ಗುಣಮಟ್ಟದ ಶಿಕ್ಷಣ ನೀಡುವುದು ಇಂದಿನ ಅವಶ್ಯಕತೆಯಾಗಿದೆ : ಸತೀಶ ಜಾರಕಿಹೊಳಿ

Sandeep Malannavar
ಗುಣಮಟ್ಟದ ಶಿಕ್ಷಣ ನೀಡುವುದು ಇಂದಿನ ಅವಶ್ಯಕತೆಯಾಗಿದೆ : ಸತೀಶ ಜಾರಕಿಹೊಳಿ
WhatsApp Group Join Now
Telegram Group Join Now
ಘಟಪ್ರಭಾ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ಇಂದಿನ ಅವಶ್ಯಕತೆಯಾಗಿದೆ. ಕೇವಲ ಶಿಕ್ಷಣ ನೀಡುವುದು ನಮ್ಮ ಉದ್ದೇಶ ಆಗಬಾರದು ಗುಣಮಟ್ಟದ ಶಿಕ್ಷಣ ನೀಡುವದರ ಬಗ್ಗೆ ನಾವು ಹೆಚ್ಚು ಗಮನಹರಿಸಬೇಕೆಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಅವರು ಶನಿವಾರ ಪಟ್ಟಣದ ಎಸ್.ಡಿ.ಟಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಹೊಸದಾಗಿ ನಿರ್ಮಿಸಲಾದ ಶಾಲಾ ಕಟ್ಟಡದಗಳನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಮಟ್ಟದಲ್ಲಿ ನಾವು ಬೆಳಸಬೇಕು. ಪಾಠದ ಜೊತೆಗೆ ಆಟಕ್ಕೂ ಹೆಚ್ಚು ಮಹತ್ವ ನೀಡಬೇಕು. ಜೊತೆಗೆ ಸದರಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಈ ಶಾಲೆಯನ್ನು ಬೆಳಸಲು ಮುಂದಾಗಿದ್ದು, ಬಹಳ ಸಂತಸ ತಂದಿದೆ ಎಂದ ಅವರು, ೪೦೦ ವರ್ಷಗಳ ಇತಿಹಾಸ ಹೊಂದಿರುವ ಶ್ರೀಮಠವು ಗ್ರಾಮೀಣ ಭಾಗದ ಮಕ್ಕಳ ಬಗ್ಗೆ ಕಾಳಜಿ ಹೊಂದಿರುವುದು ಉತ್ತಮ ಸಾಮಾಜಿಕ ಕಾರ್ಯವಾಗಿದೆ ಎಂದು ಸಂತಸ ವ್ಯಕ್ತ ಪಡಿಸಿ ಶ್ರೀಮಠದ ಕಾರ್ಯವನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೈಲಹೊಂಗಲ್ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಐತಿಹಾಸಿಕ ಅರಭಾವಿ ಶ್ರೀ ದುರದುಂಡೀಶ್ವರ ಮಠವು ನಿರಂತರ ಅನ್ನ ದಾಸೋಹ ಜೊತೆಗೆ ಶಿಕ್ಷಣ ದಾಸೋಹದ ಬಗ್ಗೆ ಗಮನ ಹರಿಸಿದೆ ಹಿಂದಿನ ಶ್ರೀಗಳ ಮುಂದಾಲೋಚನೆಯಿಂದ ಪ್ರಾರಂಭವಾದ ಈ ಸಂಸ್ಥೆ ಇಂದು ಹೆಮ್ಮರವಾಗಿ ಬೆಳದಿದೆ. ಇಂದಿನ ಪೂಜ್ಯರ ನೃತೃತ್ವದಲ್ಲಿ ಮುಂದೆಯು ಕೂಡಾ ಶ್ರೀಮಠ ಹಾಕಿಕೊಂಡಿರುವ ಯೋಜನೆಗಳು ಯಶಸ್ವಿಯಾಗಲಿ ಎಂದು ಹಾರೈಸಿದರು.
