೇ ಮಾರ್ಚ ೧೩ ರಿಂದ ೧೯ ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಅನಾದಿಕಾಲದಿಂದಲೂ ರೈತರು ಕರಿಯಮ್ಮ ದೇವಿಗೆ ಶ್ರದ್ದೆ ಹಾಗೂ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾ ಬಂದಿದ್ದು, ಈ ದೇವಸ್ಥಾನವು ಭಾವೈಕ್ಯತೆಯ ಕೇಂದ್ರವು ಸಹ ಆಗಿದೆ.
ಮಾರ್ಚ ೧೩ ರಿಂದ ದೇವಿಗೆ ವಿಶೇಷ ಪೂಜೆ ನಡೆಯಲಿದ್ದು, ಪ್ರತಿ ದಿನ ಸಂಜೆ ಭಜನೆ ಹಾಗೂ  ಪ್ರಾರ್ಥನೆ ನಡೆಯಲಿದ್ದು, ರಾತ್ರಿ ೮.೩೦ ಕ್ಕೆ ಪ್ರಸಾದ ಮತ್ತು ೯ ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಮಾರ್ಚ ೧೭ ರಂದು ಸಾಯಂಕಾಲ ೪ ಗಂಟೆಗೆ ಮಹಿಳೆಯರಿಂದ ಸಾಮೂಹಿಕ ಕಂಕುಮಾರ್ಚನೆ ನಡೆಯಲಿದೆ. ಮಾರ್ಚ ೧೮ ರಂದು ಬೆಳ್ಳಿಗ್ಗೆ ಕಾಕಡಾರತಿ, ಸಂಕಲ್ಪ ಪೂಜೆ, ಅಭಿಷೇಕ ಮತ್ತು ಮಹಾಮಂಗಳಾರತಿ ನಡೆಯಲಿದ್ದು,  ಸಂಜೆ ೭ ಗಂಟೆಗೆ ಭಜನೆ ಹಾಗೂ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಮಾರ್ಚ ೧೯ ಗುರುವಾರ ಯುಗಾದಿ ಹಬ್ಬದಂದು ಬೆಳ್ಳಗ್ಗೆ ಸುಪ್ರಭಾತ, ಕಾಕಡಾರತಿ ಹಾಗೂ ಅಭಿಷೇಕ  ಮುಂಜಾನೆ ೯ ಗಂಟೆಗೆ ದೇವಿಗೆ ವಿಶೇಷ ಅಲಂಕಾರ ಹಾಗೂ ೧೦ ಗಂಟೆಗೆ ಮಹಿಳೆಯರಿಂದ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಸಂಜೆ ೪ ಗಂಟೆಗೆ ದೇವಿಗೆ ಎರಡನೇ ಅಲಂಕಾರ ಮಾಡಲಾಗುವುದು.
ನಂತರ ಪಲ್ಲಕ್ಕಿ ಉತ್ಸವ  ಪ್ರದಕ್ಷಿಣೆ ಶಾಂತಿ ನಿಕೇತನ ನಗರದಲ್ಲಿ ನಡೆಯಲಿದೆ.
ಜಾತ್ರಾ ಮಹೋತ್ಸವದ ಈ ಎಲ್ಲ ಕಾರ್ಯಕ್ರಮಗಳಲ್ಲಿ ಹೆಚ್ಚನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಸಕರು ಮತ್ತು ದೇವಸ್ಥಾನದ ಚೇರಮನ್ನರಾದ ಶ್ರೀ ಎನ್
ಎಚ್.ಕೋನರೆಡ್ಡಿ ಅವರು ಮನವಿ ಮಾಡಿಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article