ಬೆಂಗಳೂರು:ಜ,31- ಬಳ್ಳಾರಿಯಲ್ಲಿ ಕಾಂಗ್ರೆಸ್ ಶಾಸಕರ ಗೂಂಡಾರಾಜ್ಯ ನಡೆಯುತ್ತಿದ್ದು, ಆ ಶಾಸಕರ ಬಗ್ಗೆ ಮಾತನಾಡಿದರೆ ತಾವೂ ಟಾರ್ಗೆಟ್ ಆಗುವ ಆತಂಕ ಇದೆ. ಅದಕ್ಕಾಗಿ ನಮಗೆ ರಕ್ಷಣೆ ಬೇಕೆಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ನಿನ್ನೆ ಪರಿಷತ್ತಿನಲ್ಲಿ ಮನವಿ ಮಾಡಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ಮಾತನಾಡಿ, ಬಳ್ಳಾರಿಯು ಡ್ರಗ್ಸ್, ಗಲಭೆ, ಗ್ಯಾಂಬ್ಲಿಂಗ್ ಅಡ್ಡೆಯಾಗಿದೆ. ಶಾಸಕರ ವಿರುದ್ಧ ಮಾತನಾಡಿದ್ದಕ್ಕೆ ಟಾರ್ಗೆಟ್ ಆಗುವ ಆತಂಕವಿದೆ. ಹೀಗಾಗಿ ನನಗೆ ರಕ್ಷಣೆ ನೀಡಬೇಕು ಎಂದರು. ಪ್ರತಿಮೆಯನ್ನು ಸರ್ಕಲ್ನಲ್ಲಿ ಸ್ಥಾಪಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶವಿದ್ದರೂ ಮಹರ್ಷಿ ವಾಲ್ಮೀಕಿಯವರ ಪ್ರತಿಮೆ ಪ್ರತಿಷ್ಠಾಪನೆಗೆ ಅನುಮತಿ ಯಾರು ಕೊಟ್ಟಿದ್ದಾರೆ. ಪ್ರತಿಮೆ ಅನಾವರಣಕ್ಕೆ ಅನುದಾನ ನೀಡಲು ಸರ್ಕಾರದ ನಿಯಮಾವಳಿಯಲ್ಲಿ ಅವಕಾಶವಿದೆಯೇ ಎಂದು ಪ್ರಶ್ನಿಸಿದ್ದಾರೆ.