  ಕಿತ್ತೂರ ಶಾಸಕ ಬಾಬಾಗೌಡ ಪಾಟೀಲ ಮಾತನಾಡಿ, ನಮ್ಮ ಮಕ್ಕಳನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಮಟ್ಟದಲ್ಲಿ ನಾವು ಸಜ್ಜುಗೊಳ್ಳಿಸಬೇಕು. ಈ ನಿಟ್ಟಿನಲ್ಲಿ ಶ್ರೀ ದುರದುಂಡೀಶ್ವರ ಮಠವು ಅನೇಕ ಯೋಜನೆಗಳನ್ನು ಹಾಕಿಕೊಂಡಿರುವುದು ಈ ಭಾಗದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಸಮ್ಮುಖ ವಹಿಸಿದ ಬೆಳಗಾವಿ ನಾಗನೂರ ರುದ್ರಾಕ್ಷಿಮಠದ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ, ಶ್ರೀ ಮಠವು ಈ ಭಾಗದ ಬಡ ಮಕ್ಕಳ ಭವಿಷ್ಯಕ್ಕಾಗಿ ಏಳು ದಶಕಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದೆ. ಯಾವುದೆ ಅನುದಾನ ಇಲ್ಲದೆ ಸುಜ್ಜಿತ ಕಟ್ಟಡ ನಿರ್ಮಿಸಿದ್ದು, ಬಡ ಮಕ್ಕಳ ಬಗ್ಗೆ ಶ್ರೀಮಠಕ್ಕೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದು ಸಂತಸ ವ್ಯಕ್ತ ಪಡಿಸಿದರು.
ಸಾನಿಧ್ಯ ವಹಿಸಿದ್ದ ಅರಭಾವಿ ಶ್ರೀ ದುರದುಂಡೀಶ್ವರ ಮಠ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಆಗಿರುವ ಜಗದ್ಗುರು ಶ್ರೀ ಗುರುಬಸವಲಿಂಗ ಮಹಾಸ್ವಾಮೀಜಿ ಅವರು ಆಶಿರ್ವಚನ ನೀಡಿ, ಕಳವು ಆಗದಂತಹ ರತ್ನ ಶಿಕ್ಷಣ ಆಗಿದೆ. ಶ್ರೀಮಠದ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರವನ್ನು ನೀಡಲಾಗುತ್ತಿದೆ. ಮಠದ ಹಿಂದಿನ ಜಗದ್ಗುರುಗಳು ಗ್ರಾಮೀಣ ಭಾಗದ ಮಕ್ಕಳ ಭವಿಶ್ಯಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳಸಿದ್ದು, ನಮ್ಮ ಶಾಲೆಗಳಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಸರ್ಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸಫಲ ಉದ್ಯಮಿಗಳಾಗಿದ್ದಾರೆ, ಅಲ್ಲದೇ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಸಂಘವನ್ನು ಮಾಡಿಕೊಂಡು, ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಬಹಳ ಸಂತಸ ತಂದಿದೆ ಎಂದು ಹೇಳಿದರು.
  ಶ್ರೀಮಠದ ಪರವಾಗಿ ಗಣ್ಯರಿಗೆ ಹಾಗೂ ಶಾಲೆಯ ನೂತನ ಕಟ್ಟಡಕ್ಕೆ ಪೀಠೋಪಕರಣಗಳನ್ನು ದೇಣಿಗೆ ನೀಡಿದ ಮಹನಿಯರಿಗೆ ಸತ್ಕರಿಸಿ ಹಳೆಯ ವಿರ್ದ್ಯಾಥಿಗಳಿಗೆ ಅಭಿನಂದಿಸಲಾಯಿತು.
