ರನ್ನ ಬೆಳಗಲಿ:ಮಾ.೦೩., ಮುಧೋಳ ತಾಲೂಕಿನ ಸೊರಗಾಂವ ಗ್ರಾಮದ ಪಿ ಎಂ ಶ್ರೀ ಪ್ರೌಢ ಶಾಲೆಯಲ್ಲಿ &quoಣ;ಅಮ್ಮಾ ನಿನ್ನ ಕೈ ತುತ್ತು…&quoಣ;ಮತ್ತು &quoಣ;ಮಾತೃ ವಂದನೆ&quoಣ; ಕಾರ್ಯಕ್ರಮ ಜರುಗಿತು.
ಶಿವಕುಮಾರ ಮರನಾಳ ರಾಜನಕೋಳೂರ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮರಳಿ ಬಾರದ ಅಮೂಲ್ಯ ಸಂಪತ್ತು ಸಮಯ, ವ್ಯರ್ಥವಾಗಿ ಹಾಳಾಗುತ್ತಿದೆ ಅರಿವಿಲ್ಲದೆ. ೧೬ ವರ್ಷ ಕಳೆದ ನೀವೂ, ಉಳಿದ ಸಮಯದ ಮಹತ್ವ ಅರಿತು,ತಂದೆ-ತಾಯಿ ಗುರುಗಳ ತ್ಯಾಗವನ್ನು ಮನಗಂಡು ಶೈಕ್ಷಣಿಕ ಉತ್ತಮ ಸಾಧನೆಗೆ ಇಂದೇ ಸಂಕಲ್ಪ ಮಾಡಿ.ಸೋಲು ಅಪಮಾನ ಸಾಧನೆಗೆ ಮೆಟ್ಟಿಲಾಗಬೇಕು. ತೆಗಳುವವರ ಮಧ್ಯೆ ಹೊಗಳಿಸಿಕೊಳ್ಳುವ ವ್ಯಕ್ತಿತ್ವ ನಮ್ಮದಾಗಬೇಕು ಎಂದು ಹೇಳಿದರು.
ಹನಮಂತ ಡೋಣಿ ಆರ್ ಎಫ್ ಓ ಮುಧೋಳ ಆರೋಗ್ಯಕರ ದಿನಚರಿ ನಿಮ್ಮದಾಗಬೇಕು, ಕಷ್ಟಪಟ್ಟು ಓದದೇ ಇಷ್ಟಪಟ್ಟು ಓದುವ ಹವ್ಯಾಸ ಬೆಳೆಸಿಕೊಳ್ಳಿ. ಯೋಗ ಮತ್ತು ಆಟಗಳಿಗೆ ಸಮಯವನ್ನು ನೀಡಿ ಅವು ನಿಮ್ಮ ಮೆದುಳಿಗೆ ಶಕ್ತಿಯನ್ನು ನೀಡುತ್ತವೆ ಎಂದು ತಿಳಿಸಿದರು.
ಬಿ ಆರ್ ಶಿರೂರ ಪ್ರಧಾನ ಗುರುಗಳು ಅಮ್ಮಾ ನಿನ್ನ ಕೈ ತುತ್ತು ಕಾರ್ಯಕ್ರಮವು ಶಾಲೆ ಪ್ರಾರಂಭ ದಿಂದ ನಡೆದು ಬಂದಿದೆ.ತಾಯಿ ಮಾತಿನಯಂತೆ ನಡೆದ ವಿದ್ಯಾರ್ಥಿಗಳೇ ಸಾಧಕರಾಗಿ ಇತಿಹಾಸ ಪುಟ ಸೇರಿದ್ದಾರೆ. ಅವರೆಲ್ಲ ತಾಯಿಯನ್ನು ದೇವರಂತೆ ಪೂಜಿಸಿ ಪೋಷಿಸಿದವರೇ ಅವರಂತೆ ನೀವಾಗಬೇಕು. ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಪ್ರತಿ ವರ್ಷ ಆಯೋಜನೆ ಮಾಡುತ್ತಾ ಬಂದಿದ್ದೇವೆ ಎಂದು
ಹೇಳಿದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು, ತಾಯಂದಿರ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದರು. ಈ ವರ್ಷ ಸೇವೆ ಸಲ್ಲಿಸಿದ ಗೌರವ ಶಿಕ್ಷಕರಿಗೆ ಸನ್ಮಾನಿಸಿ ಬಿಳ್ಕೊಡಲಾಯಿತು.
ಪೂಜ್ಯರಾದ ಶ್ರೀ ಹೊಳೆಬಸಯ್ಯ ಹಿರೇಮಠ ಸಾನಿಧ್ಯವನ್ನು,ಎಸ್ ಡಿ ಎಮ್ ಸಿ ಅಧ್ಯಕ್ಷ ಗೈಬುಸಾಬ್ ನದಾಫ ಅಧ್ಯಕ್ಷತೆಯನ್ನು ವಹಿಸಿದರು. ನಿವೃತ್ತ ಶಿಕ್ಷಕ ಸಿ ಎಸ್ ಪಾಟೀಲ,ವೆಂಕಟೇಶಣ್ಣ ಮಳಲಿ,ಭೀಮಶಿ ಹಗಳಗಾರ, ಸದಾಶಿವ ಹೊಸವಾಲಿಕಾರ, ಬಸಪ್ಪ ಲೋಕಪುರ, ಬಲಭೀಮ ಪೂಜಾರಿ, ಎಮ್ ಕೆ ಅಮ್ಮಣಗಿ ಶಿಕ್ಷಕರು ಸ್ವಾಗತಿಸಿದರು,ಎಸ್ ಎಸ್ ಜೀರಗಾಳ ದೈಹಿಕ ಶಿಕ್ಷಕರು ವಂದಿಸಿದರು ಮತ್ತು ಎಸ್.ಡಿ.ಎಮ್.ಸಿ ಪದಾಧಿಕಾರಿಗಳು, ಶಿಕ್ಷಕರು,ಪಾಲಕ- ಪೋಷಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


