ವಾಷಿಂಗ್ಟನ್: ಜಾಗತಿಕ ಮಟ್ಟದಲ್ಲಿ ಸಂಚಲನ ಸೃಷ್ಟೀಸಿದ್ದ ಜೆಫ್ರಿ ಎಪ್‌ಸ್ಟೀನ್ ಫೈಲ್. ದಶಕಗಳ ಕಾಲ ನಡೆದ ವ್ಯವಸ್ಥಿತ ಲೈಂ*ಗಿಕ ಶೋಷಣೆಯ ಕರಾಳ ಮುಖವನ್ನು ಜಗತ್ತಿನ ಮುಂದೆ ತೆರೆದಿಟ್ಟಿತ್ತು. ಇದೀಗ ಈ ಫೈಲ್ ಅನ್ನು ನ್ಯಾಯಾಂಗ ಇಲಾಖೆ ರಿಲೀಸ್ ಮಾಡಿದೆ.
ಅಮೆರಿಕದ ಲೈಂ*ಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ಗೆ ಸಂಬಂಧಿಸಿದ 30 ಲಕ್ಷ ಪುಟಗಳ ದಾಖಲೆಗಳನ್ನು ಅಮೆರಿಕ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದೆ ಎಂದು ಯುಎಸ್ ಡೆಪ್ಯೂಟಿ ಅಟಾರ್ನಿ ಜನರಲ್ ಟಾಡ್ ಬ್ಲಾಂಚೆ ಅವರು ಶುಕ್ರವಾರ ಘೋಷಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯುಎಸ್ ಡೆಪ್ಯೂಟಿ ಅಟಾರ್ನಿ ಜನರಲ್ ಟಾಡ್ ಬ್ಲಾಂಚೆ ಅವರು, 2,000 ಕ್ಕೂ ಹೆಚ್ಚು ವಿಡಿಯೊಗಳನ್ನು ಮತ್ತು 1,80,000 ಚಿತ್ರಗಳನ್ನು ಇದು ಹೊಂದಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಇನ್ನಷ್ಟು ಜಾಗತಿಕ ಮಟ್ಟದ ಉದ್ಯಮಿಗಳು, ರಾಜಕಾರಣಿಗಳು, ಪ್ರಭಾವಿಗಳ ಬಂಡವಾಳ ಬಯಲಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಕೋರ್ಟ್ ಸೂಚನೆ ಮೇರೆಗೆ ಆತನ ಕಡತಗಳಲ್ಲಿರುವ ಎಲ್ಲ ಬಾಕಿ ಫೋಟೋ, ವಿಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಕಳೆದ ತಿಂಗಳೇ ಟ್ರಂಪ್ ಸರ್ಕಾರ ಘೋಷಿಸಿತ್ತು. ಇದೀಗ ಅಮೆರಿಕ ನ್ಯಾಯಾಂಗ ಇಲಾಖೆ ಎಲ್ಲಾ ದಾಖಲೆಗಳನ್ನು ರಿಲೀಸ್ ಮಾಡಿದೆ.
ಜಗತ್ತಿನಲ್ಲೇ ಅತ್ಯಂತ ಕರಾಳ ಅಪರಾಧಗಳಲ್ಲಿ ಒಂದು ಎನಿಸಿಕೊಂಡಿರುವ ಜೆಫ್ರಿ ಎಪ್ಸ್ಟೀನ್ ಲೈಂಗಿಕ ಅಪರಾಧ ಪ್ರಕರಣದಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ಲೈಂಗಿಕ ದೌರ್ಜನ್ಯಕ್ಕೆ ಜಾಗತಿಕ ಮಟ್ಟದ ರಾಜಕಾರಣಿಗಳು, ಉದ್ಯಮಿಗಳು, ರಾಜಮನೆತನದವರು, ಶ್ರೀಮಂತ ಹೂಡಿಕೆದಾರರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆಂಬ ಆರೋಪವಿದೆ. ಈ ಕುರಿತು ಈಗಾಗಲೇ ಹಲವು ಜನರ ಹೆಸರುಗಳು ಬಹಿರಂಗ ಆಗಿದ್ದು, ಇದರಲ್ಲಿ ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್ , ಬಿಲ್ ಕ್ಲಿಂಟನ್ , ಮೈಕಲ್ ಜಾಕ್ಸನ್, ಮಾಜಿ ಪ್ರಿನ್ಸ್ ಆಂಡ್ರ್ಯೂ ಹೀಗೆ ಪಟ್ಟಿ ಬೆಳೆಯುತ್ತದೆ.

ಈ ಹಗರಣದ ಕುರಿತ ಪಟ್ಟಿಯನ್ನು ಈಗ ಅಮೆರಿಕಾದ ನ್ಯಾಯಂಗ ಇಲಾಖೆ ಬಿಡುಗಡೆ ಮಾಡಿದ್ದು, ಅದರಲ್ಲಿ ಮತ್ತೆ ಟ್ರಂಪ್, ಮಸ್ಕ್ ಸೇರಿದಂತೆ ಬಿಲ್ ಗೇಟ್ಸ್ , ಹೊವಾರ್ಡ್ ಲುಟ್ನಿಕ್, ಬ್ರಿಟಿಷ್ ಬಿಲಿಯನೇರ್ ರಿಚರ್ಡ್ ಬ್ರಾನ್ಸನ್ ಸೇರಿದಂತೆ ಹಲವರ ಹೆಸರುಗಳು ಕಾಣಿಸಿಕೊಂಡಿದೆ.
ಜೆಫ್ರಿ ಎಪ್‌ಸ್ಟೀನ್ 2008ರಲ್ಲಿ ಮಕ್ಕಳ ಲೈಂ*ಗಿಕ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದರು. ಇನ್ನು ಎಪ್‌ಸ್ಟೀನ್ ಫೈಲ್‌ನಲ್ಲಿ 200ಕ್ಕೂ ಅಧಿಕ ಪ್ರಮುಖ ವ್ಯಕ್ತಿಗಳ ಹೆಸರಿದ್ದು, ಇವರೆಲ್ಲಾ ಮಹಿಳೆಯರು ಹಾಗೂ ಅಪ್ರಾಪ್ತ ಬಾಲಕಿಯರ ಮೇಲೆ ಕ್ರೂರ ಲೈಂಗಿಕ ಶೋಷಣೆ ನಡೆಸಿರುವುದು ಈ ಫೈಲ್‌ನಲ್ಲಿ ದಾಖಲಾಗಿದೆ ಎನ್ನಲಾಗುತ್ತಿದೆ.