ವೇದಿಕೆಯ ಮೇಲೆ ಜೆ.ಜಿ ಸಹಕಾರಿ ಆಸ್ಪತ್ರೆಯ ಅಧ್ಯಕ್ಷರಾದ ಅಪ್ಪಯ್ಯಪ್ಪಾ ಬಡಕುಂದ್ರಿ, ಎಸ್.ಡಿ.ಟಿ ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ಸಿದ್ಧವ್ವಾ ಶೆಟ್ಟೆಪ್ಪ ಕಾಡದವರ, ಗೋಕಾಕ ತಹಶೀಲ್ದಾರರಾದ ಮೋಹನ ಭಸ್ಮೆ, ಚಿಕ್ಕೋಡಿ ಡಿಡಿಪಿಯು ಪಿ.ಆಯ್.ಭಂಡಾರಿ, ಘಟಪ್ರಭಾ ಪೊಲೀಸ ಠಾಣೆ ಪಿ.ಐ ಎಚ್.ಡಿ.ಮುಲ್ಲಾ, ಇಓ (ಎಂ.ಡಿ.ಎಂ) ಚಿಕ್ಕೋಡಿ ರಾಜೇದ್ರ ತೇರದಾಳ, ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಎಂ.ಎಸ್.ಪಾಟೀಲ, ಮಾರುತಿ ಯಡ್ರಾವಿ, ಎಲ್.ಕೆ.ತೋರಣಗಟ್ಟಿ, ಕೆ.ಎಸ್.ನಾಗರಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಡಿ.ಎಂ.ದಳವಾಯಿ, ಸುರೇಶ ಕಾಡದವರ, ರಮೇಶ ತುಕ್ಕಾನಟ್ಟಿ, ಪರಶುರಾಮ ಗಾಡಿವಡ್ಡರ, ಕಾಡಪ್ಪ ಕರೋಶಿ, ಮಲ್ಲಪ್ಪ ಕಮತ, ಗಂಗಾಧರ ಬಡಕುಂದ್ರಿ, ರಾಮಣ್ಣ ಹುಕ್ಕೇರಿ, ಮುತ್ತಣ್ಣ ಹತ್ತರವಾಟ, ಪ್ರವೀನ ಮಟಗಾರ, ಮಲ್ಲಿಕಾರ್ಜುನ ತುಕ್ಕಾನಟ್ಟಿ ನಾಗರಾಜ ನಾಯಿಕ, ಸುಧೀರ ಜೋಡಟ್ಟಿ, ಲಗಮಣ್ಣ ನಾಗನ್ನವರ, ಈರಣ್ಣಾ ಕಲಕುಟಗಿ ನಮ್ಮ ಎಸ್.ಡಿ.ಟಿ ಹೈಸ್ಕೂಲ್ ಹಳೆ ವಿದ್ಯಾರ್ಥಿಗಳ ಸಂಘದ ಎಲ್ಲಾ ಸದಸ್ಯರು. ಪಟ್ಟಣದ ಹಿರಿಯರು. ಯುವಕರು. ವಿದ್ಯಾರ್ಥಿಗಳು. ಶಕ್ಷಕರು. ಶಕ್ಷಕಿಯರು ಸೇರಿದಂತೆ ನೂರಾರು ಜನರು ಇದ್ದರು.
ಕಾರ್ಯಕ್ರಮವನ್ನು ಪ್ರಾಸ್ತಾವಿಕವಾಗಿ ನಿವೃತ್ತ ಪ್ರಾಚಾರ್ಯರಾದ ವಿ.ಕೆ.ನಾಯಿಕ ಮಾತನಾಡಿದರು, ಶಿಕ್ಷಕ ಆರ್.ಡಿ.ಉಪ್ಪಾರ ಸ್ವಾಗತಿಸಿದರು, ಭಾನುಮತಿ ಬಿ.ಸಿ ಅವರು ನಿರೂಪಿಸಿ ವಂದಿಸಿದರು.
WhatsApp Group Join Now
Telegram Group Join Now
Share This Article