ರನ್ನ ಬೆಳಗಲಿ:ಫೆ. ೦೭.,ಮುಧೋಳ ತಾಲೂಕಿನ ರನ್ನ ಬೆಳಗಲಿ ವಲಯದ ಕೆಂಗೆರಿಮಡ್ಡಿ ಕಾರ್ಯಕ್ಷೇತ್ರದಲ್ಲಿ ಮಾಶಾಸನ ಫಲಾನುಭವಿಯವಯಾದ ಹಣಮಂತ ಮಿರಾಪಟ್ಟಿ ಅವರಿಗೆ, ಯೋಜನಾಧಿಕಾರಿ ರಾಜು ಎಸ್ ಆಚಾರ್ಯ ಅವರು ಯೋಜನೆಯಿಂದ ಬಂದಿರುವ ಕಿಟ್ ವಿತರಣೆ ಮಾಡಿ, ಆರ್ಥಿಕವಾಗಿ ಹಿಂದುಳಿದು ಬದುಕಿನಲ್ಲಿ ದುರ್ಬಲರಾಗಿರುವ ಹಿರಿಯ ನಾಗರಿಕರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘವು ದಿನಬಳಕೆ ವಸ್ತುಗಳ ಜೊತೆಗೆ ಬಟ್ಟೆ, ಪ್ರತಿ ತಿಂಗಳು ಜೀವನ ನಿರ್ವಹಣೆಗೆ ತಲಾ ಒಂದು ಸಾವಿರ ರೂಪಾಯಿಗಳನ್ನು ನೀಡುತ್ತಾ ಬರುತ್ತಿದೆ ಎಂದು ತಿಳಿಸಿದವರು, ಆರೋಗ್ಯದ ಬಗ್ಗೆ ವಿಚಾರಿಸಿ,ನೀವು ಏಕಾಂಗಿ ಅಲ್ಲ ನಿಮ್ಮೊಡನೆ ನಾವು ಇರುತ್ತೇವೆ ಎಂದು ತಿಳಿಸಿದರು.
ಸಂಘದ ಸದಸ್ಯರು,ವಲಯದ ಮೇಲ್ವಿಚಾರಕ ಮಲ್ಲಿಕಾರ್ಜುನ ವಜ್ರಮಟ್ಟಿ,ಜ್ಞಾನ ವಿಕಾಸ ಸಮಾನ್ವಯಾಧಿಕಾರಿ ಸುವರ್ಣ ನಂದಿಕೋಲಮಠ,ಸೇವಾ ಪ್ರತಿನಿಧಿ ಅನ್ನಪೂರ್ಣೇಶ್ವರಿ ಮತ್ತು ಇನ್ನಿತರರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದಿಂದ ವಾತ್ಸಲ್ಯ ಕಿಟ್ ವಿತರಣೆ


