ಸಸ್ಪೆನ್ಸ್, ಥ್ರಿಲ್ಲರ್ ಜಾನರ್ ಕಥಾಹಂದರ ಹೊಂದಿರುವ ಚಿತ್ರ ‘ಸರ್ಕಾರಿ ಶಾಲೆ- H 8’ ಇಂದು ರಾಜ್ಯಾದ್ಯಂತ ತೆರೆಕಂಡಿದೆ.
ಜನಪ್ರಿಯ ಹಾಸ್ಯಕಲಾವಿದ ಬಿಗ್ ಬಾಸ್ ವಿಜೇತ ಗಿಲ್ಲಿ ನಟ ಪ್ರಮುಖ ಪಾತ್ರಲ್ಲಿ ನಟಿಸಿರುವ ಈ ಚಿತ್ರಕ್ಕೆ ಗುಣ ಹರಿಯಬ್ಬೆ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಗಿರಿಚಂದ್ರ ಪ್ರೊಡಕ್ಷನ್ಸ್ ಮೂಲಕ ತೇಜಸ್ವಿನಿ ಎಸ್. ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಪ್ರಾರಂಭದಿಂದಲೂ ಕುತೂಹಲ ಕೆರಳಿಸುತ್ತಲೇ ಸಾಗುವ ‘ಸರ್ಕಾರಿ ಶಾಲೆ- H 8’ ಚಿತ್ರದ ಕಥೆ ಒಂದು ವಿಗ್ರಹದ ಸುತ್ತ ನಡೆಯುತ್ತದೆ. ಈ ಚಿತ್ರಕ್ಕೆ ಬೆಂಗಳೂರು, ಚಿತ್ರದುರ್ಗ, ಶಿರಾ, ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
ವಿಜೇತ್ ಮಂಜಯ್ಯ ಸಂಗೀತ ಸಂಯೋಜನೆಯ 3 ಹಾಡುಗಳು ಈ ಚಿತ್ರದಲ್ಲಿದ್ದು, ಹಾಸ್ಯನಟ ಶರಣ್ ಹಾಗೂ ಮೆಹಬೂಬ್ ಸಾಬ್ ಹಾಡಿದ್ದಾರೆ. ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ರವಿ ರಾಮದುರ್ಗ ಹಾಗೂ ವೀನಸ್ ಮೂರ್ತಿ ಕ್ಯಾಮೆರಾ ವರ್ಕ್, ರವಿತೇಜ ಸಿ.ಹೆಚ್. ಸಂಕಲನ ಈ ಚಿತ್ರಕ್ಕಿದೆ.
ಸರ್ಕಾರಿ ಶಾಲೆ- H 8′ ಚಿತ್ರದಲ್ಲಿ ಗಿಲ್ಲಿ ನಟನೊಂದಿಗೆ ಗುಣ ಹರಿಯಬ್ಬೆ, ಮೇಘಶ್ರೀ, ಜನಪದ ಕಲಾವಿದ ಮೋಹನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಉಳಿದಂತೆ ಹಿರಿಯನಟ ರಾಘವೇಂದ್ರ ರಾಜ್ ಕುಮಾರ್, ಸುಚೇಂದ್ರ ಪ್ರಸಾದ್ , ಜಗಪ್ಪ, ನವಾಜ್, ಸುಶ್ಮಿತ ಜಗಪ್ಪ, ಕಡ್ಡಿ ವಿಶ್ವ, ಜೋತಿರಾಜ್, ನಮ್ರತಾ ನಟಿಸಿದ್ದಾರೆ.


