ಬಳ್ಳಾರಿ, ಫೆ.19: ನಗರದಲ್ಲಿನ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಹೊಸ ಸದಸ್ಯತ್ವ ನೀಡಬೇಕು ಎಂದು ವೀರಶೈವ ವಿದ್ಯಾವರ್ಧಕ ಸಂಘದ ಸದಸ್ಯತ್ವ ಹೋರಾಟ ಸಮಿತಿ ಆಗ್ರಹಿಸಿದೆ.
ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ ಸಮಿತಿಯ ಸಂಚಾಲಕ ಎಸ್.ಎಂ.ಕಾಶೀನಾಥಯ್ಯ, ಮುಖಂಡರುಗಳಾದ ಕಿರಣ್ ಶಂಕ್ರಿ, ಓಂಕಾರೇಶ್ವರ, ಮಧುರ ಚೆನ್ನ ಶಾಸ್ತ್ರಿ, ರೇವಣಸಿದ್ದಯ್ಯ, ರವಿಕಾಂತ್ ಮೊದಲಾದವರು. ಹಿರಿಯರ, ಶ್ರೀಗಳ, ದಾನಿಗಳಿಂದ ಸ್ಥಾಪಿತಗೊಂಡ ಶಿಕ್ಚಣ ಸಂಸ್ಥೆ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘ ಆರಂಭಗೊಂಡು ಶತಮಾನ ಕಳೆದಿದೆ. ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ 46 ಶಿಕ್ಷಣ ಸಂಸ್ಥೆಗಳನ್ನು ಹೊಂದಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದೆ.
ಈ ಸಂಸ್ಥೆಯಲ್ಲಿ ಆಜೀವ ಸದಸ್ಯರಾಗಿದ್ದ 400 ಕ್ಕೂ ಹೆಚ್ಚು ಜನರು ನಿಧನರಾಗಿದ್ದಾರೆ. ಕಳೆದ ಎರೆಡು ದಶಕಗಳಿಂದ ಹೊಸ ಸದಸ್ಯತ್ವ ನೀಡುತ್ತಿಲ್ಲ. ಕೆಲ ಪಟ್ಟಭದ್ರಹಿತಾಶಕ್ತಿಗಳು ಹೊಸ ಸದಸ್ಯತ್ವ ನೀಡಿದರೆ ತಮ್ಮ ಆಟ ನಡೆಯಲ್ಲ ಎಂದು ಹೊಸ ಸದಸ್ಯತ್ವ ನೀಡುತ್ತಿಲ್ಲ. ಸಂಘದ ಚುನಾವಣೆ ಬಂದಾಗಲೆಲ್ಲ ಮತ ಕೇಳಲು ಬರುವವರು ಅಲ್ಲಂ ಬಸವರಾಜ್, ಉಡೇದ ಬಸವರಾಜ್, ರಾಮನಗೌಡ ಸೇರಿದಂತೆ ಬಹುತೇಕರು ಈ ಬಾರಿ ಹೊಸ ಸದಸ್ಯತ್ವ ನೀಡುತ್ತೇವೆ ಎಂದು ಮೂಗಿಗೆ ತುಪ್ಪ ಹಚ್ಚುತ್ತಾರೆ. ನಂತರ ಅದೇ ರಾಗ ಅದೇ ಹಾಡು.
ಪ್ರತಿವೊಬ್ಬ ಲಿಂಗಾಯತ ಸಮಾಜದ ಜನರಿಗೂ ಸದಸ್ಯತ್ವ ನೀಡಬೇಕು. 46 ಸಂಸ್ಥೆಗಳಿದ್ದು ಅವು ಸರಿಯಾದ ಆಡಳಿತ ಇಲ್ಲದೆ ಅವನತಿಗೆ ಬರುತ್ತವೆ. ಕೆಲವೇ ಜನರು ತಾವೇ ಇರಬೇಕೆಂದು ಹೊಸ ಸದಸ್ಯತ್ವ ನೀಡುತ್ತಿಲ್ಲ ಎಂದು ಆರೋಪಿಸಿದರು.
ಸಂಘಕ್ಕೆ ಸದಸ್ಯತ್ವ ತೆಗೆದುಕೊಂಡರೆ ಆದಾಯ ಬರುತ್ತದೆ ಆದರೂ ಬೇಡ ಎನ್ನುವುದೇಕೆ ವೀರಶೈವ ಲಿಂಗಾಯತ ಸಮಾಜದ ಯಾರೇ ಕೇಳಲಿ ಸದಸ್ಯತ್ವ ನೀಡಬೇಕು ಎಂದು ಆಗ್ರಹಿಸಿದರು .
ಈ ಬಾರಿ ಸದಸ್ಯತ್ವ ನೀಡಿದ್ದರೆ ಬರುವ ಚುನಾವಣೆಯಲ್ಲಿ ನಾವು ನಮ್ಮದೇ ರೀತಿಯಲ್ಲಿ ಪಾಠಕಲಿಸಲು ಪ್ರತ್ನಿಸುತ್ತೇವೆ ಎಂದರು.
ಈ ಕುರಿತು ಇಂದು ಸಂಘದ ಅಧ್ಯಕ್ಷರಿಗೆ ಮನವಿ ನೀಡಿ ಒಂದು ತಿಂಗಳ ಕಾಲ ಗಡುವು ನೀಡುತ್ತೇವೆ ಈ ಕುರಿತು ನಿರ್ಧಾರ ಪ್ರಕಟಿಸಲು. ಜೊತೆಗೆ ಸಹಕಾರ ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡಲಿದೆ ಕ್ರಮಕ್ಕೆ. ಅಲ್ಲಿಗೂ ಆಗದಿದ್ದರೆ ಕಾನೂನು ಹೋರಾಟ ಮಾಡಲಿದೆಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಸಂಘದ ಸದಸ್ಯರಲ್ಲದ ಹೊಸಪೇಟೆ, ಹಡಗಲಿ, ಕೊಟ್ಟೂರು ಮೊದಲಾದಡೆಗಳಿಂದ ವೀರಶೈವ ಸಮಾಜದ ಮುಖಂಡರು ಆಗಮಿಸಿದ್ದರು.


