ಕಂಪ್ಲಿ ಉತ್ಸವ: ರಂಗೋಲಿಯಿಂದ ಕಂಗೊಳಿಸಿದ ಕಂಪ್ಲಿ ಪ್ರಮುಖ ರಸ್ತೆಗಳು

Sandeep Malannavar
ಕಂಪ್ಲಿ ಉತ್ಸವ: ರಂಗೋಲಿಯಿಂದ ಕಂಗೊಳಿಸಿದ ಕಂಪ್ಲಿ ಪ್ರಮುಖ ರಸ್ತೆಗಳು
WhatsApp Group Join Now
Telegram Group Join Now

ಬಳ್ಳಾರಿ,ಫೆ.12:-ಕಂಪ್ಲಿ ಉತ್ಸವ ಅಂಗವಾಗಿ ಕಂಪ್ಲಿ ಪಟ್ಟಣದಲ್ಲಿ ಹಬ್ಬದ ವಾತಾವರಣದಂತಿದೆ. ಉತ್ಸವದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯಲ್ಲಿ ಪ್ರಮುಖ ರಸ್ತೆಗಳು ರಂಗೋಲಿಮಯವಾಗಿ ಕಾಣಿಸಿಕೊಂಡವು.

ರಂಗೋಲಿ ಸ್ಪರ್ಧೆಯಲ್ಲಿ ಯುವತಿಯರು ಭಾಗವಹಿಸಿ ರಂಗೋಲಿ ಹಾಕುವುದು, ವಿಶೇಷವಾಗಿ ಕಂಡುಬಂತು.

ಪಟ್ಟಣದ ನೀರಾವರಿ ಇಲಾಖೆ ಮುಂಭಾಗದ ರಸ್ತೆಯಿಂದ ಕಮ್ಮವಾರಿ ಭವನದವರೆಗಿನ ಒಂದು ಕಡೆಯ ರಸ್ತೆಯಲ್ಲಿ ಮಹಿಳೆಯರ ರಂಗು ರಂಗಿನ 132 ರಂಗೋಲಿ ಚಿತ್ತಾರ ಬಿಡಿಸಿದರು.

ನಂತರದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ ವಿತರಣೆ ಮಾಡಲಾಯಿತು.

WhatsApp Group Join Now
Telegram Group Join Now
Share This Article