ಜಾತಿ ಭೇದವಿಲ್ಲದ ಸೌಹಾರ್ದ ಬದುಕು ಸಾಗಿಸುವ ಪಟ್ಟಣ ಮಹಾಲಿಂಗಪುರ : ಶ್ರೀ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಶ್ರೀಗಳು

Sandeep Malannavar
ಜಾತಿ ಭೇದವಿಲ್ಲದ ಸೌಹಾರ್ದ ಬದುಕು ಸಾಗಿಸುವ ಪಟ್ಟಣ ಮಹಾಲಿಂಗಪುರ : ಶ್ರೀ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಶ್ರೀಗಳು
WhatsApp Group Join Now
Telegram Group Join Now

ಮಹಾಲಿಂಗಪುರ: ಜಾತಿ ಭೇದ ಎನ್ನದೆ ಎಲ್ಲರೂ ಸೇರಿ ಸೌಹಾರ್ದ ರೀತಿಯಿಂದ ಬದುಕುವ ಪಟ್ಟಣ ಮಹಾಲಿಂಗಪುರ ಎಂದು ಶ್ರೀ ಗುರು ಮಹಾಲಿಂಗೇಶ್ವರ ಮಠದ ಅಧಿಪತಿ ಶ್ರೀ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಶ್ರೀಗಳು ಹೇಳಿದರು.
ಭಾನುವಾರ ಮುಂಜಾನೆ ಮಾದಿಗ ಸಮುದಾಯದ ರುದ್ರಭೂಮಿಯಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಬೃಹತ್ ಶಿವನ ಮೂರ್ತಿ ಉದ್ಘಾಟನೆ ಮಾಡಿ ಭಕ್ತರಿಗೆ ಆಶೀರ್ವಚನ ನೀಡಿದ ಅವರು, ಮಾದಿಗ ಸಮುದಾಯದವರು ಶಿವನ ಮೂರ್ತಿಯನ್ನು ಮಾಡಿ ಭಕ್ತಿಯನ್ನು ಸಮರ್ಪಿಸುತ್ತಿರುವುದು ಒಳ್ಳೆಯ ಕೆಲಸ. ದೇವರು ಭೂಮಿ ಮೇಲಿನ ಸಕಲ ಚರಾಚರ ವಸ್ತುಗಳಿಗೆ ಒಡೆಯನಾಗಿದ್ದು, ಎಲ್ಲರನ್ನು ಆತ ಸಮನಾಗಿ ನೋಡುತ್ತಾನೆ. ಆದ್ದರಿಂದ ನಾವು ಸಹಿತ ಆ ಶಿವನನ್ನು ಭಕ್ತಿ ಪೂರ್ವಕವಾಗಿ ಆರಾಧನೆ ಮಾಡುತ್ತ ನಮ್ಮ ಬದುಕನ್ನು ಸಾರ್ಥಕ ಗೊಳಿಸಿಕ್ಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಮಾಜದ ಭೀಮಸಿ ಗೌಂಡಿ, ಶಿವಬಸು ಗೌಂಡಿ, ನಾಗಪ್ಪ ಗೌಂಡಿ, ಅರ್ಜುನ್ ಆನೆಪ್ಪಗೋಳ, ಕಲಾವಿದರಾದ ಡಿ.ಕೆ. ರಂಗನಾಥ್, ಪರಶುರಾಮ ಮೇತ್ರಿ,ಮಾಲಿಂಗಪ್ಪ ಅಮಲಜೇರಿ, ಪ್ರಶಾಂತ ಮುಖ್ಯೆನವರ,ಪ್ರಹ್ಲಾದ್ ಉತ್ತೂರ, ಸುಭಾಸ ಜಮಖಂಡಿ, ದಶರಥ ಮಾಂಗ್, ಭೀಮಶಿ ಕಿರಿಕಿರಿ, ಪುಂಡಲೀಕ ಮಾಂಗ, ಸಂತಪ್ಪ ದೊಡ್ಡಮನಿ, ಸಂಜು ಹಲಸಪ್ಪಗೋಳ, ಸಾಗರ ಹಲಸಪ್ಪಗೋಳ, ರಾಘು ಭಾವಿಕಟ್ಟಿ, ಉಮೇಶ್ ಕಿರಿಕಿರಿ, ಚೆನ್ನಪ್ಪ ಮೇತ್ರಿ, ರಾಜು ಮೇತ್ರಿ, ಮಹಾಲಿಂಗಪ್ಪ ಗೌಂಡಿ, ಯಮನಪ್ಪ ಮಾಂಗ, ಬಸವರಾಜ ಹಲಸಪ್ಪಗೋಳ ಮತ್ತು ಇನ್ನೂ ಅನೇಕರಿದ್ದರು.
