ಘಟಪ್ರಭಾ,ಏಪ್ರಿಲ್ 11: 2024 ನೇ ಸಾಲಿನ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಇಲ್ಲಿನ ಪ್ರತಿಷ್ಠಿತ್ ಶ್ರೀ ಎಸ್ ಕೆ ಹುಕ್ಕೇರಿ ಪಿಯುಸಿ ಕಾಲೇಜಿನ ವಿದ್ಯಾರ್ಥಿಗಳು 79% ವಿದ್ಯಾರ್ಥಿಗಳು ತೇರ್ಗಡೆಯಾಗಿ ಸಾಧನೆ ಮಾಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 7 ಡಿಸ್ಟಿಂಗಷನ್,34 ಪಸ್ಟ್ ಕ್ಲಾಸನಲ್ಲಿ ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದಲಿ 16 ಜನ ಡಿಸ್ಟಿಂಗಷನ್,22 ಪಸ್ಟ್ ಕ್ಲಾಸ್ನಲ್ಲಿ ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲಿ 54 ಡಿಸ್ಟಿಂಗಷನ್,76 ಪಸ್ಟ್ ಕ್ಲಾಸ್ ನಲ್ಲಿ ಪಾಸಾಗಿದ್ದಾರೆ.
ಕಾಲೇಜಿಗೆ ಕಲಾ ವಿಭಾಗದಲ್ಲಿ ರೇಖಾ ವಗ್ಗನವರ ( 581) ಅಂಕ ಪಡೆದು ಪ್ರಥಮ ಸ್ಥಾನ, ರೂಪಾ ಒಬ್ಬಟಗಿ (580) ಮತ್ತು ರತ್ನಾ ಹೊಸಪೇಟ್ (580) ಅಂಕ ಪಡೆದು ದ್ವಿತೀಯ ಸ್ಥಾನ, ರಾಧಿಕಾ ಕಮತಿ (571) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಯಲ್ಲವ್ವ ಪೂಜೇರಿ (573) ಅಂಕ ಪಡೆದು ಪ್ರಥಮ ಸ್ಥಾನ, ಪಲ್ಲವಿ ಮಾಯಣ್ಣವರ (572) ಅಂಕ ಪಡೆದು ದ್ವಿತೀಯ ಸ್ಥಾನ, ಸಾನಿಯಾ ಬಾಗೇವಾಡಿ (562 ) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.