ಹುನಗುಂದ; ಯಾರೂ ಹಸಿವಿನಿಂದ ಬಳಲಬಾರದು ಹಸಿವು ಮುಕ್ತ ರಾಜ್ಯ ಆಗಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿ ಸದ್ದರಾಮಯ್ಯನವರು ಅನ್ನಭಾಗ್ಯ ಯೊಜನೆಯಡಿ ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ೧೦ ಕೆಜಿ ಪಡಿತರ ಅಕ್ಕಿ ನೀಡುತ್ತಿದೆ ಎಂದು ಪಂಚ ಗ್ಯಾರಂಟಿ ಯೋಜನೆಯ ತಾಲೂಕ ಅಧ್ಯಕ್ಷ ಮುತ್ತಣ್ಣ ಕಲಗೋಡಿ ಹೇಳಿದರು.
ಇಲ್ಲಿನ ಬಸವ ಮಂಟಪದಲ್ಲಿ ತಾಲೂಕ ಪಂಚಾಯತ್ ಮತ್ತು ಪುರಸಭೆ ಹುನಗುಂದ ಸಹಯೋಗದಲ್ಲಿ ನಡೆಸಿದ ತಾಲೂಕಾ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮೀತಿಯಿಂದ ನಡೆಸಿದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತ ಪಂಚ ಗ್ಯಾರಂಟಿಯಿಂದ ಯಾರೊಬ್ಬ ಅರ್ಹ ಫಲಾನುಭವಿಗಳು ವಂಚಿತರಾಬಾರದು ಎಂಬುದು ಸರ್ಕಾರ ಉದ್ದೇಶ. ಈ ಹಿನ್ನೆಲೆ ಅವಳಿ ತಾಲೂಕಿನ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಪರಿಶೀಲನಾ ಸಭೆ ನಡೆಸಲಾಗುತ್ತದೆ. ಯಾವುದೆ ಅಧಿಕಾರಿಗಳ ನಿರ್ಲಕ್ಷ ಅಥವಾ ದಾಖಲೆಗಳ ವಿಳಂಬ ಹೀಗೆ ವಿನಾಕಾರಣ ಫಲಾನುಭವಿಗಳಿಗೆ ವಿವಿಧ ಯೋಜನೆಯ ಲಾಭ ತಲುಪದೆ ಇದ್ದಲ್ಲಿ, ಅಂಥವರು ಸಂಬಂಧಿಸಿದ ಅಧಿಕಾರಿಗಳ ಮತ್ತು ಸಮೀಪದ ಅಂಗನವಾಡಿ ಕೇಂದ್ರದಲ್ಲಿ ತಮ್ಮ ಸಮಸ್ಯೆ ಕುರಿತು ತಿಳಿಸಿದಾಗ ಅವರು ಅನ್ವಯಿಸುವ ಇಲಾಖೆಗೆ ಮಾಹಿತಿ ನೀಡಿ ತಮಗೆ ಯೋಜನೆಯ ತಲುಪುವಂತೆ ಮಾಡುತ್ತಾರೆ ಎಂದರು.
ಕೆಲವೊಂದು ಪಡಿತರ ಅಂಗಡಿಗಳಲ್ಲಿ ಫಲಾನುಭವಿಗಳಿಗೆ ಸರ್ಕಾರಿ ನಿಯಮಕ್ಕಿಂತ ಕಡಿಮೆ ಪಡಿತರ ನೀಡುವದು ಮಾಹಿತಿ ಬಂದಿದೆ. ಅಂತಹ ಅಂಗಡಿಗಳಿಗೆ ತಕ್ಷಣ ನೋಟೀಸ್ ನೀಡುವಂತೆ ಅಧಿಕಾರಿ ವರ್ಗಕ್ಕೆ ಮುತ್ತಣ್ಣ ಕಲಗೋಡಿ ತಿಳಿಸಿ, ಪಡಿತರು ಸಹಿತ ಅನ್ನಭಾಗ್ಯ ಯೋಜನೆ ಅಡಿ ಪಡೆದ ಅಕ್ಕಿಗಳನ್ನು ಮರಾಟ ಮಾಡುವದು ಮತ್ತು ಅದನ್ನು ಪಡೆದು ಕಾಳಸಂತೆಯಲ್ಲಿ ಮಾರಾಟ ಮಾಡುವದು ಕಂಡು ಬಂದಲ್ಲಿ ಅಂತಹವವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವದೆಂದು ಕಲಗೋಡಿತಿಳಿಸಿದರು.
