ಮಹಾಲಿಂಗಪುರ: ಬಾಗಲಕೋಟೆಯ ಬಿವಿವಿಎಸ್ ಪಾಲಿಟೆಕ್ನಿಕ್ನಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯಮಟ್ಟದ ೫ನೇ ಐಎಸ್ಟಿಇ ಸ್ಪರ್ಧೆಗಳಲ್ಲಿ ಮಹಾಲಿಂಗಪುರದ ಕೆಎಲ್ಇ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡಿದ್ದಾರೆ.
ಮೆಕ್ಯಾನಿಕಲ್ ವಿಭಾಗದ ಭಾವಿಕ್ ಓಸ್ವಾಲ್ ಪೇಪರ್ ಪ್ರೆಜೆಂಟೇಶನ್ನಲ್ಲಿ ಪ್ರಥಮ, ಇಲೆಕ್ಟ್ರಿಕಲ್ ವಿಭಾಗದ ಶಿವಾನಂದ ನಾಗನೂರ ಪೋಸ್ಟರ್ ಮೇಕಿಂಗ್ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಇವರಿಗೆ ವಂದನಾ ಪಸಾರ, ಯು.ಡಿ.ಹಾದಿಮನಿ, ಸುಭಾಸ್ ಮೂಶಿ, ಲಕ್ಷ್ಮೀ ಅಂಗಡಿ, ಚೇತನ ಕುಂದರಗಿ, ಲಕ್ಷ್ಮೀ ಪಾಟೀಲ, ಮಂಜುನಾಥ ಅರಕೇರಿ, ವಿಶಾಲ ಮೆಟಗುಡ್ಡ ಮಾರ್ಗದರ್ಶನ ಮಾಡಿದ್ದರು.
ದೂರದ ಮಂಗಳೂರು, ಮೂಡಬಿದರೆ, ಬೆಂಗಳೂರು, ಗದಗ, ಹುಬ್ಬಳ್ಳಿ, ನಿಡಸೋಸಿ, ಬಾಗಲಕೋಟೆ, ಬೀಳಗಿ ಸೇರಿದಂತೆ ೨೦ ಪಾಲಿಟೆಕ್ನಿಕ್ನಿಂದ ೧೮೦ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಅದರಲ್ಲಿ ಗ್ರಾಮೀಣ ಭಾಗದ ಮಹಾಲಿಂಗಪುರದ ಕೆಎಲ್ಇ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಸಾಧನೆ ಹೆಮ್ಮೆ ತಂದಿದೆ ಪ್ರಾಚಾರ್ಯ ಎಸ್.ಐ.ಕುಂದಗೋಳ ತಿಳಿಸಿದ್ದಾರೆ.
೩ ಎಂಎಲ್ಪಿ ೧
ಮಹಾಲಿಂಗಪುರ ಕೆಎಲ್ಇ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ರಾಜ್ಯಮಟ್ಟದ ಐಎಸ್ಟಿಇ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ್ದಾರೆ.
ರಾಜ್ಯಮಟ್ಟದ ಐಎಸ್ಟಿಇ ಸ್ಪರ್ಧೆಗಳಲ್ಲಿ ಭಾವಿಕ್ ಓಸ್ವಾಲ್ ಪ್ರಥಮ


