ಬಳ್ಳಾರಿ. ಮಾ. 09: ಸಂವಿಧಾನ ರಚಿಸಿರುವ ಡಾ. ಬಿಆರ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ರಾಷ್ಟ್ರಪತಿಯ ನೇಮಕ ಉಪರಾಷ್ಟ್ರಪತಿಯ ನೇಮಕ ಪ್ರಧಾನಿಗಳ ನೇಮಕ ರಾಜ್ಯಪಾಲರ ನೇಮಕ ಮುಖ್ಯಮಂತ್ರಿಗಳ ಆಯ್ಕೆ ವಾಯು ಸೇನೆ ಭೂ ಸೇನೆ ಜಲ ಸೇನೆ ಕಮಾಂಡರುಗಳನ್ನು ಯಾವ ತರ ಆಯ್ಕೆ ಮಾಡಬೇಕು ಮತ್ತು ಅವರ ಕರ್ತವ್ಯಗಳೇನು ದಲಿತರಿಗೆ ಸಹಾಯ ಅಲ್ಪಸಂಖ್ಯಾತರಿಗೆ ಸಹಾಯ ಪ್ರತಿಭಾವಂತರಿಗೆ ಸಹಾಯ ಹೇಗೆ ಮಾಡಬೇ ಎಂಬ ರೂಪರೇಷಗಳನ್ನು ಸಂವಿಧಾನದಲ್ಲಿ ಬರೆದಿದ್ದಾರೆ ಸ್ವಾತಂತ್ರ ನಂತರ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಪುಸ್ತಕವನ್ನು ಸರ್ಕಾರಕ್ಕೆ ಅರ್ಪಿಸಿದ್ದಾರೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷರಾದ ಅತಿ ಹೆಚ್. ಎಮ್ ಬಸವರಾಜ್ ತಿಳಿಸಿದರು.
ಅವರು ನಗರದ ಅಲ್ಲಮ್ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯದಲ್ಲಿ
ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆಯ ಸುತ್ತೋಲೆ ಪ್ರಕಾರ ನಮ್ಮ ಸಂವಿಧಾನ ಸಂಗೀತಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,
ಸಂವಿಧಾನದಿಂದ ಈಗ ಎಲ್ಲರಿಗೂ ಸಮಪಾಲು ಸಮ ಬಾಳು ಸಿಗುವಂತಾಗಿದೆ ಎಂದು ತಿಳಿಸಿದರು ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಸಂವಿಧಾನ ರಚಿಸಿದರು ಸರ್ಕಾರದ ಆದೇಶದ ಪ್ರಕಾರ ಕಲಾ ಪ್ರತಿಷ್ಠಾನದ ಅಧ್ಯಕ್ಷರಾದ ಎಲ್ಲಪ್ಪ ಭಂಡಾರದವರು ಸಂವಿಧಾನ ಗೀತೆಗಳು ವಚನಗಳನ್ನು ಹಾಡಿದರು ಅಧ್ಯಕ್ಷತೆ ವಹಿಸಿದ್ದ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಭೂಪಂ ಸತೀಶ್ ರವರು ಸರ್ಕಾರ ಎಂತಹ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗಾಗಿ ಸುತ್ತೋಲೆ ಹೊರಡಿಸಿರುವುದು ಸ್ವಾಗತ ಅರ್ಹ ಎಂದು ತಿಳಿಸಿದರು.
ವೇದಿಕೆ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ. ನಿಷ್ಟಿ ರುದ್ರಪ್ಪ, ಚೋರ್ನೂರ್ ಕೊಟ್ಟಪ್ಪನವರು
ಡಾ. ಸೈದಾ ತನ್ವೀರ್ ಮಂಜುನಾಥ್ ಗೌಡ ಸುನಂದ ಮೂರ್ತಿ ಉಪಸ್ಥಿತರಿದ್ದರು. ನಂದಿನಿ ವಿ ಹೆಚ್ ಎಂ ನಿರೂಪಿಸಿದರು ಮೌನಿಕ ಮತ್ತು ಮುತ್ತಮ್ಮ ಪ್ರಾರ್ಥಿಸಿದರು ಡಾ. ಮಂಗಳ ಬಿಎನ್ ಸ್ವಾಗತಿಸಿದರು ಸತೀಶ ಜಕ್ಕಣ್ಣನವರ್ ವಂದಿಸಿದರು.


