ಬಳ್ಳಾರಿ, ಫೆ.03..: ಕಳೆದ ಎರೆಡುವರೆ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಜಿಲ್ಲೆಯ ಕಂಪ್ಲಿ ಮತ್ತು ಗಂಗಾವತಿ ತಾಲೂಕಿನ ಜಂತಕಲ್ಲು ನಡುವೆ ಹರಿಯುವ ತುಂಗಭದ್ರ ನದಿಗೆ ಹೊಸ ಸೇತುವೆ ನಿರ್ಮಾಣ ದ ಕಾಮಗಾರಿಗೆ ಅಂತೂ ಇಂತೂ ಕಾಲ ಕೂಡಿ ಬಂತು ಎಂಬಂತಾಗಿದೆ.
ಸಧ್ಯ ಕಂಪ್ಲಿ ಕೋಟೆ ಬಳಿಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿಗೆ ಸಂಪರ್ಕ ಕಲ್ಪಿಸಲು 1961 ರಲ್ಲಿ ಲೋಕೋಪಯೋಗಿ ಇಲಾಖೆ ಸುಮಾರು 1,934 ಅಡಿ (589 ಮೀ.) ಉದ್ದ ಮತ್ತು 22 ಅಡಿ ಅಗಲದ 51 ಕಾಲಮ್ಗಳ ಸೇತುವೆ ನಿರ್ಮಾಣ ಮಾಡಿತ್ತು.

ಆಗಾಗ್ಗೆ ನದಿಯ ನೀರಿನ ಹೆಚ್ಚಿ ಸೇತುವೆಯ ಮೇಲೆ ನೀರು ಹರಿಯುತ್ತಿತ್ತು. ಆಗ ವಾಹನ ಮತ್ತು ಜನ ಸಂಚಾರ ಸ್ಥಗಿತಗೊಳ್ಳುತ್ತಿತ್ತು. ಇದರಿಂದ ಮತ್ತು ಜಿಂದಾಲ್, ಬಿಟಿಪಿಎಸ್ ಮತ್ತು ಗಣಿಗಾರಿಕೆಯಿಂದಾಗಿ ಭಾರಿ ವಾಹನಗಳ ಓಡಾಟಕ್ಕೆ ಸೇತುವೆ ಕಳೆದ ಎರೆಡು ವರೆ ದಶಕದಿಂದ ನಲಿಗಿ ಹೋಗಿದೆ. ಅಲ್ಲಲ್ಲಿ ಬಿರುಕು ಕಾಣೊಸಿಕೊಂಡಿದೆ. ದುರಸ್ಥಿಯೂ ನಡೆದಿದೆ. ಆದರೂ ಮಳೆಗಾಲದಲ್ಲಿ ಜಲಾಶಯದಿಂದ ನದಿಗೆ ಒಂದು ಲಕ್ಷದ ಮೇಲೆ ನೀರು ಬಿಟ್ಟಾಗಲೆಲ್ಲ ಇದರ ಮೇಲೆ ಓಡಾಟ ನಿಷೇಧವಾಗುತ್ತದೆ.
ಅದಕ್ಕಾಗಿ ಇಲ್ಲಿ ಹೊಸ ಸೇತುವೆ ನಿರ್ಮಿಸಬೇಕೆಂಬ ಬೇಡಿಕೆ ಕಳೆದ ಎರೆಡು ವರೆ ವರ್ಷದಿಂದ ಕೇಳುತ್ತಲೇ ಇತ್ತು. ಅನೇಕ ಬಸರಿ ಸರ್ಕಾರ, ಸಚಿವರು, ಶಾಸಕರು ಸರ್ವೇ ಮಾಡಿ, ಹೊಸ ಸೇತುವೆ ನಿರ್ಮಿಸಲಾಗುವುದು ಎಂದು ಹೇಳುತ್ತಲೇ ಇತ್ತು.
ಆದರೆ ಈ ವರಗೆ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ನಿನ್ನೆಯಿಂದ ಈಗಿರುವ ಸೇತುವೆ ಕೆಳ ಭಾಗದ ಅಂದರೆ ಸಿರುಗುಪ್ಪ ಕಡೆ ಅರ್ಧ ಕಿಲೋ ಮೀಟರ್ ಅಂತರದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲು ಮಣ್ಣು ಪರೀಕ್ಷೆ ಕಾರ್ಯ ನಡೆದಿದೆ.
ಅಸಕಡೆ ಜಂತಕಲ್ ಹೊರ ವಲಯದಿಂದ ಈ ಕಡೆ ಕಂಪ್ಲಿ- ಇಟಗಿ ಮಾರ್ಗದ ಸಿರುಗುಪ್ಪ ರಸ್ತೆ ಸಂಪರ್ಕಿಸಲು ಸೇತುವೆ ನಿರ್ಮಾಣ ಆಗಲಿದೆ. ಅಂದಾಜಿನ ಪ್ರಕಾರ. ಈ ಮೊದಲಿಗಿಂತ ಅರ್ಧಕಿಲೋ ಮೀಟರ್ ಗಿಂತ ಹೆಚ್ಚಿನ ದೂರ ಆಗಲಿದೆ.
ಒಂದು ನೂರು ಕೋಟಿ ರೂ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈಗ ಮಣ್ಣು ಪರೀಕ್ಷೆ ನಡೆಸಿ ಸ್ಥಳ ನಿಗಧಿ ಮಾಡಿ, ಡಿಪಿಅರ್ ಸಿದ್ದಪಡಿಸಿ ಸರ್ಕಾರದ ಅನುಮತಿಗೆ ನೀಡಲಿದೆ.


