ಆದಿಮಾನವನ ಅಸ್ಥಿಪಂಜರ ಪತ್ತೆ  ಹಿನ್ನೆಲೆ ಸ್ಥಳಕ್ಕೆ ಸಿದ್ದಪ್ಪ ಭೇಟಿ

Sandeep Malannavar
ಆದಿಮಾನವನ ಅಸ್ಥಿಪಂಜರ ಪತ್ತೆ  ಹಿನ್ನೆಲೆ ಸ್ಥಳಕ್ಕೆ ಸಿದ್ದಪ್ಪ ಭೇಟಿ
WhatsApp Group Join Now
Telegram Group Join Now
ಬಳ್ಳಾರಿ,

ಫೆ.10:: ಜಿಲ್ಲೆಯ ತೆಕ್ಕಲಕೋಟೆ ಪಟ್ಟಣದ ಸಮೀಪದ ಗೌಡ್ರ ಮೂಲೆ ಬೆಟ್ಟದಲ್ಲಿ ಸುಮಾರು ೫,೦೦೦ ವರ್ಷಗಳ ಹಿಂದಿನ ಆದಿಮಾನವನ ಅಸ್ಥಿಪಂಜರ ಪತ್ತೆಯಾದ ಹಿನ್ನೆಲೆ ಸ್ಥಳಕ್ಕೆ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಂ ಎಸ್ ಸಿದ್ದಪ್ಪ. ತೆಕ್ಕಲಕೋಟೆ ಭೇಟಿನೀಡಿ, ಈ ಸಂದರ್ಭದಲ್ಲಿ ಮಾತನಾಡಿ, ಈ ಸಂಶೋಧನೆ ಪ್ರಾಚೀನ ಮಾನವ ಜೀವನ ಮತ್ತು ಸಂಸ್ಕೃತಿಯ ಅಧ್ಯಯನಕ್ಕೆ ಮತ್ತು ಸರ್ಕಾರಕ್ಕೆ ಪಠ್ಯಪುಸ್ತಕದಲ್ಲಿ ಮತ್ತು ತೆಕ್ಕಲಕೋಟೆ ಪಟ್ಟಣದಲ್ಲಿ ಮ್ಯೂಸಿಯಂ ಅನ್ನು ನಿರ್ಮಿಸಿ ಈ ಪಳೆಯುಳಿಕೆ ಮತ್ತು ಅಸ್ತಿಪಂಜರವನ್ನು ಶಾಲಾ ವಿದ್ಯಾರ್ಥಿಗಳಿಗೆ ನೋಡಲಿಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಅಮೆರಿಕಾದ ಹಾರ್ಟ್ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹಾಗೂ ಉತ್ಪನನ ತಂಡದ ಸಹ ನಿರ್ದೇಶಕಿ ನಮಿತಾ ಎಸ್. ಸುಗಂಧಿ ಅವರು ಈ ವಿಷಯವನ್ನು ತಿಳಿಸಿದ್ದು,  ಕಳೆದ ಹಲವು ತಿಂಗಳಿAದ ತೆಕ್ಕಲಕೋಟೆ ಸುತ್ತಮುತ್ತಲಿನ ಹಿರೇ ಅರ್ಲ, ಬೂದಿ ದಿಬ್ಬ, ಬಾಳೆ ತೋಟ, ಜಕ್ಕೇರು ಗುಡ್ಡ ಮತ್ತು ಹುಡೇದಗುಡ್ಡ ಪ್ರದೇಶಗಳಲ್ಲಿ ಮೂರು ತಂಡಗಳು ಉತ್ಪನನ ಹಾಗೂ ಸಂಶೋಧನಾ ಕಾರ್ಯದಲ್ಲಿ ತೊಡಗಿಕೊಂಡಿದ್ದವು.
ವಾರದ ಹಿಂದೆ ನಡೆದ ಉತ್ಪನನದ ವೇಳೆ ಮಾನವನ ಮೂಳೆಯೊಂದು ಪತ್ತೆಯಾಗಿದ್ದು, ಮಣ್ಣನ್ನು ಮತ್ತಷ್ಟು ಅಗೆದಾಗ ೫.೫ ಅಡಿ ಉದ್ದದ ಸಂಪೂರ್ಣ ಅಸ್ಥಿಪಂಜರ ಕಂಡುಬAದಿದೆ. ಇಲ್ಲಿ ಮಾನವನ ದೇಹದ ಮೇಲೆ ಕಲ್ಲುಗಳನ್ನು ಇಟ್ಟು ಶವಸಂಸ್ಕಾರ ಮಾಡಿರುವುದು ಕಂಡುಬAದಿದ್ದು, ಇದು ಪ್ರಾಚೀನ ಸಂಸ್ಕೃತಿಯ ಭಾಗವಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೆಲವು ಸ್ಥಳಗಳಲ್ಲಿ ಸುಮಾರು ಎರಡೂವರೆ ಅಡಿ ಎತ್ತರದ ಗಡಿಗೆಗಳು, ಅವುಗಳಲ್ಲಿ ಮೊಳೆಗಳು, ಹಾಗೂ ವಿವಿಧ ಗಾತ್ರದ ಮಡಕೆಗಳು ಪತ್ತೆಯಾಗಿದ್ದು, ಅವು ಶವಸಂಸ್ಕಾರಕ್ಕೆ ಬಳಸಿರಬಹುದೆಂದು ಪ್ರಾಧ್ಯಾಪಕಿ ನಮಿತಾ ಎಸ್. ಸುಗಂಧಿ ತಿಳಿಸಿದ್ದಾರೆ ಎಂದರು
WhatsApp Group Join Now
Telegram Group Join Now
Share This Article