ಮುಖಂಡ ಮಹಾಂತೇಶ ಅವಾರಿ ಮತ್ತು ವಿಜಯಮಹಾಂತೇಶ ಗದ್ದನಕೇರಿ ಮಾತನಾಡಿ ಸರ್ಕಾರ ನೀಡುವ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳು ಹಕ್ಕಿನಿಂದ ಪಡೆಯುತ್ತಿದ್ದಾರೆ. ಆದರೆ ಸಾರಿಗೆ ಇಲಾಖೆ ಸಿಬ್ಬಂದಿ ಶಕ್ತಿ ಯೋಜನೆ ಪಡೆಯುವ ಫಲಾನುಭವಿಗಳಿಗೆ ಎಲ್ಲೊ ಒಂದು ಕಡೆ ದುರ್ವರ್ಥನೆಯ ನಡೆ ಕಾಣುತ್ತಿದೆ. ಹಾಗಾಗದಂತೆ ಇಲಾಖೆ ಮೇಲಾಧಿಕಾರಿಗಳು ಗಮನಿಸಬೇಕು ಎಂದರು. ಆಹಾರ ಇಲಾಖೆಯ ಆಹಾರ ನಿರೀಕ್ಷ ರಾಜಶೇಖರ ತುಂಬಗಿ ಮಾತನಾಡಿ ಆಹಾರ ಇಲಾಖೆಗೆ ಸರ್ಕಾರ ಅನ್ನಸುವಿಧ ಎಂಬ ಹೊಸ ಯೋಜನೆ ನೀಡಿದೆ. ೭೫ವರ್ಷ ಮೇಲ್ಪಟ್ಟು ಒಂಟಿ ಮಹಿಳೆಯರಿಗೆ ಈ ಯೋಜನೆ ಅನ್ವಯವಾಗುತ್ತಿದೆ. ಹುನಗುಂದ ತಾಲೂಕಿನಲ್ಲಿ ೧೩೬ ಫಲಾನುಭವಿಳಿದ್ದು ಅವರ ವಿವರವನ್ನು ಪಡಿತರ ಅಂಗಡಿಗಳಿಗೆ ಈಗಾಗಲೆ ನೀಡಿಲಾಗಿದೆ. ಪಡಿತರ ಅಂಗಿಡಿಯವರು ಅವರ ಮನೆಗೆ ಹೋಗಿ ಬೈಯೊ ಮೆಟ್ರಿಕ್ ಪಡೆದು ಪಡಿತರ ಹಂಚಬೇಕೆಂದು ತುಂಬಗಿ ಸಭೆಗೆ ತಿಳಿಸಿದರು. ಗ್ಯಾರಂಟಿ ಯೋಜನೆ ಸದಸ್ಯರಾದ ಭೀಮಸಿ ಯರಝೇರಿ, ಶ್ರಿಕಾಂತ ಹಿರೇಮಠ, ಯಾಸೀನ್ ತಾಳಿಕೋಟಿ, ಶ್ರಿಕಾಂತ ಚಲವಾದಿ, ಸುರೇಶ ಹಳಪೇಟಿ, ಸುಲೋಚನಾ ನೆರಬೆಂಚಿ, ಮುಖಂಡರಾದ ಮಲ್ಲು ಹೂಗಾರ, ಸಂಜೀವ ಜೋಶಿ, ಶಿವಾನಂದ ಕಂಠಿ, ವಿಜಯಮಹಾಂತೇಶ ಗದ್ದನಕೇರಿ, ನೀಲಪ್ಪ ತಪೇಲಿ, ತಾಪಂ ಇಒ ಮುರಳೀಧರ ದೇಶಪಾಂಡೆ, ತಾಪಂ ಸಹಾಯಕ ನಿರ್ದೇಶಕ ಮಹಾಂತೇಶ ಚಲವಾದಿ ಇದ್ದರು.


