ಮತದಾರರ ಪಟ್ಟಿ ಪರಿಷ್ಕರಣೆ ಬಳ್ಳಾರಿ ಜಿಲ್ಲೆಯಲ್ಲಿ ಶೇ 74.78 ರಷ್ಟು ಪ್ರಗತಿ

Sandeep Malannavar
ಮತದಾರರ ಪಟ್ಟಿ ಪರಿಷ್ಕರಣೆ ಬಳ್ಳಾರಿ ಜಿಲ್ಲೆಯಲ್ಲಿ ಶೇ 74.78 ರಷ್ಟು ಪ್ರಗತಿ
WhatsApp Group Join Now
Telegram Group Join Now
ಬಳ್ಳಾರಿ, ಫೆ.07”;;ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ 2025 ರ ಪ್ರಕಾರ 12 ಲಕ್ಷದ 48 ಸಾವಿರದ 780 ಮತದಾರರಿದ್ದು. ಇವರ ಮ್ಯಾಪಿಂಗ್ ಕಾರ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯಿತ್ತಿದ್ದು. ಜಿಲ್ಲೆಯಲ್ಲಿ ಈ ವರೆಗೆ ಶೇ 74.78 ರಷ್ಟು ಆಗಿದೆ.
ದೇಶದಲ್ಲಿ ಮತಪಟ್ಟಿಯ ಎಸ್ ಐ ಆರ್ ( ಸ್ಪೆಷಲ್ ಇನ್ಟೆನ್ಸಿವ್ ರಿವಿಷನ್ ) ವಿಶೇಷ ಸಮಗ್ರ ಪರಿಷ್ಕರಣೆ ಹಲವು ರಾಜ್ಯದಲ್ಲಿ ನಡೆಸುತ್ತಿದೆ. ಬರುವ ದಿನಗಳಲ್ಲಿ ಕರ್ನಾಟಕದಲ್ಲೂ ನಡೆಸಲಿದೆ. ಅದಕ್ಕೂ ಮುನ್ನ ಮತಪಟ್ಟಿಯ ಮ್ಯಾಪಿಂಗ್ ಕಾರ್ಯ ಈಗ ರಾಜ್ಯದಲ್ಲಿ ನಡೆಯುತ್ತಿದೆ.
ಅಂದರೆ ಮತದಾರರ ಪಟ್ಟಿಯನ್ನು ಸರಿಪಡಿಸುವ ಪ್ರಕ್ರಿಯೆ ನಡೆದಿದೆ. ಇದರಲ್ಲಿ ಒಂದೇ ಕ್ಷೇತ್ರದಲ್ಲಿ ಎರೆಡು ಮೂರು ಮತಗಟ್ಟೆಗಳಲ್ಲಿ ಹೆಸರು ಇರುವವರನ್ನು, ಅಲ್ಲದೆ ರಾಜ್ಯದ ಇತರೇ ಕ್ಷೇತ್ರಗಳಲ್ಲಿ ಹೆಸರು ಇರುವವರನ್ನು ಪತ್ತೆಹಚ್ಚಿ ಅಂತವರು ಯಾವ ಕ್ಷೇತ್ರದಲ್ಲಿ ಇರಲು ಬಯಸುತ್ತಾರೆ ಎಂದು ವಿಚಾರಿಸಿ. ಅವರ ಹೆಸರನ್ನು ಒಂದು ಕ್ಷೇತ್ರದಲ್ಲಿ ಮಾತ್ರ ಉಳಿಸಲಾಗುತ್ತಿದೆ. ಅಲ್ಲದೆ ಮದುವೆಗೆ ಮುನ್ನ ತಂದೆ ಮನೆಯಲ್ಲಿದ್ದ ಮಹಿಳೆ ನಂತರ ಗಂಡನ ಮನೆಯ ಮತಗಟ್ಟೆಯಲ್ಲೂ ಹೆಸರು ನೊಂದಾಯೊಸಿಕೊಂಡಿತ್ತಾರೆ ಅಂತರವನ್ನು ಒಂದು ಕಡೆ ಗಂಡನ ಮನೆಯ ಬೂತ್ ನಲ್ಲಿ ಮಾತ್ರ ಇರಿಸಿ ತಂದೆಯ ಮನೆಯ ಮತಗಟ್ಟೆಯಲ್ಲಿ ಇದ್ದುದನ್ನು ತೆಗೆಯಿವುದು. ಹೀಗೆ ಒಂದು ಕುಟುಂಬವನ್ನು ಒಂದು ಕಡೆಯ ಮತಗಟ್ಟೆಯಲ್ಲಿ ಸೇರಿಸುವ, ಪರಿಶೀಲಿದುವ ಕೆಲಸ ಮ್ಯಾಪಿಂಗ್ ಪ್ರಕ್ರಿಯೆ ನಡೆಸುತ್ತಿದೆ.
