ಪತ್ರಕರ್ತರು, ಪತ್ರಿಕಾ ರಂಗದಿಂದ ದೇಶ ಸುವ್ಯಸ್ಥಿತವಾಗಿ ನಡೆಯಬೇಕು : ಶ್ರೀ ಸಿದ್ದರಾಮ ಮಹಾಸ್ವಾಮಿಗಳು

Hasiru Kranti
ಪತ್ರಕರ್ತರು, ಪತ್ರಿಕಾ ರಂಗದಿಂದ ದೇಶ ಸುವ್ಯಸ್ಥಿತವಾಗಿ ನಡೆಯಬೇಕು : ಶ್ರೀ ಸಿದ್ದರಾಮ ಮಹಾಸ್ವಾಮಿಗಳು
WhatsApp Group Join Now
Telegram Group Join Now

ಬಳ್ಳಾರಿ. ಪತ್ರಿಕಾರಂಗದಲ್ಲಿ ನಡೆಯುವ ನೂತಯ ಯೋಜನೆಗಳನ್ನು ಅನುಷ್ಠಾನ, ಹೊಸ ವಿಷಯ ಮತ್ತು ಜ್ಞಾನ ಪಡೆಯಲು ಪತ್ರಕರ್ತರ ಸಮ್ಮೇಳನ ನಡೆಸುವದು ಉತ್ತಮ ಕಾರ್ಯ ಅಗಿದ್ದು, ದೇಶದ ಎಲ್ಲ ಪತ್ರಿಕಾ ರಂಗ ಉನ್ನತ ಸಾಧನೆ ಮಾಡುತ್ತಿದ್ದು, ಅನೇಕ ವಿಶ್ವವಿದ್ಯಾಲಯಗಳಲ್ಲಿ ಪತ್ರಿಕಾ ರಂಗದ ಪದವಿ ಪಡೆಯಲು ಅವಕಾಶ ಇದ್ದು ಅದರ ಸದುಪಯೋಗ ಪಡೆಯಿರಿ, ಇಂದು ಮುದ್ರಣ, ಎಲೆಕ್ಟ್ರಿಕಲ್, ಯು ಟ್ಯೂಬ್, ಸಾಮಾಜಿಕ ಜಾಲತಾಣ ಮೊನ್ನೆಲೆಗೆ ಬಂದಿದ್ದು, ದೇಶದ ಅಭಿವೃದ್ಧಿಗೆ, ದೇಶದ ಆಡಳಿತ, ದೇಶ ಸುವ್ಯವಸ್ಥಿತವಾಗಿ ಮುಂದುವರಿಯಲು ಪತ್ರಿಕಾ ರಂಗ ಕೆಲಸ ಮಾಡಬೇಕು, ಕೃ. ಶ ಪೂರ್ವದಲ್ಲಿ ಪತ್ರಿಕೆ ಕೆಲಸ ಮಾಡುತಿದ್ದವು, ಇದರ ಸಮಾಚಾರ ಸಂಗ್ರಹಿಸಿ, ತಿದ್ದಿ ತೀಡಿ, ಕಳುಹಿಸುವ ಕೆಲಸ ಪತ್ರಕರ್ತರು ಮಾಡಬೇಕು,ಪತ್ರಕರ್ತರು ಸಮಾಜಮುಖವಾಗಿ ಕೆಲಸ ಮಾಡಬೇಕು, ನನ್ನ ಅಭಿವ್ಯಕ್ತವನ್ನು ತಮ್ಮಗೆ ತಿಳಿಸುತ್ತೇನೆ. ಸಾಮಾಜಿಕ ಜವಾಬ್ದಾರಿ, ಸ್ವಾತಂತ್ರ್ಯ, ದೇಶದ ಅಭಿವೃದ್ಧಿಗೆ ಪತ್ರಕರ್ತರ ಕಾರ್ಯ ಉತ್ತಮವಾಗಿರಬೇಕು, ಸತ್ಯವನ್ನು ಹೇಳಬೇಕು, ಪ್ರಿಯವಾಗಿ ಹೇಳಬೇಕು, ಅಪ್ರಿಯವಾದ ಕ್ರಿಯೆಯನ್ನು ಹೇಳಬಾರದು, ಇಂದು ಇಂಡಿಯನ್ ಜರ್ನಲಿಸ್ಟ್ ಯಿನಿಯನ್ ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ಕಾರ್ಯ ಅನನ್ಯವಾಗಿ ಕೆಲಸ ಮಾಡುತ್ತಿದ್ದು, ಪತ್ರಕರ್ತರ ಪ್ರೀತಿ, ವಿಶ್ವಾಸ, ಮುಂದೆ ಏನು ಮಾಡಬೇಕು ಎಂಬುದರ ಕುರಿತಿ ದೇಶದ ನಾನಾ ಕಡೆಯ ಪತ್ರಕರ್ತರು ಸೇರಿದ್ದೀರಿ, ಇದು ಒಂದು ಸುಸಂದರ್ಭ ಎಂದು ಗದುಗಿನ ಶ್ರೀ ತೊಂಟದಾರ್ಯ ಡಂಬಳ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ಮಾತನಾಡಿದರು.

