ಕಿಸಾನ್ ಮೋರ್ಚಾ ತಂಡದೊಂದಿಗೆ ವಿತ್ ಸಚಿವೆ ಸೀತಾರಾಮನ ಭೇಟಿಯಾದ ಕಡಾಡಿ

Sandeep Malannavar
ಕಿಸಾನ್ ಮೋರ್ಚಾ ತಂಡದೊಂದಿಗೆ ವಿತ್ ಸಚಿವೆ ಸೀತಾರಾಮನ ಭೇಟಿಯಾದ ಕಡಾಡಿ
WhatsApp Group Join Now
Telegram Group Join Now
ಬೆಳಗಾವಿ – ದೇಶದ ಕಬ್ಬು ಬೆಳೆಗಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ರಾಷ್ಟ್ರೀಯ ಬಿಜೆಪಿ ಕಿಸಾನ್ ಮೋರ್ಚಾ ಪದಾಧಿಕಾರಿಗಳ ನಿಯೋಗದೊಂದಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ಸಂಸದ ಈರಣ್ಣ ಕಡಾಡಿ*
ಮೂಡಲಗಿ: ದೇಶದ ಕಬ್ಬು ಬೆಳೆಗಾರ ರೈತರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಚರ್ಚಿಸುವ ಹಿನ್ನಲೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ರಾಷ್ಟ್ರೀಯ ಬಿಜೆಪಿ ಕಿಸಾನ್ ಮೋರ್ಚಾ ಪದಾಧಿಕಾರಿಗಳೊಂದಿಗೆ ಸಂಸದ ಈರಣ್ಣ ಕಡಾಡಿ ನವದೆಹಲಿಯ ಸಂಸತ್ತಿನ ಕೇಂದ್ರ ಸಚಿವರ ಕಾರ್ಯಾಲಯದಲ್ಲಿ  ಭೇಟಿ ಮಾಡಿ ವಿಸ್ತೃತ ಚರ್ಚೆ ನಡೆಸಲಾಯಿತು.
ಪ್ರತಿ ವರ್ಷ ಏಫ್.ಆರ್.ಪಿ ದರ ನಿಗಧಿ ಮಾಡುವ ಸಂದರ್ಭದಲ್ಲಿ ಕಬ್ಬಿನ ರಿಕವರಿಯ ಪ್ರತಿಶತ ಹೆಚ್ಚಿಸುತ್ತಿರುವುದು ರೈತರಿಗೆ ಮಾರಕವಾಗಿದೆ, ಹೀಗಾಗಿ ಕಬ್ಬಿನ ರಿಕವರಿ ಪ್ರಮಾಣವನ್ನು 9.25% ರಿಂದ 10.25% ಕ್ಕೆ ಹೆಚ್ಚಿಸಿರುವುದು ಕಬ್ಬು ಬೆಳೆಗಾರರಿಗೆ ಆರ್ಥಿಕ ನಷ್ಟ ಉಂಟುಮಾಡುತ್ತದೆ. ರೈತರ ಹಿತದೃಷ್ಟಿಯಿಂದ ಸರ್ಕಾರವು ಈ ನಿರ್ಧಾರವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ದೇಶದಲ್ಲಿ ಅಡಿಕೆ, ತೆಂಗು ಮತ್ತು ಕಾಫಿ ಬೆಳೆಗಾರರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿರುವ ಕಬ್ಬು ಬೆಳೆಗಾರರ ಸಮಸ್ಯೆಗಳು ಅತ್ಯಂತ ಗಂಭೀರವಾಗಿವೆ. ಕಬ್ಬು ಕೇವಲ ಸಕ್ಕರೆಗೆ ಸೀಮಿತವಾಗಿಲ್ಲ. ಕಬ್ಬಿನಿಂದ ಉತ್ಪತ್ತಿಯಾಗುವ ಎಥೆನಾಲ್, ಮೊಲ್ಯಾಸಿಸ್, ವಿದ್ಯುತ್ ಮತ್ತು ಸಾವಯವ ಗೊಬ್ಬರಗಳಂತಹ ಉಪ ಉತ್ಪನ್ನಗಳು ದೇಶದ ಇಂಧನ ಮತ್ತು ಕೃಷಿ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡುತ್ತಿವೆ. ಈ ಎಲ್ಲಾ ಉತ್ಪನ್ನಗಳ ಮೇಲೆ ಕೋಟ್ಯಾಂತರ ಜನರು ಅವಲಂಬಿತರಾಗಿರುವುದರಿAದ, ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಗಂಭೀರವಾಗಿ ಅಧ್ಯಯನ ಮಾಡಿ ಪರಿಹರಿಸಲು ಸರ್ಕಾರ ದೃಢ ಹೆಜ್ಜೆ ಇಡಬೇಕು ಎಂದು ನಿಯೋಗ ಮನವಿ ಮಾಡಿತು.