ಬಳ್ಳಾರಿ, ಫೆ.19:.. ನಗರದ ಉದಯ ಕಿರಣ್ ಡಿ. ಇತ್ತೀಚೆಗೆ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ.
ಇವರು ಆಶಾಕಿರಣ ಪತ್ರಿಕೆಯ ಸಂಪಾದಕರಾಗಿದ್ದ ದಿವಂಗತ ಡಿ. ಯರ್ರಿಸ್ಬಾಮಿ ಅವರ ನಾಲ್ಕನೇ ಪುತ್ರರಾಗಿದ್ದಾರೆ. ಬಳ್ಳಾರಿಯಲ್ಲಿಯೇ ಹುಟ್ಟಿ ಬೆಳೆದ ಇವರು ನಗರದ ಬಿಐಟಿಎಂ ಕಾಲೇಜಿನಲ್ಲಿ ಇಂಜಿನೀಯರಿಂಗ್ ಮುಗಿಸಿ, ನಂತರ ವೀರಶೈವ ವಿದ್ಯಾವರ್ಧಕ ಸಂಘದ ವುಂಕಿ ಸಣ್ಣರುದ್ರಪ್ಪ ಲಾ ಕಾಲೇಜಿನಲ್ಲಿ ಎಲ್ ಎಲ್ ಬಿ ಪದವಿಯನ್ನು 2023 ರಲ್ಲಿ ಮುಗಿಸಿ ಖಾಸಗಿಯಾಗಿ ವಕೀಲ ವೃತ್ತಿ ಆರಂಭಿಸಿದ್ದರು.
ಒಟ್ಟಾರೆ 15 ಸಾವಿರ ಜನರು ಪ್ರಿಲಿಮಿನರಿ ಪರೀಕ್ಷೆ ಎದುರಿಸಿದ್ದರು ಅದರಲ್ಲಿ 900 ಜನ ಮೇನ್ಸ್ ಪರೀಕ್ಷೆಗೆ ಆಯ್ಕೆಯಾಗಿದ್ದರು. ಅವರಲ್ಲಿ 252 ಜನ ಈ ಪರೀಕ್ಷೆ ಎದುರಿಸಿದ್ದರು. ಅಂತಿಮವಾಗಿ 83 ಜನ ಆಯ್ಕೆಯಾಗಿದ್ದು ಅವರಲ್ಲಿ ಇವರು ಒಬ್ಬರಾಗಿದ್ದಾರೆ.
ಇವರ ಹಿರಿಯ ಸರ್ಹೊದರ ಡಿ.ಕ್ರಾಂತಿ ಕಿರಣ ಅವರು ಈಗಾಗಲೇ ನ್ಯಾಯಾಧೀಶರಾಗಿ ದೊಳ್ಳಬಳ್ಳಾಪುರದಲ್ಲಿ ಕಾರ್ಯನಿರ್ವಾಹಿಸುತ್ತಿದ್ದಾರೆ. ಇದರಿಂದಾಗಿ ಒಂದೇ ಮನೆಯಲ್ಲಿ ಇಬ್ಬರು ನ್ಯಾಯಾಧೀಶರಾಗುವ ಮೂಲಕ ಗಮನ ಸೆಳೆದಿದ್ದಾರೆ.
ಇವರ ಆಯ್ಕೆಗೆ ವೀರಶೈವ ವಿದ್ಯಾವರ್ಧಕ ಸಂಘದ ವುಂಕಿ ಸಣ್ಣ ರುದ್ರಪ್ಪ ಲಾ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಮಿಂಚೇರಿ ನರೇಂದ್ರಬಾಬು ಮತ್ತು ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.


