ಬಳ್ಳಾರಿ, ಮಾ.03.: ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ ಮತ್ತು ವೀರಶೈವ ಲಿಂಗಾಯತ ಸಮಾಜದಿಂದ ನಿನ್ನೆ ಸಂಜೆ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಹಮ್ಮಿಕೊಂಡಿತ್ತು.
ಹರಗಿನದೋಣಿಯ ಪಂಚವರ್ಣಿಗಿ ಮಠದ ಅಭಿನವ ಸಿದ್ದಲಿಂಗ ಶ್ರೀಗಳು, ಸಾನಿಧ್ಯವಹಿಸಿದ್ದರು.
ಆಂದ್ರಪ್ರದೇಶದ ಪಾಲ್ತೂರು ಮಠದ ಚೆನ್ನವೀರಸ್ವಾಮಿ ಶ್ರೀಗಳು, ರೇಣುಕರ ಬಗ್ಗೆ ಉಪನ್ಯಾಸ ನೀಡಿ, ಧರ್ಮದ ಬಗ್ಗೆ ಕೇವಲ ಮಾತನಾಡಿದರೆ ಸಾಲದು, ಆಚರಣೆಯಲ್ಲಿ ಕಮ್ಮಿ ಆಗಬಾರದು. ಧರ್ಮವೂ ವಿಜ್ಞಾನದಿಂದ ಕೂಡಿದ್ದರೆ ಅದಕ್ಕೆ ಸಾವಿಲ್ಲ. ವೀರಶೈವ ಲಿಂಗಾಯತ ಧರ್ಮದ ಆಚರಣೆಯಲ್ಲಿ ವೈಜ್ಞಾನಿಕತೆ ಇರುವುದರಿಂದಲೇ ಇಂದಿಗೂ ಇದು ಜೀವಂತವಾಗಿರಲು ಸಾಧ್ಯವಾಗಿದೆಂದರು.
ಪಾಲಿಕೆ ಸದಸ್ಯೆ ಸುರೇಖ ಮಲ್ಲನಗೌಡ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ಬಿಚ್ಚುಗಲ್ ಪಂಚಾಕ್ಷರಪ್ಪ, ವೀರಶೈವ ವಿದ್ಯಾವರ್ಧಕ ಸಂಘದ ಖಜಾಂಚಿ ಬೈಲಯವದ್ದಿಗೇರಿ ಎರ್ರಿಸ್ವಾಮಿ, ಗ್ಯಾರೆಂಟಿ ಸಮಿತಿಯ ತಾಲೂಕು ಅಧ್ಯಕ್ಷ ರ್ಗೊನಾಳ್ ನಾಗಭೂಷಣಗೌಡ, ದರೂರು ಪುರುಷೋತ್ತಮಗೌಡ ಮೊದಲಾದವರು ಇದ್ದರು.
ಈ ವೇಳೆ ವೀರಶೈವ ಸಮಾಜದ ಮುಖಂಡರಾದ ಪಲ್ಲೇದ ಪಂಪಾಪತಿ, ಸಿದ್ದಾಂತ ಶಿಖಾಮಣಿಯ ಭೋದಕರಾದ ಅನುರಾಧ, ಸ್ವರ್ಣಲತ, ಗೀತಾ ಹೊಸರುಮಠ, ಸವಿತಾ, ವಾಣಿಶ್ರೀ, ನಾಗರಾಜ ಮಠಂ, ಡಾ.ರಾಜಶೇಖರ್ ಕೆರೆನಳ್ಳಿ, ಈಶ್ವರಸ್ವಾಮಿ, ಮಾಜಿ ಯೋಧ ರುದ್ರಮುನಿಸ್ವಾಮಿ, ಪಂಚ ಲೋಹದ ರೇಣುಕಾಚಾರ್ಯರ ವಿಗ್ರಹವನ್ನು ಮರಿಸ್ವಾಮಿ ಮಠಕ್ಕೆ ಕೊಡುಗೆಯಾಗಿ ನೀಡಿರುವ ಜೋಳದರಾಸಿ ಪ್ಯಾಟ್ಯಾಳ್ ಬಸವರಾಜ್ ಸೇರಿದಂತೆ ಅನೇಕ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯ್ತು.
ಸಂಡೂರಿನ ವೀರಭದ್ರಯ್ಯ ಮತ್ತು ತಂಡದಿಂದ ಭಕ್ತಿಗೀತೆಗಳ ಗಾಯನ ನಡೆಯಿತು. ಹೇಮಾ ಹಿರೇಮಠ, ನಾಗರತ್ನ ಅವರು ಕಾರ್ಯಕ್ರಮ ನಿರ್ವಹಿಸಿದರು. ಕಸಂ ಇಲಾಖೆಯ ಸನಿ ಬಿ.ನಾಗರಾಜ್ ಸ್ವಾಗತಿಸಿದರು. ಜಿಪಂ ಮಾಜಿ ಸದಸ್ಯ ಗೋನಾಳ್ ರಾಜಶೇಖರಗೌಡ ಪ್ರಸಾದದ ವ್ಯವಸ್ಥೆ ಮಾಡಿದ್ದರು.
ವೀರಶೈವ ಲಿಂಗಾಯತ ಸಮಾಜದ ಸಂಚಾಲಕ ಎಂ.ಚಂದ್ರಮೌಳಿ, ಬದವರಾಜ್ ಬಿಸಲಹಳ್ಳಿ,ಎಣ್ಣೆ ಎರ್ರಿಸ್ವಾಮಿ, ನಾಗರಾಜ ಸ್ವಾಮಿ, ಡಿ.ಅರುಣ್ ಕುಮಾರ್ ಮೊದಲಾದವರು ಇದ್ದರು.
ಮೆರವಣಿಗೆ:
ನಗರದ ಮುನಿಷಿಪಲ್ ಹೈಸ್ಕೂಲ್ ಮೈದಾನದಿಂದ ರೇಣುಕಾಚಾರ್ಯರ ಭಾವಚಿತ್ರ ಮತ್ತು ವಿಗ್ರಹದ ಮೆರವಣಿಗೆ ಗಡಗಿ ಚೆನ್ನಪ್ಪ ವೃತ್ತದ ಮೂಲಕ ರಂಗ ಮಂದಿರಕ್ಕೆ ಜನಪದ ಕಲಾ ತಂಡಗಳ ಮೂಲಕ ಸಾಗಿ ಬಂತು.


