ಬೆಳಗಾವಿ : ಈ ಭಾಗದ ಖ್ಯಾತ ಹಿರಿಯ ವಕೀಲರಾದ ದಿನೇಶ ಎಂ. ಪಾಟೀಲ, ಬೆಳಗಾವಿ ಅವರನ್ನು ಕರ್ನಾಟಕ ವಿರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕರನ್ನಾಗಿ ಕರ್ನಾಟಕ ಸರ್ಕಾರ ಇತ್ತೀಚೆಗೆ ನೇಮಕ ಮಾಡಿದೆ.
ಕರ್ನಾಟಕ ವಿರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಅವರ ಶೈಕ್ಷಣಿಕ ಸಾಧನೆ, ವೃತ್ತಿಪರ ಕೊಡುಗೆ, ಸಮಾಜ ಸೇವೆ, ವಿವಿಧ ಕ್ಷೇತ್ರಗಳಲ್ಲಿ ಅವರ ಕೊಡುಗೆ ಹಾಗೂ ಅವರ ಬಹುಮುಖ ವ್ಯಕ್ತಿತ್ವವನ್ನು ಪರಿಗಣಿಸಿ ಈ ನೇಮಕಾತಿ ಮಾಡಲಾಗಿದೆ.
ಶ್ರೀಮನ್ ನಿರಂಜನ ಜಗದ್ಗುರು ಪಂಚಮ ಡಾ. ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು ಸಿದ್ಧಸಂಸ್ಥಾನಮಠ ನಿಡಸೋಸಿ ಇಂದು ಶ್ರೀಮಠದಲ್ಲಿ ಅವರನ್ನು ಸತ್ಕರಿಸಿ ಆಶೀರ್ವದಿಸಿದರು. ಇದು ಈ ಭಾಗದ ವೀರಶೈವ ಲಿಂಗಾಯತ ಸಮಾಜದ ಕಾನೂನ ತಜ್ಞರೊಬ್ಬರಿಗೆ ಸರ್ಕಾರ ನೀಡಿದ ಬಹುದೊಡ್ಡ ಜವಾಬ್ದಾರಿಯಾಗಿದೆ ಎಂದು ಶ್ರೀಗಳು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಇಂಜಿನೀಯರಿಂಗ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಸಿ.ಕಮತೆ ಹಾಗೂ ಶ್ರೀಮಠದ ಭಕ್ತಾದಿಗಳು ಉಪಸ್ಥಿತರಿದ್ದರು.