ಹಿಂದೂ ರುದ್ರ ಭೂಮಿಯಲ್ಲಿ ಶಿವರಾತ್ರಿ: ಬೇಸಿಗೆಯ ಆರಂಭದಲ್ಲಿ ಆಗಮಿಸುವ ಮಹಾಶಿವರಾತ್ರಿ ಆಚರಣೆಯನ್ನು ಸ್ಥಳೀಯ ಹಿಂದೂ ರುದ್ರ ಭೂಮಿಯಲ್ಲಿ ಸದ್ಭಕ್ತರು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಸವ ಬಳಗದ ಸಿ.ಎಂ.ಕಟಗಿ ಅವರು ಮಾತನಾಡಿ, ಸಕಲ ಜೀವಾತ್ಮರಿಗೆ ಇಹಲೋಕ ತ್ಯಜಿಸಿದ ನಂತರ ಇದೇ ಭೂಮಿಯಲ್ಲಿ ಹೂತು ಹೋಗಿ ಶಿವನ ಪಾದ ಸೇರಲಿದ್ದೇವೆ ಎಂಬ ವೈರಾಗ್ಯಭಾವ ನಮ್ಮೆಲ್ಲರಲ್ಲಿಯೂ ಬರಬೇಕು. ಈ ಪ್ರದೇಶ ಶಿವನ ವಾಸಸ್ಥಾನವೆಂದು ಹಿಂದೂ ಪದ್ಧತಿಯಲ್ಲಿ ನಂಬುಗೆಯನ್ನು ವ್ಯಕ್ತಪಡಿಸುತ್ತೇವೆ. ಆದ್ದರಿಂದ ಇದೊಂದು ಸುಂದರ ದೇಗುಲ ಇಲ್ಲಿ ಶಿವ ವಾಸಿಸುತ್ತಾನೆ ಎಂಬ ನಂಬುಗೆಯೊಂದಿಗೆ ಈ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡಿಕ್ಕೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.
ಶಿವರಾತ್ರಿಯಂದು ರುದ್ರ ಭೂಮಿಯಲ್ಲಿ ಪ್ರತಿ ವ? ಶಿವ ಭಜನೆಯನ್ನು ನಡೆಸುವ ಟೊನಪಿನಾಥ ಭಜನಾ ಮಂಡಳಿಯ ಮಲ್ಲಪ್ಪ ನುಚ್ಚಿ ಬಳಗದ ವತಿಯಿಂದ ಶಿವ ಭಜನೆ ನಡೆಯಿತು.ಇವರಿಗೆ ಅರ್ಜುನ್ ಸಣ್ಣಕ್ಕಿ, ಸುಭಾಸ ಸೋರಗಾವಿ, ರವಿ ಮುಗಳ್ಯಾಳ ಮತ್ತು ಯಮನಪ್ಪ ಟೊನಪಿ ಸಾಥ ನೀಡಿದರು.
ಬಸವ ಬಳಗದ ಹೊಳಬಸು ಹಡಪದ ವಚನ ಸಾಹಿತ್ಯ ಪದಗಳನ್ನು ಹಾಡಿದರು. ಹಿರಿಯರಾದ ಸಂಗಪ್ಪ ಹಲ್ಲಿ, ಈಶ್ವರ್ ಮುರಗೋಡ, ರುದ್ರಭೂಮಿಯ ಕರೆಸೇವಕ ಸಿದ್ದು ಶಿರೋಳ, ಶಿವಾನಂದ ಟಿರಕಿ,ಲಕ್ಷ್ಮಣ ಕಿಶೋರಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಹನುಮಂತ ಜಮಾದಾರ, ಎಂ. ಐ. ಡಾಂಗೆ, ಪ್ರಕಾಶ ಹಣಗಂಡಿ, ರಾಜು ಮಿರ್ಜಿ, ಸದಾಶಿವ ಬರಗಿ, ಮಹಾದೇವ ಶಿವಾಪುರ ಹಾಗೂ ಆನಂದ ಮೂಡಲಗಿ ಇದ್ದರು

WhatsApp Group Join Now
Telegram Group Join Now
Share This Article