ವೇಮನ್ ಟ್ರೋಫಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಗೆದ್ದ ರೆಡ್ಡಿ ತಂಡ

Sandeep Malannavar
ವೇಮನ್ ಟ್ರೋಫಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಗೆದ್ದ ರೆಡ್ಡಿ ತಂಡ
WhatsApp Group Join Now
Telegram Group Join Now

ಮಹಾಲಿಂಗಪುರ: ಪಟ್ಟಣದ ಕೋಳಿಗುಡ್ಡ ಅವರ ಕ್ರಿಕೆಟ್ ಮೈದಾನದಲ್ಲಿ ರೆಡ್ಡಿ ಕ್ರಿಕೆಟ್ ಅಕಾಡೆಮಿ ವತಿಯಿಂದ ಹಮ್ಮಿಕೊಂಡ ಅಂತರ ಶಿಬಿರ ಬಾಲಕರ ೧೪ ವ? ಒಳಗಿನ ವೇಮನ್ ಟ್ರೋಫಿ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ನ್ನಲ್ಲಿ ಸ್ಥಳೀಯ ರೆಡ್ಡಿ ಕ್ರಿಕೆಟ್ ಅಕಾಡೆಮಿ ತಂಡ ಅಮೋಘ ಪ್ರದರ್ಶನ ನೀಡುವ ಮೂಲಕ ಪ್ರಥಮ ಹಂತದ ವಿಜೇತ ತಂಡವಾಗಿ ಹೊರಹೊಮ್ಮಿ ನಗದು ಮೊತ್ತದೊಂದಿಗೆ ವೇಮನ್ ಟ್ರೋಫಿ ತನ್ನದಾಗಿಸಿಕೊಂಡಿತು.
ಶನಿವಾರ ನಡೆದ ಅಂತಿಮ ಹಂತದ ಪಂದ್ಯದಲ್ಲಿ ಮಹಾಲಿಂಗಪುರ ನಗರದ ರೆಡ್ಡಿ ಕ್ರಿಕೆಟ್ ಅಕಾಡೆಮಿ ತಂಡ ಮೊದಲು ಬ್ಯಾಟಿಂಗ್ ಮಾಡಿ೨೦ ಓವರ್ ಗಳಲ್ಲಿ ೫ ಹುದ್ದರಿಗಳನ್ನು ಕಳೆದುಕ್ಕೊಂಡು ೧೫೭ ಓಟ್ ಗಳನ್ನು ಗಳಿಸಿತು.ತಂಡದ ಆಟಗಾರ ಮೋಹ್ಮದ್ ಜೀಯಾನ್ ಸಾಲೇವಾಲೆ ೫೬ ಎಸೆತಗಳಲ್ಲಿ ೬ ಫೋರ್ ಬಾಂಡರಿ ಸೇರಿದಂತೆ ೫೬ ರನ್ ಗಳನ್ನು ಮತ್ತು ಬಾಲಿಂಗ್ ವಿಭಾಗದಲ್ಲಿ ೮ ಓಟ್ ಗಳನ್ನು ನೀಡಿ ೩ ಹುದ್ದರಿಗಳನ್ನು ಪಡೆದು ತಂಡದ ಗೆಲುವಿನಲ್ಲಿ ಸಹಕಾರಿಯಾದರು.ಈ ವಿಶೇ? ಸಾಧನೆಗೆ ಅವರು ಪಂದ್ಯ ಪುರು? ಪ್ರಶಸ್ತಿಯನ್ನು ಸಹ ಮುಡಿಗೇರಿಸಿಕೊಂಡರು.
