ಬಳ್ಳಾರಿ ಫೆ 16:. ಕಳೆದ ಏಳು ವರ್ಷಗಳ ಹಿಂದೆ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರಚೋದೀತ ಉಗ್ರಗಾಮಿಗಳಿಂದ ನಡೆದ ಕುತಂತ್ರದ ದಾಳಿಯಲ್ಲಿ ದೇಶದ ಅನೇಕ ಸೈನಿಕರು ವೀರ ಮರಣವನ್ನು ಅಪ್ಪಿರುತ್ತಾರೆ. ಅವರ ನೆನಪಿಗಾಗಿ ಇಂದು ಮಾಜಿ ಸೈನಿಕರು ಮತ್ತು ಅರೆ ಸೈನಿಕರ ಸಂಘದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಕ್ಯಾಂಡಲ್ ಮೆರವಣಿಗೆ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರುತ್ತಿದ್ದೇವೆ ಎಂದು ಮಾಜಿ ಅರೆ ಸೇನಾ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಪ್ರಹ್ಲಾದ ರೆಡ್ಡಿ ತಿಳಿಸಿದರು.
ಅವರು ಇಂದು ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಕ್ಯಾಂಡಲ್ ಬೆಳಗುವುದರ ಮೂಲಕ ಕ್ಯಾಂಡಲ್ ಮಾರ್ಚ್ ಫಾಸ್ಟ್ ಕಾರ್ಯಕ್ರಮವನ್ನು ಆಯೋಜಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಕ್ಯಾಂಡಲ್ ಹಚ್ಚುವ ಮೂಲಕ ರೈತ ಸಂಘದ ಅಧ್ಯಕ್ಷರಾದ ಕರೂರು ಮಾಧವ ರೆಡ್ಡಿ ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ವಿಕ್ಕಿ ಮತ್ತು ಮಾಜಿ ತಹಸೀಲ್ದಾರ ಅವರು ಕ್ಯಾಂಡಲ್ ಮಾರ್ಚ್ ಫಾಸ್ಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾಜಿ ಅರೆ ಸೇನಾ ಪಡೆಯ ಸೈನಿಕ ಈಶ್ವರ ರೆಡ್ಡಿ ಮಾತನಾಡಿ, ಇಂದು ವಿಶ್ವದಾದ್ಯಂತ ಅಂದರೆ ಏಪ್ರಿಲ್ 14ರಂದು ಪ್ರೇಮಿಗಳ ದಿನವನ್ನಾಗಿ ಯುವಕರು ಆಚರಿಸುತ್ತಿದ್ದಾರೆ ಇದರ ತದ್ವಿರುದ್ಧವಾಗಿ ನಾವು ಪುಲ್ವಾಮಾ ದಾಳಿಯನ್ನು ಖಂಡಿಸಿ ಬ್ಲಾಕ್ ಡೇ ಯನ್ನಾಗಿ ಆಚರಿಸುತ್ತಿದ್ದೇವೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಮತ್ತು ದೇಶಭಕ್ತರು ಈ ಫೆಬ್ರವರಿ 14ರಂದು ಪ್ರೇಮಿಗಳ ದಿನದ ಬದಲಾಗಿ ಸೈನಿಕರ ಆತ್ಮಕ್ಕೆ ಶಾಂತಿ ಕೋರುವ ಬ್ಲಾಕ್ ಡೇ ಯನ್ನಾಗಿ ಆಚರಿಸಲು ಸಹಕರಿಸಬೇಕೆಂದು ವಿನಂತಿಸಿದರು.
ಈ ಕ್ಯಾಂಡಲ್ ಮಾರ್ಚ್ ಫಾಸ್ಟ್ ನಲ್ಲಿ ನಗರದ ಅನೇಕ ನಾಗರಿಕರು ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು


