ರಾಯಬಾಗ: ಕೇಂದ್ರ ಸರ್ಕಾರ ಏಕ ಪಕ್ಷೀಯವಾಗಿ ಜಾರಿಗೆ ತಂದಿರುವ ವಿಬಿ-ಜಿ-ರಾಮ್-ಜಿ ಯೋಜನೆಯನ್ನು ರದ್ದುಪಡಿಸಿ ಮೊದಲಿದ್ದ ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಮುಂದುವರೆಸಲೇ ಬೇಕು ಎಂದು ಚಿಕ್ಕೋಡಿ ಸಂಸದರಾದ ಪ್ರಿಯಂಕಾ ಜಾರಕಿಹೊಳಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಸೋಮವಾರ ಪಟ್ಟಣದಲ್ಲಿ ನರೇಗಾ ಯೋಜನೆಯನ್ನು ಯಥಾವತ್ತಾಗಿ ಮರು ಜಾರಿಗೊಳಿಸಲು ಒತ್ತಾಯಿಸಿ ಕಾಂಗ್ರೆಸ ಎಸ್.ಸಿ.ಘಟಕದಿಂದ ತಾಲೂಕಿನ ನಸಲಾಪುರ ಗ್ರಾಮದಿಂದ ರಾಯಬಾಗ ಪಟ್ಟಣದ ವರೆಗೆ
ಹಮ್ಮಿಕೊಂಡಿದ್ದ ಪಾದಯಾತ್ರೆ ಮೂಲಕ ಜನಜಾಗೃತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿ,
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ-ಜಿ-ರಾಮ್-ಜಿ ಯೋಜನೆಯನ್ನು ರದ್ದುಗೊಳಿಸಿ, ಹಳೆಯ ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಮುಂದುವರೆಸುವಂತೆ ಆಗ್ರಹಿಸಿದರು.
ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರ ಜಾರಗೆ ತಂದಿರುವ ಹಲವು ಜನಪರ ಯೋಜನೆಗಳನ್ನು ಬಿಜೆಪಿ ಕೇಂದ್ರ ಸರಕಾರ ನಾಮಕರಣ ಬದಲಿ ಮಾಡುವ ಕಾರ್ಯ ಮಾಡುತಲಿದ್ದು, ಎಲ್ಲರೂ ಒಗ್ಗಟ್ಟಾಗಿ ಇದನ್ನು ವಿರೋಧಿಸಬೇಕು. ಕಾಂಗ್ರೆಸ್ ಸರಕಾರ ಇದ್ದ ಯೋಜನೆಗಳು ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಮಹಾವೀರ ಮೊಹಿತೆ ಮಾತನಾಡಿ, ರಾಯಬಾಗ ಮತಕ್ಷೇತ್ರದಲ್ಲಿನಿಷ್ಠಾವಂತ ಕಾರ್ಯಕರ್ತರು ಇದ್ದಾರೆ. ಪಾದಯಾತ್ರೆಯಲ್ಲಿ ಇಂದಿನ ಜನರ ಉತ್ಸಾಹ ನೋಡಿ ಸಂತೋಷವಾಗಿದೆ. ನರೇಗಾ ಯೋಜನೆಯಿಂದ ಕೂಲಿಕಾರ್ಮಿಕರಿಗೆ ಅನುಕೂಲವಾಗಿದ್ದು, ಬಿಜೆಪಿ ಪಕ್ಷ ಅದರಲ್ಲಿರುವ ಕಾನೂನುಗಳನ್ನು ತಿದ್ದುಪಡಿ ಮಾಡುತ್ತಿರುವುದಕ್ಕೆ ತೀವ್ರ ವಿರೋಧ ಇದೆ. ನರೇಂದ್ರ ಮೋದಿ ಇರುವವರೆಗೆ ದೇಶ ಅಮೇರಿಕಾ ದೇಶದವರಿಗೆ ನೀಡುತ್ತಾರೋ ಎನ್ನುವ ಆತಂಕದಲ್ಲಿದ್ದೇವೆ. ಹಾಗಾಗಿ ಜನರು ಎಚ್ಚರಿಕೆಯಿಂದ ಇರಬೇಕು. ಬಿಜೆಪಿ, ಆರ್ ಎಸ್ ಎಸ್ ನವರು ಸಂವಿಧಾನಕ್ಕೆ ಧಕ್ಕೆ ಮಾಡಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದರು.
ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಮಾತನಾಡಿದರು., ಬಿಜೆಪಿ ಜನಸಾಮಾನ್ಯರ ಮೂರಾಬಟ್ಟೆ ಮಾಡಿದ ಸರ್ಕಾರ ಬಿಜೆಪಿ, ಜಾತಿ ಜಾತಿಗಳಲ್ಲಿ, ಭಾಷೆ ಭಾಷೆಗಳಲ್ಲಿ ಜಗಳ ಹಚ್ಚುವುದು ಬಿಜೆಪಿ ಕಾರ್ಯ ಮಾಡುತ್ತಿದೆ.
ಶಿವನಗೌಡ ಪಾಟೀಲ, ಸಿದ್ಧಾರೂಡ ಬಂಡಗರ, ನಿರ್ಮಲ ಪಾಟೀಲ, ಅಬ್ದುಲ್ ಸುತಾರಮುಲ್ಲಾ, ಹಾಜಿ ಮುಲ್ಲಾ, ಅಪ್ಪಾಸಾಹೇಬ ಕುಲಗೋಡೆ, ದಿಲೀಪ ಜಮಾದಾರ, ಅರ್ಜುನ ನಾಯಕವಾಡಿ, ಶಿವು ಮರಾಯಿ, ಶಂಕರಗೌಡ ಪಾಟೀಲ, ರಾಜು ಕೋಟಗಿ, ಗಣೇಶ ಮೊಹಿತೆ, ಸಿದ್ರಾಮ ಪೂಜೇರಿ, ವಸಂತ ಕರಿಗಾರ, ರುದ್ರಪ್ಪ ಸಂಗಪ್ಪಗೋಳ, ಅಕ್ಷಯ ವಿರಮುಖ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.