ಅವರು ನಗರದ ನಕ್ಷತ್ರ ಹೋಟೆಲನಲ್ಲಿ ಶುಕ್ರವಾರದಂದು ಆಯೋಜಿಸಲಾಗಿದ್ದ ಇಂಡಿಯನ್ ಜರ್ನಲಿಸ್ಟ್ ಯೂನಿಯನ ಹಾಗೂ ಕರ್ನಾಟಕ ಪತ್ರಕರ್ತರ ಸಂಘ ಮತ್ತು ಪತ್ರಕರ್ತರ ಸಂಘ ಬಳ್ಳಾರಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಜಿ ರಾಜ್ಯದ ಸಚಿವರು, ಮಾಜಿ ಸಂಸದರು ಆದ ಬಿ. ಶ್ರೀರಾಮಲು ಮಾತನಾಡಿ ದೇಶ ಕಾಯುವ ಸೈನಿಕರು ಹಾಗೂ ದೇಶದ ಪತ್ರಕರ್ತರು ಎರಡು ಕಣ್ಣುಗಳು ಇದ್ದಂತೆ ನೀವೆಲ್ಲರೂ ಇದ್ದೀರಿ, 1932 ರ ವಿಜಯನಗರ ಸಾಮ್ರಾಜ್ಯದ ಪ್ರಮುಖ ನಗರವಾಗಿದ್ದ ಬಳ್ಳಾರಿ ನಗರಕ್ಕೆ ವಿಶಿಷ್ಟವಾದ ಸ್ಥಾನಮಾನವಿದ್ದು, ಹಕ್ಕ ಬುಕ್ಕರ ಕಾಲದಲ್ಲಿ ಧೂತರು ಅಂತಾ ಇದ್ದರು ಅವರು ಆಗಿನ ಕಾಲದ ಪತ್ರಕರ್ತರಾಗಿ ಕೆಲಸ ಮಾಡುತಿದ್ದರು. ತದನಂತರ ಗಿಡದ ಕೆಳಗೆ ಕುಳಿತು ತಮ್ಮ ತತ್ವ ಜ್ಞಾನದಿಂದ ಸವಿಸ್ತಾರ ವರದಿ, ಲೇಖನ ಬರೆಯುತ್ತಿದ್ದರು,ಈಗಿನ ಕಾಲದ ಅತ್ಯಾಧುನಿಕ ತಂತ್ರಜ್ಞಾನ ಮುಂದುವರೆದಿರುವ ಪತ್ರಿಕಾ ರಂಘದಲ್ಲಿ ಸ್ಪರ್ಧೆ ಇದ್ದು, ಸಮಾಜದ ಕಿವಿ, ಕಣ್ಣುಗಳಂತೆ ಪತ್ರಕರ್ತರು ಕೆಲಸ ಮಾಡುತ್ತಿದ್ದು, ಯುದ್ಧದಲ್ಲಿ, ಕೋಮು ಗಳಭೆಗಳಲ್ಲಿ ಪ್ರಾಣದ ಹಂಗು ತೋರುದು ಪತ್ರಕರ್ತರು ವರದಿ ಮಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ಅನೇಕರು ಪ್ರಾಣತ್ಯಾಗವನ್ನು ಸಹ ಮಾಡಿದ್ದು, ಪತ್ರಕರ್ತರ ಸಮಸ್ಯೆಗಳ ಬಗೆಹರಿಸಲು ಎಲ್ಲ ಸರ್ಕಾರಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು.

