ಕುಡಚಿ; ಕುಡಚಿ ಸ್ಟೇಶನ್ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಸದಸ್ಯ, ವಿಶಾಲ ಶಿಂದೆ ಅವರು ಇತ್ತೀಚೇಗೆ ಅಪ್ಘಾತದಲ್ಲಿ ಸಾವನ್ನಪ್ಪಿದ ಹಿನ್ನೇಲೆ , ಅವರ ಕುಟುಂಬದವರಿಗೆ ಸಂಘದ ವತಿಯಿಂದ ೨ ಲಕ್ಷ ರೂ, ಪರಿಹಾರದ ಚೆಕ್ಕನ್ನು ಬಿಡಿಸಿಸಿ ಬ್ಯಾಂಕ ನಿರ್ದೇಶಕ ಅಪ್ಪಸಾಹೇಬ ಕುಲಗುಡೆ ಅವರು ವಿತರಿಸಿದರು,
ಬಳೆಕ ಮಾತನಾಡಿದ ಅವರು ಬೆಳಗಾವಿ ಬಿಡಿಸಿಸಿ ಬ್ಯಾಂಕ, ಯಾವತ್ತು ರೈತರ ಜತೆ ಇದ್ದು ಪ್ರತಿ ಕ್ಷಣದಲ್ಲೂ, ಕಷ್ಟದಲ್ಲೂ ಕೂಡಾ ರೈತರ ಜೊತೆ ಇದ್ದು ಕೈಹಿಡಿದು ರೈತರ ಕುಟುಂಬಗಳಿಗೆ ನೆರವಾಗಿ ನಿಲ್ಲುತ್ತದೆ ಎಂದು ಬಿಡಿಸಿಸಿ ಬ್ಯಾಂಕ ನಿರ್ದೆಶಕ ಅಪ್ಪಾಸಾಹೇಬ ಕುಲಗುಡೆ ತಿಳಿಸಿದರು,
ಬಿಡಿಸಿಸಿ ಬ್ಯಾಂಕ ಉಪಪ್ರಧಾನ ವ್ಯೆವಸ್ಥಪಾಕ ಶಿವಪುತ್ರ ಬಾಗೆವಾಡಿ, ಮಾತನಾಡಿ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯವರಿಗೆ, ಆರೋಗ್ಯ ವಿಮೆ, ಅಪಘಾತ ವಿಮೆ, ಜೀವ ವಿಮೆ ಯೊಜನೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು,
ಕುಡಚಿ ಸ್ಟೇಶನ್ ವಿವಿದೋದ್ಧೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಇ,ಸ್ಟಾಂಪ ಸೇವೆಯನ್ನು ಕೂಡಾ ಪ್ರಾರಂಭಿಸಿದರು,
ಉಪಪ್ರಧಾನ ವ್ಯೆವಸ್ಥಪಾಕ ಶಿವಪುತ್ರ ಬಾಗೆವಾಡಿ, ಸಂಘದ ಅಧ್ಯಕ್ಷ ಅಲ್ಲಾವುದ್ದಿನ್ ರೋಹಿಲೆ, ಇಸರಾಮ್ಮದ ಸಜ್ಜನ್, ಜಾಕೀರಹುಸೇನ ಬಿಚ್ಚು, ಅಕಬರಅಲಿ ಮಾರುಫ, ಬಿಡಿಸಿಸಿ ಬ್ಯಾಂಕ ತಾಲುಕ ನಿಯಂತ್ರಣಾಧಿಕಾರಿ ಪ್ರಕಾಶ ರಾಯಣ್ಣವರ, ಬ್ಯಾಂಕ ನೀರಿಕ್ಷಕರಾದ ಶ್ರೀಧರ ಪಾಟೀಲ, ಕಾರ್ಯದರ್ಶಿ ಪ್ರಮೋದ ಬಾಲೋಜಿ, ಪ್ರಭಾವತಿ ಶಿಂದೆ, ಹಾಗೂ ವಿವಿಧರು ಉಪಸ್ಥಿತರಿದ್ದರು,