ನಂತರ ಬ್ಯಾಟ್ ಮಾಡಿದ ಬೆಳಗಾವಿ ಇಎಸ್.ಕೆ ಕ್ರಿಕೆಟ್ ಅಕಾಡೆಮಿ ೧೭.೪ ಓವರ್ ಗಳಲ್ಲಿ ತನ್ನೆಲ್ಲ ಹುದ್ದರಿಗಳನ್ನು ಕಳೆದುಕ್ಕೊಂಡು ಕೇವಲ ೯೭ ಓಟ್ ಗಳನ್ನು ಗಳಿಸಲು ಮಾತ್ರ ಶಕ್ತವಾಗಿ ೫೦ ಓಟ್ ಗಳ ಅಂತರದಿಂದ ಮಹಾಲಿಂಗಪುರ ತಂಡದ ವಿರುದ್ಧ ಸೋಲು ಕಂಡು ದ್ವಿತೀಯ ಸ್ಥಾನದ ನಗದು ಮೊತ್ತ ಮತ್ತು ಟ್ರೋಫಿ ಪಡೆಯಿತು.
ಈ ಪಂದ್ಯಾವಳಿಯಲ್ಲಿ ಅಕಾಡೆಮಿ ತಂಡಗಳಾದ ರೆಡ್ಡಿ ಕ್ರಿಕೆಟ್ ಮಹಾಲಿಂಗಪುರ, ರಾಯಲ್ ಹಾರೂಗೇರಿ,ಕೆ.ಜೆ.ಸೋಮಯ್ಯಸಮೀರವಾಡಿ,ಸಿಬಿಎಸ್ಸಿ ಅಂಕಲಿ,ದ ವಾಲ್ ಕ್ರಿಕೆಟ್ ರಾಯಭಾಗ, ರಾಯಲ್ ಕ್ರಿಕೆಟ್ ಕುಡಚಿ,ಎಸ್.ಕೆ. ಕ್ರಿಕೆಟ್ ಬೆಳಗಾವಿ ಮತ್ತು ಡಾ.ಸಿಧ್ಧಾಂತ ದಾನಿಗೊಂಡ ತೇರದಾಳ ತಂಡಗಳು ಭಾಗವಹಿಸಿದ್ದವು.ಸರಣಿ ಪುರು?ತ್ತಮ ಜೀಯಾನ್ ಸಲೇಮವಾಲೆ, ಬೆಳಗಾವಿಯ ತಂಡಧ ಸಚೀನ್ ಟಿ. ಬೆಸ್ಟ್ ಬ್ಯಾಟಿಂಗ್, ಶ್ರೇಯಸ್.ಪಿ. ಬೆಸ್ಟ್ ಬಾಲಿಂಗ್, ಮಹಾಲಿಂಗಪುರದ ಆರ್ಯನ್ ತುಬಾಕಿ ಬೆಸ್ಟ್ ವಿ.ಕಿಪಿಂಗ್ ಪ್ರಶಸ್ತಿಗಳನ್ನು ಪಡೆದರು.
ಸಮಾರಂಭದಲ್ಲಿ ಜಯರಾಂ ಶೆಟ್ಟಿ,ಡಾ.ಅನುಪ ಹಂಚಿನಾಳ,ರಾಜು ನಂದೆಪ್ಪನ್ನವರ,ಗುರು ಜಂಬಗಿ,ರವಿ ಕಟಗಿ,ಇಲಿಯಾಸ ಯಾದವಾಡ, ಆನಂದ ಪಟ್ಟಣಶೆಟ್ಟಿ, ಸಂತೋ? ಜಮಖಂಡಿ,ವಿಜಯ ಲಕ್ಕಿಲಿ, ಸುಮೀತ ನಾಗನೂರ, ಉಲ್ಲಾಸ ಪಟ್ಟಣಶೆಟ್ಟಿ, ಪ್ರವೀಣ ಗಣಾಚಾರಿ, ಹನುಮಂತ ಕನಬೂರ, ಸಾಗರ ಮಠದ, ರಾಜು ಜವಳಗಿ, ಆನಂದ ಮಕ್ಕಳಗೇರಿಮಠ ಇದ್ದರು.

WhatsApp Group Join Now
Telegram Group Join Now
Share This Article