ಬಳ್ಳಾರಿ, ಜ.31.; ನಗರದ ನಾರಾಯಣರಾವ್ ಪಾರ್ಕಿನಲ್ಲಿ ಇಂದು ಮೇಯರ್ ಪಿ. ಗಾದೆಪ್ಪ ಹಾಗೂ ಪಾಲಿಕೆಯ ಆಯುಕ್ತ ಪಿ.ಎಸ್.ಮಂಜುನಾಥ ಅವರು ನಗರದ ವಾರ್ಡ್ ಗಳಲ್ಲಿ ನೀರು ಬಿಡುವ ಎಲ್ಲಾ ವಾಲ್ವ್ ಮೆನ್ ಹಾಗೂ ಸಂಬಂಧ ಪಟ್ಟ ಇಂಜಿನಿಯರ್ಗಳ ಸಭೆ ನಡೆಸಿ. ಮುಂಬರುವ ಬೇಸಿಗೆಯ ದಿನದಲ್ಲಿ ನೀರಿನ ಸಮಸ್ಯೆ ಬರದಂತೆ, ನೀರು ಪೋಲ್ ಆಗದಂತೆ ನೀರು ಸೋರಿಕೆ ಸಮಸ್ಯೆ ಇದ್ದರೆ ಕೂಡಲೇ ಸಂಬಂಧಪಟ್ಟ ಇಂಜಿನಿಯರ್ ಗೆ ಮಾಹಿತಿ ಕೊಟ್ಟು ದುರಸ್ತಿ ಕೆಲಸ ಮಾಡಿಸಿಕೊಳ್ಳಲು ಸೂಚಿಸಿದರು.
ಜೊತೆಗೆ ಸ್ಥಾಯಿ ಸಮಿತಿ ಅಧ್ಯಕ್ಷರುಗಳ ಉಪಸ್ಥಿತಿಯಲ್ಲಿ ನಿನ್ನೆ ದಿನ ಪಾಲಿಕೆಯ ಎಲ್ಲಾ ಅಭಿಯಂತರರೊಂದಿಗೆ ಸಭೆ ನಡೆಸಿ ಬಳ್ಳಾರಿ ನಗರಕ್ಕೆ ಬೇಸಿಗೆಯಲ್ಲಿ ಕುಡಿಯುವ ನೀರು ಸರಬರಾಜು ಮಾಡುವುದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು.
ಟಿ.ಬಿ ಡ್ಯಾಮ್ ನಲ್ಲಿ ಗೇಟ್ ಅಳವಡಿಸುವ ಕಾರ್ಯ ನಡೆಯುತ್ತಿರುವುದರಿಂದ ನೀರಿನ್ನು ಮಿತವಾಗಿ ಬಳಸಲು ಸಾರ್ವಜನಿಕರಿಗೆ ಕೋರಲು ಹಾಗೂ ಬೇಸಿಗೆ ಕಾಲದಲ್ಲಿ ನಾಗರೀಕರಿಗೆ ತೊಂದರೆಯಾಗದ ರೀತಿಯಲ್ಲಿ ಸಮರ್ಪಕವಾಗಿ ನೀರು ಸರಬರಾಜು ನಿರ್ವಹಣೆ ಮಾಡಲು ಕೆ.ಯು.ಡಬ್ಲು.ಎಸ್ ಮತ್ತು ಡಿ.ಬಿ.ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಹಾಗೂ ಪಾಲಿಕೆಯ ಅಭಿಯಂತರರಿಗೆ ಸೂಚಿಸಿದರು. ಹಾಗೂ ನೀರು ಎಲ್ಲಿ ಪೋಲಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಯಾವುದೇ ವಾರ್ಡಿನಲ್ಲಿ ನೀರಿನ ಪೈಪುಗಳು ಲೀಕಗಳು ಕಂಡ ಬಂದರೆ ಆ ವಾರ್ಡಿನ ವಾಲ್ ಮ್ಯಾನೇ ಹಾಗೂ ಇಂಜಿನಿಯರ್ ಜವಾಬ್ದಾರನಾಗುತ್ತಾನೆ. ಕೂಡಲೇ ದುರಸ್ತಿ ಮಾಡಿಸಿಕೊಳ್ಳಬೇಕು ಇಲ್ಲವಾದಲ್ಲಿ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೇಯರ್ ಎಚ್ಚರಿಕೆ ನೀಡಿದ್ದಾರೆ


