ವಾತ್ಸಲ್ಯ ಕಿಟ್ ವಿತರಿಸಿದ ಶ್ರೀಮತಿ ದಯಶೀಲ.

Sandeep Malannavar
ವಾತ್ಸಲ್ಯ ಕಿಟ್ ವಿತರಿಸಿದ ಶ್ರೀಮತಿ ದಯಶೀಲ.
WhatsApp Group Join Now
Telegram Group Join Now

ಬೈಲಹೊಂಗಲ. ತಾಲೂಕಿನ  ಜಾಲಿಕೊಪ್ಪ ಗ್ರಾಮದ  ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಫಲಾನುಭವಿಗೆ   ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾತೃಶ್ರೀ ಹೇಮಾವತಿ ಅಮ್ಮನವರು ಕೊಡಮಾಡಲ್ಪಟ್ಟ ವಾತ್ಸಲ್ಯ ಬಟ್ಟೆ ಕಿಟ್ ವಿತರಣೆಯನ್ನು  ಶ್ರೀಮತಿ ಸಾವಕ್ಕ ಮಾದರ ಇವರಿಗೆ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆಯ  ಧಾರವಾಡ ಪ್ರಾದೇಶಿಕ ಕಚೇರಿ ಪ್ರಾದೇಶಿಕ ನಿರ್ದೇಶಕರಾದ  ಶ್ರೀಮತಿ ದಯಶೀಲ ಅವರು ವಿತರಿಸಿ  ಫಲಾನುಭವಿಗಳ ಆರೋಗ್ಯಬಗ್ಗೆ ಕ್ಷೇಮ ವಿಚಾರಿಸಿದರು.

       ಬೆಳಗಾವಿ ಜಿಲ್ಲೆಯ ನಿರ್ದೇಶಕರಾದ ಸತೀಶ ನಾಯ್ಕ್, ಗ್ರಾಮ ಪಂಚಾಯಿತ ಅಧ್ಯಕ್ಷರಾದ ಯಲ್ಲಪ್ಪ,  ತಾಲೂಕು ಯೋಜನಾಧಿಕಾರಿಗಳಾದ ವಿಜಯಕುಮಾರ,  ತಾಲೂಕು ಜ್ಞಾನವಿಕಾಸ ಸಮನ್ವಯ ಅಧಿಕಾರಿ  ಶೈಲಾ ಜೆ,  ವಲಯದ ಮೇಲ್ವಿಚಾರಕರಾದ ಮಹಾಂತೇಶ,  ಸೇವಾ ಪ್ರತಿನಿಧಿ ಸಾವಕ್ಕ, ಒಕ್ಕೂಟದ ಅಧ್ಯಕ್ಷರು ,ಸಂಘದ ಸದಸ್ಯರು ಎಲ್ಲರೂ ಸೇರಿ ವಾತ್ಸಲ್ಯಫಲಾನುಭವಿಯ ಯೋಗ ಕ್ಷೇಮ ವಿಚಾರಿಸಿ ವಾತ್ಸಲ್ಯ ಕಿಟ್ಟನ್ನು ವಿತರಿಸಿ ಶುಭ ಹಾರೈಸಿದರು.
WhatsApp Group Join Now
Telegram Group Join Now
Share This Article