ಮದಬಾವಿ ಮಾ.೦೨- ಬಸವಾದಿ ಪ್ರಮಥರು ಕಂಡ ಜಾತಿ ವರ್ಗ ರಹಿತ ಕಲ್ಯಾಣ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಶಿವಶರಣೆಯರು ಕೂಡ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಎಂದು ಶರಣೆ ಭಾರತಿ ಮದಬಾವಿ ಹೇಳಿದರು.
ವಚನಪಿತಾಮಹ ಡಾ ಫ ಗು ಹಳಕಟ್ಟಿಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ.01ರಂದುನಡೆದ ಸಾಮೂಹಿಕ ಪ್ರಾಥ೯ನೆ ವಚನ ವಿಶ್ಲೇಷಣೆ ಕಾಯ೯ಕ್ರಮದಲ್ಲಿ ಶರಣೆ ಭಾರತಿ ಮದಬಾವಿ ಉಪನ್ಯಾಸ ನೀಡಿದರು. 12ನೇ ಶತಮಾನದಲ್ಲಿ ಶಿವಶರಣೆಯರಾದ ಗಂಗಾಬಿಕೆ, ನೀಲಾಂಬಿಕೆ ,ಅಕ್ಕ ನಾಗಮ್ಮ ದುಗ್ಗಳೆ ,ಸುಗ್ಗಳೆ,ಅಕ್ಕಮ್ಮ, ಸತ್ಯಕ್ಕ ,ದೂಪದ ಗೊಗ್ಗವ್ವ ,ಇನ್ನೂ ಅನೇಕ ಶರಣೆಯರು ಕಾಯಕ ತತ್ವವನ್ನು. ಪ್ರತಿಪಾದಿಸುತ್ತ ದಾಸೋಹ ಸೇವೆಯಲ್ಲಿ ನಿರತರಾಗಿದ್ದರು ಮೂಢನಂಬಿಕೆಗಳನ್ನು ತೊಡೆದು ಹಾಕುತ್ತ. ಎಲ್ಲ ಶರಣರೊಂದಿಗೆ ಅನುಭವ ಮಂಟಪದ ಕಾರ್ಯಕ್ರಮಗಳನ್ನು ಮುನ್ನಡೆಸಲು ಶ್ರಮಿಸಿದರು. ಕಾಶ್ಮೀರದ ನಿಜದೇವಿ ಬೊಂತಾದೇವಿ ಮತ್ತು ಅಕ್ಕಮಹಾದೇವಿ ವೀರ ವಿರಾಗಿಣಿ ಎನಿಸಿಕೊಂಡರೆ ಸುಗ್ಗಲೆ,ಜೀನಧರ್ಮ ಅನುಸರಿಸುವ ರಾಜಾ ಜಯಸಿಂಹನನ್ನು ಶಿವಭಕ್ತ ರನ್ನಾಗಿಸಿದ್ದಾಳೆ. ದಾಸಿಮಯ್ಯನ. ನುಡಿಯಂತೆ ಶರಣ ದಂಪತಿಗಳು ಕೂಡ ನಡೆದುಕೊಂಡಿದ್ದಾರೆ. ಇತಿಹಾಸದಲ್ಲಿ 33 ಶರಣಿಯರು 12.ನೇ ಶತಮಾನದಲ್ಲಿ ಒಮ್ಮೆಲೆ ಮೂಡಿ ಬಂದಿದ್ದು ವಚನಗಳನ್ನು ಬರೆದಿದ್ದು ಅಕ್ಕಮಹಾದೇವಿ ವೀರ ವಿರಾಗಿಣಿ ಎನಿಸಿಕೊಂಡಿದ್ದು. ಒಂದು ವಿಸ್ಮಯವೇ ಸರಿ. ವಚನ ಸಾಹಿತ್ಯವನ್ನು ಕಾಪಾಡಲು ಶ್ರಮಿಸಿ ಕಲ್ಯಾಣ ರಾಜ್ಯವನ್ನು ನಿರ್ಮಿಸಲು ಶರಣಿಯರು ತಮ್ಮ ಜೀವನ ತ್ಯಾಗ ಮಾಡಿ ಇಂದಿನ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಎಂದು ಶರಣೆ ಭಾರತಿ ಮದಬಾವಿ ಹೇಳಿದರು.
ಬಿ ಪಿ ಜೇವಣಿ ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು.ಪ್ರಣಿತಾ ವಸ್ತದಮಠ,ಮಹದೇವ ಕೆoಪಿಗೌಡ್ರ,ಜಯಶ್ರೀ ಚವಲಗಿ, ಸುವಣಾ೯ಗುಡಸ, ವಚನಗಾಯನ ಮಾಡಿದರು. ಮಹಾಂತೇಶ ಮೆಣಸಿನಕಾಯಿ ಪರಿಚಯಿಸಿದರು.ಸಂಗಮೇಶ ಅರಳಿ ನಿರೂಪಿಸಿದರು.ಪ್ರಸಾದ ಹೀರೇಮಠ ದಾಸೊಹಸೇವೆಗೈದರು. ಅವರ75 ನೇಜನ್ಮದಿನ ಆಚರಿಸಿದರು. ಶಶಿಭೂಷಣ ಪಾಟೀಲ, ವಿರೂಪಾಕ್ಷ ದೂಡ್ಡಮನಿ, ಬಸವರಾಜ ಕರಡಿಮಠ, ಸಿದ್ದಪ್ಪ ಸಾರಪೂರಿ, ಶಿವಪುತ್ರಯ್ಯ ಪೂಜಾರ, ಪ. ಬ.ಕರಿಕಟ್ಟಿ, ಶಂಕರ ಗುಡಸ, ವಿಕೆಪಾಟೀಲ,ವಿದ್ಯಾ ಕರಕಿ, ಶಾರದಾ ಹಿರೇಮಠ, ಶಾಂತಾ ಕoಬಿ, ನoದಾ ಬಗಲಿ, ಜ್ಯೋತಿ ಬದಾಮಿ, ಆನಂದಕರಕಿ, ಶಂಕರ ಗುಡಗನಟ್ಟಿ ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದರು.