ಸಂಡೂರ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಈ ಅನ್ನಪೂರ್ಣ ಅವರು ಮಾತನಾಡಿ ಬಳ್ಳಾರಿ ಇತಿಹಾಸ ಗಮನಿಸಿದಾಗ ಪತ್ರಿಕೆಯ ಇತಿಹಾಸ ಇಲ್ಲಿಯೇ ಪ್ರಾರಂಭ ಅಗಿದ್ದು, ಕನ್ನಡ ಸಮಾಚಾರ ಇಲ್ಲೇಯೇ ಕೆಲಸ ಮಾಡಿದ್ದು, ಮೊದಲು ಮಂಗಳೂರು ನಂತರ ಇಲ್ಲಿ ಪ್ರಾರಂಭ ಆಗತ್ತೆ, ಲಂಡನ್ ಮಿಶಿನರಿ ಮುದ್ರಣಾಲಯದಲ್ಲಿ ಮುದ್ರಣ ಆಗುತಿತ್ತು,ಬಳ್ಳಾರಿಯಲ್ಲಿ ತಾವು ಪತ್ರಿಕಾ ಸಮ್ಮೇಳನಕ್ಕೆ ಬಂದಿದ್ದು ಬಳ್ಳಾರಿ ಜನರ ಪುಣ್ಯ, 4 ಅಂಗಗಳಲ್ಲಿ ಒಂದು ಪತ್ರಿಕಾರಂಗ , ಸಮಾಜಕ್ಕೆ ಮಾಹಿತಿ, ಶಿಕ್ಷಣ, ಅರಿವು ಮೂಡಿಸುವ ಅಂಗ ಅಗಿದ್ದು,ಕರ್ತವ್ಯಕ್ಕೆ ಬದ್ಧರಾಗಿ ಕೆಲಸ ಮಾಡ್ತಾ ಇದ್ದೀರಿ, ವೇಗವಾಗಿ ತಂತ್ರಜ್ಞಾನದಿಂದ ಸುದ್ದಿ ಪ್ರಸಾರ ಮಾಡುತ್ತಿದ್ದು, ಚಾನಲ ಗಳ ರೇಟಿಂಗ್ ಸಲುವಾಗಿ ಕೆಲಸ ಮಾಡಲು ಸುಳ್ಳು ಸುದ್ದಿ ಬಿಂಬಿಸುವದು ಅಲ್ಲ, ಆಡಳಿತದ ತಪ್ಪು ಒಪ್ಪುಗಳ ವರದಿ ಮಾಡಿ ಸಾರ್ವಜನಿಕ ಸಮಸ್ಯಗಳ ಬಗ್ಗೆ ಸುಧಾರಣೆಯನ್ನು ಮಾಡಲು, ಮಹಿಳೆಯರ ಗೌರವ, ಮರ್ಯಾದೆಗಳಿಗೆ ದಕ್ಕೆ ತರದ ಹಾಗೆ ತಾವು ಕರ್ತವ್ಯ ನಿರ್ವಹಿಸಿ, ಜನಪ್ರತಿನಿದಿಗಳು ಕೆಲಸ ಮಾಡದಿದ್ದರೆ ಅವರ ವಿರುದ್ಧ ವಸ್ತುನಿಷ್ಟ ವರದಿ ಮಾಡಿ ಜನತೆಗೆ ಕೆಲಸ ದೊರಕಿಸುವ ಕೆಲಸ ಮಾಡಬೇಕು. ಸರ್ಕಾರ ಪತ್ರಕರ್ತರ ಕುಟುಂಬಕ್ಕೆ ರಕ್ಷಣೆ, ಅರೋಗ್ಯ ವಿಮೆ,ಶಿಕ್ಷಣ, ಪಿಂಚಣಿ ನೀಡುವ ಕೆಲಸ ಆಗಬೇಕು. ಅವರ ಹಕ್ಕುಗಳನ್ನು ಹತ್ತಿಕ್ಕುವ ಕೆಲಸ ಆಗಬೇಕೆಂದು ಹೇಳಿದರು.

