ಭತ್ರಿ ಮಹೇಶ್ ಇನ್ನಿಲ್ಲ

Sandeep Malannavar
ಭತ್ರಿ ಮಹೇಶ್ ಇನ್ನಿಲ್ಲ
WhatsApp Group Join Now
Telegram Group Join Now
ಬಳ್ಳಾರಿ, ಮಾ.03: ನಗರದ ಕಾಂಗ್ರೆಸ ಪಕ್ಷದ ಮುಖಂಡ ಹಾಗು ಡಿಎಸ್ ಎಸ್ ಡಿ.ಜಿ.ಸಾಗರ್ ಬಣದ ನಗರ ಸಂಚಾಲಕರಾಗಿದ್ದ ಭತ್ರಿ ಮಹೇಶ್ (42) ಇಂದು ಬೆಳಿಗ್ಗೆ ಹದಯಾಘಾತದಿಂದ ನಿಧನರಾಗಿದ್ದಾರೆ.
ಇವರು ಪತ್ನಿ ಐಶ್ವರ್ಯ, ಓರ್ವ ಪುತ್ರಿ, ಮೂವರು ಪುತ್ರರು, ಸಹೋದರರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಇವರ ಅಂತ್ಯಕ್ರಿಯೆ ನಾಳೆ ಭತ್ರಿಯ ರುದ್ರಭೂಮಿಯಲ್ಲಿ ನಡೆಯಲಿದೆಂದು ಕುಟುಂಬದ ಮೂಲಗಳು ತಿಳಿಸಿವೆ.
ಶೋಕ:
ಮಹೇಶ್ ನಿಧನಕ್ಕೆ ಜಿಪಂ. ಮಾಜಿ ಸದಸ್ಯ ಎ.ಮಾನಯ್ಯ, ಮಹಾನಗರ ಪಾಲಿಕೆಯ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಪೇರಂ. ವಿವೇಕ್(ವಿಕ್ಕಿ) ಸೇರಿದಂತೆ ಅನೇಕ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.
WhatsApp Group Join Now
Telegram Group Join Now
Share This Article