ಮಹಾಲಿಂಗಪುರ: ಎಲ್ಲ ಕಡೆ ಅಂತಲ್ಲ ಹಲವು ಕಡೆಗಳಲ್ಲಿ ರೈತರು ಬೆಳೆದ ಫಸಲಿಗೆ ಸರಿಯಾದ ತೂಕ ನೀಡದೆ ವೇ- ಬ್ರಿಜ್ ನವರು ಮೋಸ ಮಾಡುತ್ತಿದ್ದಾರೆ, ಇದರಿಂದ ದೂರ ಉಳಿಯಲು ಸರ್ಕಾರದ ಉಚಿತ ಎಪಿಎಂಸಿ ವೆ- ಬ್ರಿಜ್ ನಲ್ಲೇ ತೂಕ ಮಾಡಿಸಿಕೊಂಡು ತಮ್ಮ ಶ್ರಮದ ಬೆವರಿಗೆ ತಕ್ಕ ಬೆಲೆ ಪಡೆಯಬೇಕು ಎಂದು ತೇರದಾಳ ಶಾಸಕ ಸಿದ್ದು ಸವದಿ ರೈತ ಸಮುದಾಯಕ್ಕೆ ತಿಳಿ ಹೇಳಿದರು.
ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ರೈತರು ಎಪಿಎಂಸಿ ವೆ-ಬ್ರಿಜ್ ನಲ್ಲಿಯೇ ತೂಕ ಮಾಡಿಸುವುದರಿಂದ ಸರ್ಕಾರಿ ಅಧಿಕಾರಿಗಳ ಕಣ್ಗಾವಲಿನಲ್ಲಿ ನಡೆಯುವ ಈ ತೂಕದಿಂದ ಯಾವುದೇ ತರಹದ ಮೋಸ ವಂಚನೆ ನಡೆಯುವುದಿಲ್ಲ ಎಂದರು.
ಒಂದು ಕಾಲದಲ್ಲಿ ಪಟ್ಟಣದ ಎಪಿಎಂಸಿಗೆ ಅತಿ ಹೆಚ್ಚು ಬೆಲ್ಲ ಆವಕ್ಕಾಗಿ ವ್ಯಾಪಾರು ವಹಿವಾಟಿನ ಭರಾಟೆಯಿಂದ ರಾಜ್ಯದ ಮನ್ನನೆ ಪಡೆದಿತ್ತು. ಈಗ ಆ ವೈಭವವನ್ನು ಕಳೆದುಕೊಂಡಿದ್ದು, ಪರ್ವಾಗಿಲ್ಲ ಎನ್ನುವ? ಮಾತ್ರ ಬೆಲ್ಲ ಮಾರುಕಟ್ಟೆಗೆ ಬರುತ್ತಿದೆ.ಮತ್ತೊಮ್ಮೆ ನಾವು ನೀವೆಲ್ಲರ ಸೇರಿ ಆ ಗತವೈಭವವನ್ನು ಮತ್ತೆ ಮರಳಿ ತರಲು ಚಿಂತನೆ ನಡೆಸಬೇಕಾಗಿದೆ. ಇನ್ನು ಉಳಿದ ದಾರಿ ಒಂದೇ ಅದು ಬೆಲ್ಲ ದ ಜೊತೆಗೆ ಪರ್ಯಾಯ ಅಂದರೆ ಅರಿಶಿಣ, ದ್ವಿದಳ ಧಾನ್ಯಗಳು ಮತ್ತು ಇನ್ನಿತರ ರೈತ ಉತ್ಪನ್ನಗಳನ್ನು ಈ ಮಾರುಕಟ್ಟೆಯಲ್ಲಿಯೇ ಮಾರಾಟ ಮಾಡುವುದರ ಕುರಿತಾಗಿ ಚಿಂತನೆ ನಡೆಸಬೇಕಾಗಿದೆ. ಈ ರೀತಿ ಮಾಡಿದರೆ ಮಾತ್ರ ಎಪಿಎಂಸಿ ಉಳಿಯಲು ಸಾಧ್ಯ ಎಂದರು.
ಯುವ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಅಂದಾಜು ೫೨.೧೪ ಲಕ್ಷಗಳಲ್ಲಿ ತಯಾರಾಗುತ್ತಿರುವ ಈ ವೆ-ಬ್ರಿಜ್ ರೈತ ಸ್ನೇಹಿಯಾಗಿರುವುದರಿಂದ ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾಮಗಾರಿ ಪೂಜಾ ಸಮಾರಂಭದಲ್ಲಿ ಶಾಸಕರಾದಿಯಾಗಿ ಮುಖ್ಯ ಅತಿಥಿಗಳೆಲ್ಲರನ್ನು ಸನ್ಮಾನಿಸಲಾಯಿತು.ಎಪಿಎಂಸಿ ಅಧ್ಯಕ್ಷರಾದ ದೇವಲ್ ದೇಸಾಯಿ, ಉಪಾಧ್ಯಕ್ಷರಾದ ಎಸ್. ಎಂ. ಪಾಟೀಲ್, ಪ್ರಮುಖರಾದ ಬಸನಗೌಡ ಪಾಟೀಲ್, ಶಂಕರಗೌಡ ಪಾಟೀಲ, ಶೇಖರ ಅಂಗಡಿ, ಮಹಾಂತೇಶ ಹಿಟ್ಟಿನಮಠ, ಬಸವರಾಜ ರಾಯರ, ಈರಪ್ಪ ದಿನ್ನಿಮನಿ, ಜಿ. ಎಸ್. ಗೊಂಬಿ,ಚನ್ನು ದೇಸಾಯಿ, ಹಣ್ಮಂತ ಬುರುಡ, ದುಂಡಪ್ಪ ಜಾಧವ, ಚನ್ನಪ್ಪ ಪಟ್ಟಣಶೆಟ್ಟಿ, ಚನಬಸು ಯರಗಟ್ಟಿ,ಮಲ್ಲು ದಲಾಲ, ವಿರೇಶ ಮುಂಡಗನೂರ, ವಿನೋದ್ ಚಮಕೇರಿ,ಜ್ಯೋತೆಪ್ಪ ಕಪರಟ್ಟಿ, ಸಹಾಯಕ ಕಾರ್ಯನಿರ್ವಾಹಕ ಎಲ್.ಬಿ.ಲಮಾಣಿ, ಕಿರಿಯ ಅಭಿಯಂತರ ಬಾಪುಗೌಡ ಪಾಟೀಲ್, ಗುರುಪಾದಪ್ಪ ಅಂಬಿ, ಶಿವಬಸು ಗೌಂಡಿ, ಅರ್ಜುನ್ ಮೋಪಗಾರ, ಚಂದ್ರು ನಾಯಕ ಇದ್ದರು.ಎಪಿಎಂಸಿ ಕಾರ್ಯದರ್ಶಿ ಧನರಾಜ್ ಪಟ್ಟಣಶೆಟ್ಟಿ ನಿರೂಪಿಸಿ ವಂದಿಸಿದರು.
೦೯ mಟಠಿ ೦೧ ಠಿhoಣo
ಬೆಳೆಗೆ ತೂಕದಲ್ಲಿ ಮೋಸವಾಗಬಾರದೆಂದರೆ ಎಪಿಎಂಸಿ ವೆ-ಬ್ರಿಜ್ ನಲ್ಲಿಯೇ ತೂಕ ಮಾಡಿಸಿ- ಶಾಸಕ ಸವದಿ