ರಾಷ್ಟ್ರೀಯ ಪತ್ರಕರ್ತರ ಸಮ್ಮೇಳನದಲ್ಲಿ ಇಂಡಿಯನ್ ಜರ್ನಲಿಸ್ಟ್ ಯೂನಿಯನ ಅಧ್ಯಕ್ಷ ಕೆ ಬಿ ಪಂಡಿತ ಮಾತನಾಡಿ ಇಂದಿನ ಪರಿಸ್ಥಿತಿಯಲ್ಲಿ ದೇಶದ ತುಂಬೆಲ್ಲ ಪತ್ರಕರ್ತರ ಸಮಸ್ಯೆಗಳು ಹೆಚ್ಚು ಆಗುತ್ತಿದ್ದು , ಸಮಸ್ಯೆಗಳ ಪರಿಹಾರಕ್ಕೆ ಅಲ್ಪ ಸ್ವಲ್ಪ್ ಪ್ರಮಾಣದಲ್ಲಿ ಕೆಲಸ ಮಾಡುತ್ತಿದ್ದು ಇದರಿಂದ 10% ಮಾತ್ರ ಸಮಸ್ಯ ಪರಿಹಾರ ಅಗಿದ್ದು, 90% ಸಮಸ್ಯ ಹಾಗಿವೆ ಇವೆ. ಈ ಸಂಘದ ಬೆಳವಣಿಗೆಗೆ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಮುರಗೇಶ ಶಿವಪೂಜಿ, ಹಾಗೂ ಬಳ್ಳಾರಿಯಲ್ಲಿ ಜಿಲ್ಲಾ ಅಧ್ಯಕ್ಷ ಯಾಲ್ಪಿ ಭಾಷಾ ಹಾಗೂ ತಂಡ ಕಾರ್ಯಕ್ರಮದ ಆಯೋಜನೆ ಅದ್ಭುತವಾಗಿ ಮಾಡಿದ್ದು, ರಾಜ್ಯದ ಪ್ರತಿನಿಧಿಗಳು ಸಂಘದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು, ರಾಷ್ಟ್ರಿಯ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮುರುಗೇಶ ಶಿವಪೂಜಿ ಮಾತನಾಡಿ ಸಂಘ ಪ್ರಾರಂಭದಲ್ಲಿ ಒಂದು ಲಕ್ಷ ರೂಪಾಯಿಗಳ ನಮ್ಮ ಸಂಘದ ಸದಸ್ಯರಿಗೆ ವಿಮೆ ಯೋಜನೆ ಪ್ರಾರಂಭ ಮಾಡಿ ಇಂದು 4 ಲಕ್ಷ ರೂಪಾಯಿಗಳ ವಿಮೆ ಮತ್ತು ಚಿಕಿತ್ಸೆಗೆ ಸುಮಾರು 80 ಸಾವಿರ ರೂಪಾಯಿವರೆಗೆ ಧನ ಸಹಾಯ ನೀಡುತ್ತಿದ್ದು, ನಮ್ಮ ಸಂಘದ ಗೌರವ ಅಧ್ಯಕ್ಷರಾಗಿ ಗದಗ ಡಂಬಳ ಶ್ರೀ ತೊಂಟದ ಜಗದುರು ಶ್ರೀ ಸಿದ್ದರಾಮ ಮಹಾಸ್ವಾಮಿಗಳು ಮಾರ್ಗದರ್ಶನ ನೀಡುತ್ತಿದ್ದು.ಕರ್ನಾಟಕ ಪತ್ರಕರ್ತರ ಸಂಘದ ಟ್ರಸ್ಟ್ ಸ್ಥಾಪನೆ ಮಾಡಿದ್ದು ಇದರ ಗೌರವಧ್ಯಕ್ಷರಾಗಿ ನಾಗನೂರು ಬೆಳಗಾವಿ ರುದ್ರಾಕ್ಷಿ ಮಠದ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು ಮಾರ್ಗದರ್ಶನ ನೀಡುತ್ತಿದ್ದು, ಹಲವಾರು ಶ್ರೀಗಳು ರುದ್ರಾಕ್ಷಿ ಮಠದಲ್ಲಿ ಶಿಕ್ಷಣ ಪಡೆದು, ಶರಣ್ ಶಿಕ್ಷಣ ಅಧ್ಯಯನ ಮಾಡಿ ಅನೇಕ ಮಠಗಳ ಪೀಠಧಿಪತಿಗಳಾಗಿ ಧರ್ಮ ಕಾರ್ಯ ಮಾಡುತ್ತಿದ್ದಾರೆ ಎಂದರು.