ರಾಜ್ಯದಲ್ಲಿ 2002 ರಲ್ಲಿ ನಡೆದ ಮತಪಟ್ಟಿ ಪರಿಷ್ಕರಣೆಯಲ್ಲಿ ಇದ್ದವರನ್ನು ಪರಿಗಣಿಸಿ ಈ ಪ್ರಕ್ರಿಯೆ ನಡೆದಿದೆ. 2002 ರ ಮತಪಟ್ಟಿಯಲ್ಲಿ ಇಲ್ಲದವರು ನಂತರ ಸೇರಿದ್ದರೆ ಅವರ ಕುಟುಂಬದ ಮೂಲದ ದಾಖಲೆಯೊಂದಿಗೆ ತಾಳೆ ನೋಡಲಾಗುತ್ತದೆ.
ಹೀಗೆ ಒಂದೇ ಕ್ಷೇತ್ರದಲ್ಲಿ ಮತ್ತು ಇತರೇ ಕ್ಷೇತ್ರದಲ್ಲಿ ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರದಲ್ಲಿ 31403 ಜನರು ಇರುವುದನ್ನು ಪತ್ತೆಹಚ್ಚಿದ್ದು ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಈ ಪ್ರಕ್ರಿಯೆ ಮುಗಿದ ಮೇಲೆ ಚುನಾವಣಾ ಆಯೋಗ ದ ನಿರ್ದೇಶನ ಬಂದಾಗ ಎಸ್ ಐ ಆರ್ ಪ್ರಕ್ರಿಯೆ ನಡೆಯಲಿದೆ. ಆಗ ಸತ್ತಿರುವ, ಭಾರತೀಯ ನಾಗರೀಕರಲ್ಲದವರ ಹೆಸರನ್ನು ಪತಪಟ್ಟಿಯಿಂದ ಕೈ ಬಿಡಲಿದೆ. ಹೀಗೆ ಕೈ ಬಿಡುವ ಮುನ್ನ ಸಂಬಂಧಿಸಿದ ಮತದಾರರಿಗೆ ನೋಟೀಸ್ ನೀಡಿ ಅವರ ಹಕ್ಕಿನ ಬಗ್ಗೆ ಪ್ರಶ್ನಿಸಲಾಗುತ್ತದೆ. ಭಾರತೀಯ ನಾಗರೀಕರೆಂದು ಆಯೋಗ ಹೇಳಿರುವ 12 ದಾಖಲೆಗಳನ್ನು ಒದಗಿಸದರೆ ಮತಪಟ್ಟಿಯಲ್ಲಿ ಹೆಸರನ್ನು ಹಾಗೇ ಉಳಿಸಲಿದೆ.
ಬಾಂಗ್ಲದವರು:
ಬಿಜೆಪಿಯ ನಾಯಕ, ಮಾಜಿ ಸಚಿವ ಬಿ.ಶ್ರೀರಾಮುಲು ಅವರು ನಗರದ ಕೌಲ್ ಬಜಾರ್ ಪ್ರದೇಶದಲ್ಲಿ ಹತ್ತು ಸಾವಿರ ಅಕ್ರಮ ಬಾಂಗ್ಲಾ ವಲಸಿಗರು ಇದ್ದಾರೆಂದು ಹೇಳಿದ್ದರು. ಎಸ್ ಐ ಆರ್ ನಡೆದರೆ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.
ಅಧಿಕಾರಿಗಳ ಮೂಲದ ಪ್ರಕಾರ ಬಳ್ಳಾರಿಯಲ್ಲಿ ಬಾಂಗ್ಲಾ ವಲಸಿಗರು ಇದ್ದಾರೆ ಆದರೆ ಶ್ರೀರಾಮುಲು ಹೇಳಿದಷ್ಟಿಲ್ಲ. 2002 ರ ಮತಪಟ್ಟಿಯಲ್ಲಿ ಅವರು ಹೆಸರು ಹೊಂದಿದ್ದರೆ ಈಗ ತೆಗೆಯಲು ಬರಲ್ಲ. ಹೊಸದಾಗಿ ಬಂದು ನಕಲಿ ದಾಖಲೆ ಮೂಲಕ ಸೇರಿದ್ದರೆ ಯಾವುದೇ ಮುಲಾಜಿಲ್ಲದೆ ಅಂತಹವರನ್ನು ತೆಗೆಯಲಿದೆನ್ನುತ್ತಾರೆ
WhatsApp Group Join Now
Telegram Group Join Now
Share This Article