ಸಂವಿಧಾನ ಸರ್ವ ಧರ್ಮ ಗ್ರಂಥಗಳಿಗಿಂತಲೂ ಸರ್ವಶ್ರೇಷ್ಟ ಗ್ರಂಥ : ಈಶ್ವರಪ್ಪ ಬಡ್ಡಿ

Sandeep Malannavar
ಸಂವಿಧಾನ ಸರ್ವ ಧರ್ಮ ಗ್ರಂಥಗಳಿಗಿಂತಲೂ ಸರ್ವಶ್ರೇಷ್ಟ ಗ್ರಂಥ : ಈಶ್ವರಪ್ಪ ಬಡ್ಡಿ
WhatsApp Group Join Now
Telegram Group Join Now

ಹುನಗುಂದ: ತಾಲೂಕಿನ ಇದ್ದಲಗಿ ಗ್ರಾಮದ ಶ್ರೀ ಶರಣಬಸವೇಶ್ವರ ವಿದ್ಯಾನಿಕೇತನ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ೭೭ನೆಯ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮೀ ಹನಮಂತ ಎಮ್ಮೆಟ್ಟಿ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಈ ವೇಳೆ ನಿವೃತ್ತ ಶಿಕ್ಷಕ ಈಶ್ವರಪ್ಪ ಬಡ್ಡಿ ಮಾತನಾಡಿ ಭಾರತ ದೇಶಕ್ಕೆ ೧೯೪೭ ಅಗಸ್ಟ್ ೧೫ರಂದು ಸ್ವಾತಂತ್ರವನ್ನು ಪಡೆಯಿತು. ದೇಶದ ಸುವ್ಯವಸ್ಥಿತ ಆಡಳಿತವನ್ನು ಕಲ್ಪಿಸಲು ೧೯೫೦ ಜನವರಿ ೨೬ರಂದು ಡಾ. ಬಿ.ಆರ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ವಿಶ್ವವಿಖ್ಯಾತಿ ಲಿಖಿತ ಸಂವಿಧಾನವು ದೇಶದಲ್ಲಿ ಜಾರಿಗೆ ಬಂತು. ಸರ್ವ ಧರ್ಮಗಳ ಗ್ರಂಥಗಳಿಗಿಂತಲೂ ಶ್ರೇ? ಗ್ರಂಥವೇ ಸಂವಿಧಾನವಾಗಿದೆ. ನಮ್ಮ ದೇಶದ ಆಡಳಿತ ಸಂವಿಧಾನದ ಆಶಯದಂತೆ ಯಾವುದೇ ಜಾತಿ,ಮತ, ಪಂಥ ಭೇದವಿಲ್ಲದೆ ಸರ್ವರಿಗೂ ಸಮಬಾಳು, ಸಮಪಾಲು ವ್ಯವಸ್ಥೆಯನ್ನು ಕಲ್ಪಿಸಿದ್ದು ಅಂತ ಸಂವಿಧಾನವನ್ನು ನಾವು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಶಾಲೆಯ ಎಲ್‌ಕೆಜಿ,ಯುಕೆಜಿ ಚಿಕ್ಕ ಪುಟಾಣಿ ಮಕ್ಕಳಿಂದ ಕನ್ನಡ, ಆಂಗ್ಲ ಭಾ?ಗಳಲ್ಲಿ ಗಣರಾಜ್ಯೋತ್ಸವದ ಕುರಿತು ತೊದಲ ನುಡಿಗಳ ಭಾ?ಣ ಹಾಗೂ ವಿವಿಧ ದೇಶಭಕ್ತಿ ಗೀತೆಗಳಿಗೆ ಪುಟಾಣಿ ಮಕ್ಕಳ ನೃತ್ಯ ಕಾರ್ಯಕ್ರಮಕ್ಕೆ ಆಗಮಿಸಿದ ಪಾಲಕರ ಕಣ್ಮನ ಸೆಳೆಯಿತು.ನಂತರ ವಿವಿಧ ಸ್ಪರ್ಧೆ ಮತ್ತು ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಗಣ್ಯರು ವಿತರಿಸಿದರು.
ಈ ವೇಳೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ರಹಿಮಾನಸಾಬ ಮುಲ್ಲಾ, ಕಾರ್ಯದರ್ಶಿ ನಾಗಯ್ಯ ಕಲ್ಯಾಣಮಠ, ಮುಖ್ಯೋಪಾಧ್ಯಾಯನಿ ವಿದ್ಯಾ.ಪಿ. ಖಾತೇದಾರ, ಶಿಕ್ಷಕಿ ಸುನಿತಾ ಬಾದವಾಡಗಿ, ಮುಖಂಡರಾದ ಬಸವರಾಜ ಬಡ್ಡಿ, ಬಸಪ್ಪ ಹಳಪೇಟಿ, ಮಹಾಂತೇಶ ಬಡ್ಡಿ, ಹುಸನಪ್ಪ ಮಾದರ, ಮುತ್ತಪ್ಪ ಆನೇಹೊಸೂರ, ಮಹಾಂತೇಶ ನಾಡಗೌಡರ, ಮಹಾಂತೇಶ ಬಡ್ಡಿ ಸೇರಿದಂತೆ ಅನೇಕರು ಇದ್ದರು. ಪ್ರಿಯಾಂಕ ಕಲ್ಯಾಣಮಠ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

WhatsApp Group Join Now
Telegram Group Join Now
Share This Article