ಅಕ್ರಮ ಚಟುವಟಿಕೆಗಳ ಮೇಲೆ ತೀವ್ರ ನಿಗಾ  : “ಸ್ಪಾ” ಗಳು ಬಂದ್

Sandeep Malannavar
ಅಕ್ರಮ ಚಟುವಟಿಕೆಗಳ ಮೇಲೆ ತೀವ್ರ ನಿಗಾ  : “ಸ್ಪಾ” ಗಳು ಬಂದ್
WhatsApp Group Join Now
Telegram Group Join Now
ಬಳ್ಳಾರಿ:ಫೆ,12- ನಗರದಲ್ಲಿ ಅಷ್ಟೇ ಅಲ್ಲದೆ ಜಿಲ್ಲೆಯ ಹಲವಡೆ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇರಿಸಿ ದಿನ ನಿತ್ಯ ಇವುಗಳ ಮೇಲೆ ದಾಳಿ ನಡೆಸುತ್ತಿರುವ ಪೊಲೀಸ್ ಇಲಾಖೆ ಈಗ ಅನೈತಿಕ ಚಟುವಟಿಕೆಗಳಿಗೆ ಕಾರಣವಾಗಿದ್ದವು ಎನ್ನಲಾದ “ಸ್ಪಾ” ಗಳನ್ನು ಸಹ ಬಂದ್ ಮಾಡಿಸಲಾಗಿದೆ.
ಕಳೆದ ಜ.1 ರಂದು ನಡೆದ ಬ್ಯಾನರ್ ಗಲಾಟೆ, ಪೈರಿಂಗ್ ಪ್ರಕರಣದ ನಂತರ ಬಳ್ಳಾರಿಗೆ ವರ್ಗಾವಣೆಯಾಗಿ ಬಂದ ನೂತನ ಎಸ್ಪಿ ಸುಮನ್ ಡಿ ಪೆನ್ಬೇಕರ್ ಮತ್ತು ಬಳ್ಳಾರಿ ವಲಯದ ಐಜಿಪಿ ಡಾ.ಹರ್ಷ ಅವರು ಬಂದ ಮೇಲೆ ಮಟಕಾ, ಇಸ್ಪೀಟ್ ಜೂಜಾಟ, ಗಾಂಜಾ ಮಾರಾಟ, ಅಕ್ರಮವಾಗಿ ಮರಳು, ಪಡಿತರ ಅಕ್ಕಿ ಸಾಗಾಟ ನಡೆಯದಂತೆ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡು ಕಳೆದ ಒಂದು ತಿಂಗಳಲ್ಲಿ 130 ಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿದೆ.
ಇವರು ಕಟ್ ನಿಟ್,  ಸ್ಟ್ರಿಟ್ ಎಂಬ ಮಾತುಗಳು ಮತ್ತು ದಿನ ನಿತ್ಯದ ದಾಳಿಗಳಿಂದಾಗಿ ಅಕ್ರಮ ಚಟುವಟಿಕೆಗಳನ್ನು ನಡೆಸುವವರು ಥರಗುಟ್ಟಿದ್ದಾರೆ.
ವಾಸ್ತವದಲ್ಲಿ ಮಸಾಜ್ ಪಾರ್ಲರ್ ಗಳಾಗಿದ್ದ “ಸ್ಪಾ” ಪುರುಷರನ್ನು ಅಕ್ರಮ ಲೈಂಗಿಕ ಕ್ರಿಯೆಗೆ ಪ್ರಚೋದಿಸುವ ತಾಣಗಳಾಗಿದ್ದವು ಎಂಬ ಆರೋಪ ಇತ್ತು. ಅದಕ್ಕಾಗಿ ಇಂತಹುವುಗಳ ಬಗ್ಗೆ ಮಾಹಿತಿ ಪಡೆದ ಎಸ್ಪಿಯವರು ನಗರದ 20 ಕ್ಕೂ ಹೆಚ್ಚು ಸ್ಪಾ ಗಳನ್ನು ಬಂದ್ ಮಾಡಿಸಿದ್ದಾರೆ.
ಬಂದ್ ಮಾಡಿಸಿದ್ದರೂ ಯಾವೊಬ್ಬ ಸ್ಪಾ ಮಾಲೀಕರು ಎಸ್ಪಿಯವರ ಕ್ರಮದ ವಿರುದ್ದ ಮಾತನಾಡಿಲ್ಲ ಎಂದರೆ ಅವರು ಕಾನೂನು ರೀತಿಯಲ್ಲಿ ಈ ವರೆಗೆ ಇರಲಿಲ್ಲ ಎಂಬುದು ಸಾಬೀತಾಗುತ್ತದೆ.
ಒಟ್ಟಿನಲ್ಲಿ ಎಸ್ಪಿ ಸುಮನ್ ಅವರ ದಿಟ್ಟ ಕ್ರಮಗಳು ನಗರದ ಉತ್ತಮ ನಾಗರೀಕರ ಮೆಚ್ಚುಗೆಗೆ ಕಾರಣವಾಗಿದೆ ಎನ್ನಬಹುದು.
WhatsApp Group Join Now
Telegram Group Join Now
Share This Article