ಮಹಿಳೆಯರು  ಸಂರಕ್ಷಣೆಗೆ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿ:ಸಿ ಡಿ ಪಿ ಓ ಕುಡುವಕ್ಕಲಗಿ 

A B
By A B
 ಮಹಿಳೆಯರು  ಸಂರಕ್ಷಣೆಗೆ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿ:ಸಿ ಡಿ ಪಿ ಓ ಕುಡುವಕ್ಕಲಗಿ 
WhatsApp Group Join Now
Telegram Group Join Now
 ಮಹಿಳೆಯರು  ಸಂರಕ್ಷಣೆಗೆ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿ:ಸಿ ಡಿ ಪಿ ಓ ಕುಡುವಕ್ಕಲಗಿ
ಘಟಪ್ರಭಾ.ಮಹಿಳೆಯರ ಕಲ್ಯಾಣ ಕ್ಕಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುತ್ತದೆ  ಮತ ಮಹಿಳೆಯರ ಸುರಕ್ಷತೆಗಾಗಿ ಹಲವಾರು ಕಾನೂನುಗಳನ್ನು ಮಾಡಿದೆ ಅವುಗಳನ್ನು ಮಹಿಳೆಯರು ಸದುಪಯೋಗ ಪಡಿಸಿಕೊಂಡು ಸಾರ್ಥಕ ಬದುಕು ಸಾಗಿಸಬೇಕು ಎಂದು ಗೋಕಾಕ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಡಿ ಎಸ್ ಕುಡುವಕ್ಕಲಗಿ ಹೇಳಿದರು.
ಅವರು ಜೈಂಟ್ಸ್ ಗ್ರುಪ್ ಆಪ್ ಘಟಪ್ರಭ ಇವರು  ಮಂಗಳವಾರ ದಿನಾಂಕ 10-03-2026 ರಂದು ಘಟಪ್ರಭಾದಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
      ಮಹಿಳಾ ಆಪ್ತ ಸಮಾಲೋಚಕರಾದ ಶ್ರೀಮತಿ ಶಕುಂತಲಾ ಶ್ರೀಕಾಂತ ಮಹಾಜನ ಮಾತನಾಡಿ  ಮಹಿಳೆಯರ ಇಂದಿನ ಸ್ಥಿತಿ- ಗತಿ ಈ ವಿಷಯದ ಕುರಿತು ಉಪನ್ಯಾಸ ನೀಡಿದರು.
ಅತಿಥಿಗಳಾಗಿ ಅಕ್ಕನ ಬಳಗದ ಅಧ್ಯಕ್ಷರಾದ ಶ್ರೀಮತಿ ಸುನಂದಾ ಖಡಬಡಿ, ನಿವೃತ್ತ ಶಿಕ್ಷಕ ಹಿರೇಮನಿ, ಜೆ ಜಿ ಆಸ್ಪತ್ರೆ ಆವರಣದ ಸರಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ಶ್ರೀಮತಿ ದಾಕ್ಷಾಯಿಣಿ,  ಆರುಣಗೌಡ ಪಾಟೀಲ, ಡಾ ವಿಲಾಸ ನಾಯಿಕವಾಡಿ ಆಗಮಿಸಿದ್ದರು.
ಅಧ್ಯಕ್ಷತೆಯನ್ನು ಜೈಂಟ್ಸ್ ಗ್ರುಪ್ ಆಪ್ ಘಟಪ್ರಭಾದ ಅಧ್ಯಕ್ಷರಾದ  ಆನಂದ ದೇಶಪಾಂಡೆ ಅವರು ವಹಿಸಿದ್ದರು.
ಕಾರ್ಯಕ್ರಮವನ್ನು ಮಲಗೌಡಾ ದೊಡ್ಡಬಸಣ್ಣವರ ನಿರೂಪಣೆ ಮಾಡಿದರು, ಕಾರ್ಯದರ್ಶಿ  ರವೀಂದ್ರ ಉಪ್ಪಾರ ಎಲ್ಲರನ್ನೂ ಸ್ವಾಗತಿಸಿ ವಂದನಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಗಿರಡ್ಡಿ ಗುರುಗಳು, ಸುಭಾಷ ದಡ್ಡೀಕರ ಕೆ ಪಿ ಕಳ್ಳೀಮಠ, ಶ್ರೀಕಾಂತ ಬಿ ಕುಲಕರ್ಣಿ, ಡಾ ಹರಗಣ್ಣವರ, ಶ್ರೀಕಾಂತ ವಿ ಮಹಾಜನ,ಶಂಕರ ಕುರಣಗಿ,ಭೂಪಾಲ ಖೆಮಲಾಪುರೆ,   ಸಂತೋಷ ದೇಶಪಾಂಡೆ, ಪ್ರಕಾಶ್ ಕುಲಕರ್ಣಿ,   ಕಲ್ಲಪ್ಪ ಕಾಡದವರ, ಸುಭಾಷ ಗಾಯಕಾಡ,ಸೇರಿದಂತೆ ಜೈಂಟ್ಸ್ ಗ್ರುಪ್ ಸದಸ್ಯರು ಮತ್ತು ಮಹಿಳೆಯರು ಹಾಗೂ ಸಾರ್ವಜನಿಕರು  ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article