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ನೇ ಸಾಲಿಗಾಗಿ ಮಂಡಿಸಿರುವ ಬಜೆಟ್ ನಲ್ಲಿ  ಹತ್ತಿ, ಗೋಡಂಬಿ, ಕೋಕೋ, ತೆಂಗು ಮತ್ತು ಶ್ರೀಗಂಧದಂತಹ ಪ್ರಮುಖ ಬೆಳೆಗಳ ಉತ್ತೇಜನ ಮತ್ತು ವಿಸ್ತರಣೆ ಹಾಗೂ  ಕೃಷಿ ವೈವಿಧ್ಯತೆ ಮತ್ತು ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರಿಯಾಗಿವೆ. ಕೃಷಿ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯನ್ನುಅಳವಡಿಸಿಕೊಳ್ಳುವ ಕ್ರಾಂತಿಕಾರಿ ನಿರ್ಧಾರವನ್ನು ಸ್ವಾಗತಿಸಲಾಯಿತು. ಪಶು ಸಂಗೋಪನೆಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ, ರೈತ ಉತ್ಪಾದಕ ಸಂಸ್ಥೆಗಳ ಬಲವರ್ಧನೆ, 500 ಜಲಾಶಯಗಳ ಅಭಿವೃದ್ಧಿ ಹಾಗೂ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆ ಇವುಗಳೆಲ್ಲವೂ ರೈತರ ಆದಾಯ ವೃದ್ಧಿ ಮತ್ತು ಗ್ರಾಮೀಣ ಆರ್ಥಿಕ ಚೈತನ್ಯಕ್ಕೆ ಶಕ್ತಿ ತುಂಬಲಿವೆ. ಇದರಿಂದ ತೋಟಗಾರಿಕೆ, ಹಾಲು ಉತ್ಪಾದನೆ, ರೇಷ್ಮೆ ಹಾಗೂ ಇತರೆ ಕೃಷಿ ಆಧಾರಿತ ಉದ್ಯಮಗಳಿಗೆ ನೇರ ಲಾಭವಾಗಲಿದೆ. ಮತ್ತು ‘ವಿಕಸಿತ ಭಾರತ’ದ ಸಂಕಲ್ಪವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಒಂದು ಪ್ರಬಲ ಬಜೆಟ್ ಆಗಿದೆ ಎಂದು ಅಭಿನಂದಿಸಲಾಯಿತು.
ನಮ್ಮ ನಿಯೋಗದ ಮನವಿಯನ್ನು ಸಹಾನುಭೂತಿಯಿಂದ ಆಲಿಸಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು. ಅಲ್ಲದೆ, ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಶೀಘ್ರದಲ್ಲೇ ಮತ್ತೊಂದು ಸಭೆ ಕರೆದು ಸೂಕ್ತ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.
ಈ ನಿಯೋಗದಲ್ಲಿ  ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವ  ಭಾಗೀರಥ್ ಚೌಧರಿ, ಬಿಜೆಪಿ ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ ರಾಜಕುಮಾರ್ ಚಹರ್ ಕಿಸಾನ್ ಮೋರ್ಚಾದ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಡಾ. ಅನಿಲ್ ಬೊಂಡೆ, ರಾಷ್ಟ್ರೀಯ ಉಪಾಧ್ಯಕ್ಷ ಬನ್ಸಿಲಾಲ್ ಗುರ್ಜರ್, ಪ್ರದೀಪ್ ಪುರೋಹಿತ್,  ಸುಕಾಂತ ಪಾಣಿಗ್ರಾಹಿ, ಡಾ. ಶಂಭುಕುಮಾರ  ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article