ಬಿಹಾರ ರಾಜ್ಯದ ಮಾಜಿ ಸದಸ್ಯ ಅನಿಲ ಹೆಗಡೆ ಹಿಂದಿನ ಪತ್ರಿಕಾ ವ್ಯವಸ್ಥೆ, ಪತ್ರಕರ್ತರ ಕುರಿತು ಮಾತನಾಡಿದರು.

ರಾಜ್ಯದ ವಿವಿಧ ರಾಜ್ಯಗಳ ರಾಜ್ಯಾಧ್ಯಕ್ಷರಾದ ದೊರೆಸ್ವಾಮಿ, ವಿನೋದ ಪಾಂಚಾಲ, ಪರಮಾನಂದ ಮಿಶ್ರಾ, ಆಸೀಫ್ ಚೌದರಿ, ಗಿರೀಶ ಪಟ್ಟಣಶೆಟ್ಟಿ, ನವೀನ ಕುಮಾರ ಇವರುಗಳು ಮಾತನಾಡಿ ಪತ್ರಕರ್ತರ ಸಮಸ್ಯ, ಪರಿಹಾರ, ಸಂಘಟನೆ ಬೆಳವಣಿಗೆಗೆ ಕ್ರಮಗಳ ಕುರಿತು ಸುದೀಘ್ರವಾಗಿ ಮಾತನಾಡಿದರು.ಇದೆ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ವೆಬಸೈಟ್ ಉದ್ಘಾಟನೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಗೋವಾ ರಾಜ್ಯದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಆಯುಕ್ತರಾದ ಕಿರಣ ಮನನಕರ, ರಾಜ್ಯ ಸಂಘದ ಉಪಾಧ್ಯಕ್ಷರಾದ ಸುದೇಶ ಕುಮಾರ, ಕೆ ಭಜರಪ್ಪ,, ಗಿರೀಶ ಕುಮಾರಗೌಡ, ವೀರಭದ್ರಗೌಡ, ಕೋಶಧ್ಯಕ್ಷರಾದ ಬಿ ಪಂಪನಗೌಡ,, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಮುಚಳಂಬಿ, ಗೋಪಾಲ ಸಂಡೂರ, ದುರ್ಗೇಶ್ ಯಾದವ, ಶರಣಪ್ಪ ಯಾರ್ಕನಕಿ, ದತ್ತಾತ್ರೇಯ ಹೆಗಡೆ,ಬಳ್ಳಾರಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಯಾಲ್ಪಿ ಭಾಷಾ, ಬೆಳಗಾವಿ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷರು, ಕರ್ನಾಟಕ ಪತ್ರಕರ್ತರ ಸಂಘದ ಕಾನೂನು ಸಲೆಗಾರರಾದ ಬಸವರಾಜ ರೊಟ್ಟಿ ಸೇರಿದಂತೆ ಎಲ್ಲ ರಾಜ್ಯಗಳ ರಾಷ್ಟ್ರೀಯ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಸದಸ್ಯರು, ಕರ್ನಾಟಕ ಪತ್ರಕರ್ತರ ಸಂಘದ ಎಲ್ಲ ಜಿಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article