ಚನ್ನಮ್ಮನ ಕಿತ್ತೂರು: ಕಿತ್ತೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ (ಕಿನಾವಿವ) ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಶಂಕರ ವಳಸಂಗ ಹಾಗೂ ಉಪಾಧ್ಯಕ್ಷರಾಗಿ ಜಗದೀಶ ಘಟ್ನಟ್ಟಿ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಈ ಹಿಂದೆ ಚೇರಮನ್ ಆಗಿದ್ದ ಜಗದೀಶ ವಸ್ತ್ರದ ಹಾಗೂ ವೈಸ್-ಚೇರಮನ್ ಆಗಿದ್ದ ವಿಶ್ವನಾಥ ಶೆಟ್ಟರ್ ಅವರು ತಮ್ಮ ಸ್ಥಾನಗಳಿಗೆ ನೀಡಿದ್ದ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಇಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಅವಿರೋಧವಾಗಿ ಈ ಮಹತ್ವದ ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದ ನಿರ್ಗಮಿತ ಚೇರಮನ್ ಜಗದೀಶ ವಸ್ತ್ರದ ಅವರು, ಹೊಸ ಸಾರಥಿಗಳ ನೇತೃತ್ವದಲ್ಲಿ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿಗಳಾದ ಜಗದೀಶ ಬಿಕ್ಕಣ್ಣವರ, ಆಡಳಿತ ಮಂಡಳಿಯ ಸದಸ್ಯರಾದ ಎನ್.ವ್ಹಿ. ತಡಕೋಡ, ಎಮ್.ಬಿ. ದಳವಾಯಿ, ಎನ್.ಎಸ್. ಹಿರೇಮಠ, ವ್ಹಿ.ಆರ್. ಪಾಟೀಲ, ಯ.ಡಿ. ಭಾರತಿ, ಡಿ.ಎಲ್. ಪಾಟೀಲ ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ನಾಗರಾಜ ಎಚ್.ಕೆ, ಎಮ್.ಎಸ್. ಪಾಟೀಲ, ಐ.ಕೆ. ಅಂಗಡಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಶಂಕರ ವಳಸಂಗ ಹಾಗೂ ಉಪಾಧ್ಯಕ್ಷ ಜಗದೀಶ ಘಟ್ನಟ್ಟಿ ಅವರನ್ನು ಸರ್ವರು ಅಭಿನಂದಿಸಿದರು.
ಪೋಟೋ ಶೀರ್ಷಿಕೆ: ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಶಂಕರ ವಳಸಂಗ ಹಾಗೂ ಉಪಾಧ್ಯಕ್ಷ ಜಗದೀಶ ಘಟ್ನಟ್ಟಿ ಅವರನ್ನು ಸರ್ವರು ಅಭಿನಂದಿಸಿದರು.


