ಶಾಸಕ ನಾರಾ ಭರತ್ ರೆಡ್ಡಿಯವರಿಂದ ಬೀದಿ ಬದಿ ವ್ಯಾಪಾರಿಗೆ 50 ಸಾವಿರ ರೂ. ನೆರವು, ಅಂಗಡಿ ಉದ್ಘಾಟಿಸಿದ ಮಾಜಿ ಮೇಯರ್ ರಾಜೇಶ್ವರಿ

Sandeep Malannavar
ಶಾಸಕ ನಾರಾ ಭರತ್ ರೆಡ್ಡಿಯವರಿಂದ ಬೀದಿ ಬದಿ ವ್ಯಾಪಾರಿಗೆ 50 ಸಾವಿರ ರೂ. ನೆರವು, ಅಂಗಡಿ ಉದ್ಘಾಟಿಸಿದ ಮಾಜಿ ಮೇಯರ್ ರಾಜೇಶ್ವರಿ
Oplus_131072
WhatsApp Group Join Now
Telegram Group Join Now
ಬಳ್ಳಾರಿ, ಫೆ.05: ನಗರದ ಬೀದಿ ಬದಿ ವ್ಯಾಪಾರಿ ಚಿರಂಜೀವಿ (ಗಾದಿಲಿಂಗಪ್ಪ) ಅವರ ನೂತನ ಗೂಡಂಗಡಿಯನ್ನು ಮಾಜಿ ಮೇಯರ್, ಪಾಲಿಕೆಯ ಸದಸ್ಯೆ ಎಂ.ರಾಜೇಶ್ವರಿ ಅವರು ಗುರುವಾರ ಬಂಡಿಹಟ್ಟಿಯ ಕಾಲುವೆ ಬಳಿ ಉದ್ಘಾಟಿಸಿದರು.
ಕಾಂಗ್ರೆಸ್ ಕಾರ್ಯಕರ್ತರೂ ಆಗಿರುವ ಚೀರಂಜೀವಿ ಅವರ ಈ ಬೀದಿ ಬದಿ ಗೂಡಂಗಡಿ ಇಡಲು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರು 50 ಸಾವಿರ ರೂ.ಗಳ ನೆರವು ನೀಡಿದ್ದಾರೆ ಎಂದು ಅವರು ತಿಳಿಸಿದರು. ತಮ್ಮ ಬೇಡಿಕೆಗೆ ಸ್ಪಂದಿಸಿದ ಶಾಸಕರ ಹಾಗೂ ಮಾಜಿ ಮೇಯರ್ ರಾಜೇಶ್ವರಿ ಅವರಿಗೆ ಚಿರಂಜೀವಿ ಧನ್ಯವಾದ ಸಲ್ಲಿಸಿದ್ದಾರೆ.
ಗೂಡಂಗಡಿ ಉದ್ಘಾಟನೆ ಸಂದರ್ಭ ಗಾದಿಲಿಂಗ, ಮಂಜು ಹಾಗೂ ಯುವ ಮುಖಂಡ ಯೋಗಾನಂದ ರೆಡ್ಡಿ ಸೇರಿದಂತೆ ಹಲವರು ಹಾಜರಿದ್ದರು.
WhatsApp Group Join Now
Telegram Group Join Now
Share This Article